Asianet Suvarna News Asianet Suvarna News

ಕಪ್ ನಮ್ದೆ: ಗೋವಾ ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC!

ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು FC ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಗೋವಾ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

Bengalurur FC beat FC goa by 1 goal and clinch the ISL football title
Author
Bengaluru, First Published Mar 17, 2019, 10:25 PM IST

ಮುಂಬೈ(ಮಾ.17): ಬ್ಯಾಡ್ಮಿಂಟನ್ ಲೀಗ್, ಪ್ರೋ ಕಬಡ್ಡಿ ಲೀಗ್ ಬಳಿಕ ಇದೀಗ ಫುಟ್ಬಾಲ್ ಲೀಗ್‌ನಲ್ಲೂ ಬೆಂಗಳೂರು ಟ್ರೋಫಿ ಗೆದ್ದುಕೊಂಡಿದೆ.  ಮುಂಬೈನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು FC ಚಾಂಪಿಯನ್ ಕಿರೀಟ ಅಲಂಕರಿಸಿದೆ.

 

 

ಇದನ್ನೂ ಓದಿ: ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

ಫೈನಲ್ ಪಂದ್ಯದಲ್ಲಿ FC ಗೋವಾ ತಂಡವನ್ನು 1-0 ಅಂತರದಿಂದ ಮಣಿಸಿದ BFC(ಬೆಂಗಳೂರು ಎಫ್‌ಸಿ) ಪ್ರಶಸ್ತಿ ಗೆದ್ದುಕೊಂಡಿತು. ರೋಚಕ 90 ನಿಮಿಷಗಳ ಹೋರಾಟದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು. 116ನೇ  ನಿಮಿಷದಲ್ಲಿ ಬೆಂಗಳೂರು ತಂಡದ ಭಾರತೀಯ ಆಟಗಾರ ರಾಹುಲ್ ಬೆಕೆ ಅದ್ಬುತ ಗೋಲು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

 

 

ಇದನ್ನೂ ಓದಿ: ಮುಜುಗರಕ್ಕೊಳಗಾದ ರಿಯಲ್‌ ಕಾಶ್ಮೀರ್‌ ಜತೆ BFC ಸ್ನೇಹಾರ್ಥ ಪಂದ್ಯ

ಪ್ರಥಮಾರ್ಧದಲ್ಲಿ  ಉಭಯ ತಂಡಗಳು ಗೋಲು ಗಳಿಸಿಲ್ಲ, ಆದರೆ ಮೊದಲ ಅವಧಿ ಅತ್ಯಂತ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು.  ಬೆಂಗಳೂರು ಹಾಗೂ ಗೋವಾಗೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಗೋವಾದ ಗೋಲ್‌ಕೀಪರ್ ನವೀನ್ ಕುಮಾರ್ ಹಾಗೂ ಬೆಂಗಳೂರಿನ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ  ಅದಕ್ಕೆ ಅವಕಾಶ ಕೊಡಲಿಲ್ಲ. 

ಗೋವಾ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದ್ದರೂ, ಬೆಂಗಳೂರಿನ ಡಿಫೆನ್ಸ್ ಅದಕ್ಕೆ ತಕ್ಕ ರೀತಿಯಲ್ಲಿ ಬ್ರೇಕ್ ಹಾಕಿತ್ತು. ಒಂದು ಹಂತದಲ್ಲಿ ಮಿಕು ಹಾಗೂ ಸುನಿಲ್ ಛೆಟ್ರಿ ಬೆಂಗಳೂರು ಪರ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿದ್ದರು. ಇದರೊಂದಿಗೆ ಪ್ರಥಮ ಅವಧಿ ಗೋಲಿಲ್ಲದೆ ಅಂತ್ಯಗೊಂಡಿತು. ದ್ವಿತಿಯಾರ್ಧ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಹಳದಿ ಕಾರ್ಡ್‌ಗಳು ಮೇಳೈಸಿದವು. ಗೋಲಿಗಾಗಿ ಹೋರಾಟ ತೀವ್ರಗೊಂಡಿತು. ಆದರೆ ದ್ವಿತಿಯಾರ್ಧವೂ ಗೋಲಿಲ್ಲದೆ ಅಂತ್ಯಗೊಂಡಿತು.

ಹೆಚ್ಚುವರಿ ಸಮಯದಲ್ಲೂ ಗೋಲುಗಳಿಸುವ ಅವಕಾಶಗಳೆಲ್ಲಾ ಕೈತಪ್ಪಿ ಹೋಗುತ್ತಿತ್ತು. ಆದರೆ ರಾಹುಲ್ ಬೆಕೆ ಬಾರಿಸಿದ ಅದ್ಬುತ ಗೋಲು ಬೆಂಗಳೂರು ಎಫ್‌ಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅಷ್ಟರಲ್ಲೇ ಬೆಂಗಳೂರು ವೆಸ್ಟ್‌ಬ್ಲಾಕ್ ಕ್ಲಬ್ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಶುರುವಾಯಿತು.  ಕಳೆದ ವರ್ಷ ಐಎಸ್‌ಎಲ್ ಟೂರ್ನಿಗೆ ಕಾಲಿಟ್ಟ ಬೆಂಗಳೂರು ಎಫ್‌ಸಿ ಮೊದಲ ಪ್ರಯತ್ನದಲ್ಲೇ ಫೈನಲ್ ಪ್ರವೇಶಿಸ್ತು. ಆದರೆ ಚೆನ್ನೈಯನ್ ಎಫ್‌ಸಿ ವಿರುದ್ಧ ಮುಗ್ಗರಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಇದೀಗ ಪ್ರಶಸ್ತಿ ಬರ ನೀಗಿಸಿಕೊಂಡಿದೆ.

Follow Us:
Download App:
  • android
  • ios