Asianet Suvarna News Asianet Suvarna News

ಮೇರಿ ಕೋಮ್’ಗೆ ಒಲಿದ ಗೌರವ ಡಾಕ್ಟರೇಟ್

ಟ್ವೀಟರ್‌ನಲ್ಲಿ ಸಂಭ್ರಮ ಹಂಚಿಕೊಂಡ ಮೇರಿ ಕೋಮ್, ‘ಡಾಕ್ಟರೇಟ್ ಗೌರವ ಪಡೆಯುತ್ತಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ. ಈ ಗೌರವ ನೀಡಿದ್ದಕ್ಕೆ ಧನ್ಯವಾದ’ ಎಂದು ಬರೆದಿದ್ದಾರೆ. 

Hard work will help one to be like Mary Kom
Author
New Delhi, First Published Jan 14, 2019, 10:51 AM IST

ನವದೆಹಲಿ[ಜ.14]: 6 ಬಾರಿ ವಿಶ್ವ ಚಾಂಪಿಯನ್, ರಾಜ್ಯಸಭಾ ಸದಸ್ಯೆ, ದಿಗ್ಗಜ ಬಾಕ್ಸರ್ ಮೇರಿ ಕೋಮ್‌ಗೆ ಅಸ್ಸಾಂನ ಕಾಜಿರಂಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ಕ್ರೀಡೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮೇರಿಯ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 

ಟ್ವೀಟರ್‌ನಲ್ಲಿ ಸಂಭ್ರಮ ಹಂಚಿಕೊಂಡ ಮೇರಿ ಕೋಮ್, ‘ಡಾಕ್ಟರೇಟ್ ಗೌರವ ಪಡೆಯುತ್ತಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ. ಈ ಗೌರವ ನೀಡಿದ್ದಕ್ಕೆ ಧನ್ಯವಾದ’ ಎಂದು ಬರೆದಿದ್ದಾರೆ. ಸೋನೋವಾಲ್ ಸಹ ಟ್ವೀಟ್ ಮಾಡಿದ್ದು, ‘ವಂಡರ್ ಲೇಡಿ ಮೇರಿಗೆ ಅತ್ಯುನ್ನತ ಗೌರವ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮೇರಿ ಈ ಗೌರವಕ್ಕೆ ಖಂಡಿತವಾಗಿಯೂ ಅರ್ಹರು’ ಎಂದು ಬರೆದಿದ್ದಾರೆ. 

2008ರ ಬೀಜಿಂಗ್ ಒಲಿಂಪಿಕ್ಸ್ ಚಿನ್ನ ವಿಜೇತ ಶೂಟರ್ ಅಭಿನವ್ ಬಿಂದ್ರಾಗೂ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಇತ್ತೀಚೆಗಷ್ಟೇ ಮೇರಿ ಬಾಕ್ಸಿಂಗ್ ಶ್ರೇಯಾಂಕದಲ್ಲಿ ನಂಬರ್ 01 ಸ್ಥಾನಕ್ಕೇರಿ ಐತಿಹಾಸಿಕ ದಾಖಲೆ ಬರೆದಿದ್ದರು.

Follow Us:
Download App:
  • android
  • ios