Asianet Suvarna News Asianet Suvarna News

ಮಹಿಳಾ ಹಾಕಿ: ವನಿತೆಯರ ತಂಡಕ್ಕೆ ಮತ್ತೆ ನಿರಾಸೆ

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದ ನವ್‌'ಜೋತ್ ಕೌರ್, ಭಾರತ ಪರ 100ನೇ ಪಂದ್ಯವನ್ನಾಡಿದರು.

Fourth defeat in row for Indian women hockey team

ಹ್ಯಾಮಿಲ್ಟನ್(ಮೇ.19): ನ್ಯೂಜಿಲೆಂಡ್‌'ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಹೀನಾಯ ಪ್ರದರ್ಶನ ಮುಂದುವರಿದಿದ್ದು, 5 ಟೆಸ್ಟ್ ಪಂದ್ಯಗಳ ಸರಣಿಯ 4ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರು 0-3 ಗೋಲುಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ.

ಮೊದಲ ಪಂದ್ಯದಲ್ಲಿ 1-4 ಗೋಲುಗಳಿಂದ ಪರಾಭವಗೊಂಡಿದ್ದ ತಂಡ, 2ನೇ ಪಂದ್ಯದಲ್ಲಿ 2-8 ಗೋಲುಗಳ ಹೀನಾಯ ಸೋಲು ಅನುಭವಿಸಿತ್ತು. 3ನೇ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ್ದ ತಂಡ 2-3 ಗೋಲುಗಳಿಂದ ಕಿವೀಸ್ ವಿರುದ್ಧ ಪ್ರಬಲ ಪೈಪೋಟಿ ನೀಡಿ ಸೋಲೊಪ್ಪಿಕೊಂಡಿತು. ಈ ಮೂಲಕ ಸರಣಿಯಲ್ಲಿ ಪುಟಿದೇಳುವ ಲಕ್ಷಣ ನೀಡಿತ್ತು. ಆದರೆ, 4ನೇ ಪಂದ್ಯದಲ್ಲಿ 0-3 ಅಂತರದಿಂದ ಸೋಲುವ ಮೂಲಕ ಮತ್ತೆ ನಿರಾಸೆ ಮೂಡಿಸಿತು.

ನ್ಯೂಜಿಲೆಂಡ್ ಪರ ರಾಚೆಲ್ ಮೆಕ್ಯಾನ್ (14ನೇ ನಿ. ಮತ್ತು 26ನೇ ನಿ.) ಎರಡು ಹಾಗೂ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಟೆಸ್ಸಾ ಜೋಪ್ಪ್ (17ನೇ ನಿ) ಒಂದು ಗೋಲು ಬಾರಿಸಿದರು.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದ ನವ್‌'ಜೋತ್ ಕೌರ್, ಭಾರತ ಪರ 100ನೇ ಪಂದ್ಯವನ್ನಾಡಿದರು.

Follow Us:
Download App:
  • android
  • ios