Asianet Suvarna News Asianet Suvarna News

ಬೆಳಕಿಗಿಂತ ವೇಗ ಧೋನಿ ಕೈ ಚಳಕ..! ಧೋನಿ ದಿ ರಿಯಲ್ ಬಾಸ್..!

37 ವರ್ಷದ ಧೋನಿ ಇಂದಿಗೂ ಅದೇ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದು ಯುವಕರು ನಾಚಿಸುವಂತೆ ವಿಕೆಟ್ ನಡುವೆ ಓಡುತ್ತಾರೆ. ಇನ್ನು ವಿಕೆಟ್’ಕೀಪಿಂಗ್ ಬಗ್ಗೆಯಂತೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಧೋನಿ ವಿಕೆಟ್’ಕೀಪಿಂಗ್ ಮಾಡುತ್ತಿರುವಾಗ ಬ್ಯಾಟ್ಸ್’ಮನ್ ಅಪ್ಪಿತಪ್ಪಿ ಕ್ರೀಸ್ ಬಿಟ್ಟು ಮುಂದೆ ಹೋದರೆ ಮುಗಿಯಿತು ಅಂತಾನೇ ಅರ್ಥ. ಯಾಕೆಂದ್ರೆ ಧೋನಿ ಅಷ್ಟರಲ್ಲಾಗಲೇ ವಿಕೆಟ್ ಬೇಲ್ಸ್ ಎಗರಿಸಿಬಿಟ್ಟಿರುತ್ತಾರೆ.

Cricket MS Dhoni world record lightning quick stumping against the West Indies
Author
Maharashtra, First Published Oct 30, 2018, 1:46 PM IST

ಮುಂಬೈ[ಅ.30]: ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ ಹಾಗೆಯೇ ಚಾಣಾಕ್ಷ ವಿಕೆಟ್'ಕೀಪರ್ ಎನ್ನುವ ಬಗ್ಗೆ ಎರಡು ಮಾತಿಲ್ಲ. ಐಸಿಸಿ ಟೂರ್ನಿಯ ಪ್ರತಿಷ್ಠಿತ ಮೂರು ಕಪ್[ಟಿ20, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ] ಗೆದ್ದುಕೊಟ್ಟ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿರುವ ಧೋನಿ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ಆದರೆ ಅವರ ಚುರುಕುತನ ಮಾತ್ರ ಇನ್ನೂ ಕುಗ್ಗಿಲ್ಲ.

ಹೌದು, 37 ವರ್ಷದ ಧೋನಿ ಇಂದಿಗೂ ಅದೇ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದು ಯುವಕರು ನಾಚಿಸುವಂತೆ ವಿಕೆಟ್ ನಡುವೆ ಓಡುತ್ತಾರೆ. ಇನ್ನು ವಿಕೆಟ್’ಕೀಪಿಂಗ್ ಬಗ್ಗೆಯಂತೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಧೋನಿ ವಿಕೆಟ್’ಕೀಪಿಂಗ್ ಮಾಡುತ್ತಿರುವಾಗ ಬ್ಯಾಟ್ಸ್’ಮನ್ ಅಪ್ಪಿತಪ್ಪಿ ಕ್ರೀಸ್ ಬಿಟ್ಟು ಮುಂದೆ ಹೋದರೆ ಮುಗಿಯಿತು ಅಂತಾನೇ ಅರ್ಥ. ಯಾಕೆಂದ್ರೆ ಧೋನಿ ಅಷ್ಟರಲ್ಲಾಗಲೇ ವಿಕೆಟ್ ಬೇಲ್ಸ್ ಎಗರಿಸಿಬಿಟ್ಟಿರುತ್ತಾರೆ. ಧೋನಿ ವಿಕೆಟ್’ಕೀಪಿಂಗ್’ನಲ್ಲಿ ಅಂದಿಗೂ,ಇಂದಿಗೂ ಎಂದೆಂದಿಗೂ ಮಾಸ್ಟರ್ ಪೀಸ್. ಅದಕ್ಕೆ ಸೋಮವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೀಪಿಂಗ್’ನಲ್ಲಿ ಅಂತಹದ್ದೇ ಒಂದು ಚಮತ್ಕಾರ ಮಾಡಿದ್ದಾರೆ. 

ಮಿಂಚಿನ ಸ್ಟಂಪಿಂಗ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

ಪಂದ್ಯದ 28ನೇ ಓವರ್’ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಕ್ರೀಸ್ ತೊರೆದು ಆಡಲು ಹೋದ ಕೀಮೊ ಪೌಲ್ ಕಣ್ಣು ಮಿಟುಕಿಸುವಷ್ಟರಲ್ಲೇ ಸ್ಟಂಪ್ ಮಾಡುವಲ್ಲಿ ರಾಂಚಿ ರ‍್ಯಾಂಬೋ ಯಶಸ್ವಿಯಾಗಿದ್ದರು. ಕೀಮೊ ಅವರನ್ನು ಸ್ಟಂಪ್ ಮಾಡಲು ಧೋನಿ ತೆಗೆದುಕೊಂಡ ಅವಧಿ ಕೇವಲ 0.08 ಸೆಕೆಂಡ್’ಗಳು ಮಾತ್ರ. 

ಈ ಸ್ಟಂಪಿಂಗ್ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಧೋನಿ ಉತ್ತಮಪಡಿಸಿಕೊಂಡರು. ಈ ಮೊದಲು ಧೋನಿ 2016ರಲ್ಲಿ ಮೆಲ್ಬೋರ್ನ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಜಾರ್ಜ್ ಬೈಲಿ ಅವರನ್ನು 0.09 ಸೆಕೆಂಡ್’ಗಳಲ್ಲಿ ಬಲಿಪಡೆದಿದ್ದರು. 
 

Follow Us:
Download App:
  • android
  • ios