Asianet Suvarna News Asianet Suvarna News

ಎನ್'ಸಿಎ ನವೀಕರಿಸಲು ಬಿಸಿಸಿಐ ಸಿದ್ಧತೆ

ಇದೇ ವರ್ಷ ಸೆಪ್ಟೆಂಬರ್‌'ನಲ್ಲಿ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಅವರನ್ನೊಳಗೊಂಡ ಭಾರತ ತಂಡದ ಆಡಳಿತ ನೂತನ ಎನ್‌'ಸಿಎನಲ್ಲಿ ಅಗತ್ಯವಿರುವ ವ್ಯವಸ್ಥೆಗಳು ಏನು ಎಂಬುದನ್ನು ಪಟ್ಟಿ ಮಾಡಿ, ಬಿಸಿಸಿಐಗೆ ನೀಡಿತ್ತು. ಆ ಪಟ್ಟಿ ಬಹಿರಂಗಗೊಂಡಿದೆ.

BCCI announces revamp of National Cricket Academy

ಬೆಂಗಳೂರು(ಡಿ.13): ಭಾರತೀಯ ಕ್ರಿಕೆಟ್‌'ಗೆ ಹೊಸ ರೂಪ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿರುವ ಬಿಸಿಸಿಐ, ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌'ಸಿಎ) ನವೀಕರಿಸಲು ಸಕಲ ಸಿದ್ಧತೆ ಆರಂಭಿಸಿದೆ.

ನಗರದ ಹೊರವಲಯದ ದೇವನಹಳ್ಳಿ ಬಳಿ 40 ಎಕರೆ ಜಾಗವನ್ನು ಖರೀದಿಸಿರುವ ಬಿಸಿಸಿಐ, ಸದ್ಯ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿರುವ ಎನ್‌'ಸಿಎ ಅನ್ನು ಸ್ಥಳಾಂತರಿಸಲಿದೆ. ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿರುವ ಬಿಸಿಸಿಐ ಇದಕ್ಕಾಗೇ ವಿಶೇಷ ತಂಡವೊಂದನ್ನು ರಚಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಿ ನೂತನ ಎನ್‌'ಸಿಎ ಸ್ಥಾಪಿಸಲು ಬಿಸಿಸಿಐ ನಿರ್ಧರಿಸಿದೆ.

ಇದೇ ವರ್ಷ ಸೆಪ್ಟೆಂಬರ್‌'ನಲ್ಲಿ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ ಅವರನ್ನೊಳಗೊಂಡ ಭಾರತ ತಂಡದ ಆಡಳಿತ ನೂತನ ಎನ್‌'ಸಿಎನಲ್ಲಿ ಅಗತ್ಯವಿರುವ ವ್ಯವಸ್ಥೆಗಳು ಏನು ಎಂಬುದನ್ನು ಪಟ್ಟಿ ಮಾಡಿ, ಬಿಸಿಸಿಐಗೆ ನೀಡಿತ್ತು. ಆ ಪಟ್ಟಿ ಬಹಿರಂಗಗೊಂಡಿದೆ.

ಆಟಗಾರರ ಬೇಡಿಕೆಗಳೇನು?

* ಅಭ್ಯಾಸಕ್ಕೆ 2 ಮೈದಾನ, ಹೊರಾಂಗಣ ಮೈದಾನದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸಿಂಥೆಟಿಕ್, ಹೈಬ್ರೀಡ್ ಹಾಗೂ ಭಾರತೀಯ ಪಿಚ್‌'ಗಳು, ಡ್ರೆಸ್ಸಿಂಗ್ ಕೊಠಡಿ, ಅಧಿಕಾರಿಗಳ ಕೊಠಡಿ, ಒಳಾಂಗಣ ಅಭ್ಯಾಸಕ್ಕೆ ಪಿಚ್, ತಲಾ 2 ಸ್ಪಿನ್, ವೇಗ ಹಾಗೂ ಬ್ಯಾಟಿಂಗ್ ಪಿಚ್‌'ಗಳು.

* ಕ್ಷೇತ್ರರಕ್ಷಣೆ ಅಭ್ಯಾಸಕ್ಕೆ ವಿಶೇಷ ಜಾಗ, ಹಾಕ್-ಐ, ವಿಡಿಯೋ ವಿಶ್ಲೇಷಣೆಗಾಗಿ ಹೈ-ಸ್ಪೀಡ್ ಕ್ಯಾಮೆರಾಗಳು.

* ಒಳಾಂಗಣ ಹಾಗೂ ಹೊರಾಂಗಣ ಜಿಮ್, ಫಿಸಿಯೋಥೆರಪಿ ಕೊಠಡಿ, ವಾಡಾದಿಂದ ಮಾನ್ಯತೆ ಪಡೆದಿರುವ ಔಷಧಾಲಯ, ಕ್ರಿಕೆಟ್ ಪರಿಕರಗಳ ಮಳಿಗೆ.

* ಬೌಲಿಂಗ್ ಮಷಿನ್‌'ಗಳು, ಸ್ಪಿನ್ ಬೌಲಿಂಗ್ ಮಷಿನ್‌'ಗಳು, ಫೀಲ್ಡಿಂಗ್ ಮಷಿನ್‌'ಗಳು, ಒಯ್ಯಬಲ್ಲ ಪಿಚ್‌'ಗಳು, ರಿಕವರಿ ಉಪಕರಣಗಳು, ಕ್ರೀಡಾ ವೈದ್ಯರು, ತರಬೇತುದಾರರು, ಮನೋವಿಜ್ಞಾನಿ, ವೀಡಿಯೋ ವಿಶ್ಲೇಷಕರು.

Follow Us:
Download App:
  • android
  • ios