Asianet Suvarna News Asianet Suvarna News

ಆರ್'ಸಿಬಿ ಸೇರಲು ಮುಂದಾದ ಆಶೀಶ್ ನೆಹ್ರಾ...?

ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಈ ಮೊದಲು ಆರ್‌'ಸಿಬಿಯ ಬೌಲಿಂಗ್ ಕೋಚ್ ಆಗಿದ್ದರು. ಆದರೆ ಲೋಧಾ ಸಮಿತಿ ಶಿಫಾರಸಿನ ಪ್ರಕಾರ, ಭಾರತ ತಂಡದ ಸಹಾಯಕ ಸಿಬ್ಬಂದಿ ಐಪಿಎಲ್‌'ನಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಇನ್ನು ಬೌಲಿಂಗ್ ಕೋಚ್ ಆಗಿದ್ದ ಆಲನ್ ಡೋನಾಲ್ಡ್ ಸಹ ತಂಡ ತೊರೆದಿದ್ದಾರೆ.

Ashish Nehra all set to join Royal Challengers Bangalore as mentor in IPL 2018

ನವದೆಹಲಿ(ಡಿ.11): 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದು, ಹೊಸ ಬೆಳವಣಿಗೆಯೊಂದು ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿದೆ.

ಇತ್ತೀಚೆಗಷ್ಟೇ ಕ್ರಿಕೆಟ್‌'ಗೆ ವಿದಾಯ ಘೋಷಿಸಿದ ವೇಗಿ ಆಶಿಶ್ ನೆಹ್ರಾ 11ನೇ ಆವೃತ್ತಿಯ ಐಪಿಎಲ್‌'ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಹಾಗೂ ಮಾರ್ಗದರ್ಶಕ (ಮೆಂಟರ್) ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಭಾರತದ ಮಾಜಿ ಆಟಗಾರ ಈಗಾಗಲೇ ಆರ್‌'ಸಿಬಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಈ ಮೊದಲು ಆರ್‌'ಸಿಬಿಯ ಬೌಲಿಂಗ್ ಕೋಚ್ ಆಗಿದ್ದರು. ಆದರೆ ಲೋಧಾ ಸಮಿತಿ ಶಿಫಾರಸಿನ ಪ್ರಕಾರ, ಭಾರತ ತಂಡದ ಸಹಾಯಕ ಸಿಬ್ಬಂದಿ ಐಪಿಎಲ್‌'ನಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಇನ್ನು ಬೌಲಿಂಗ್ ಕೋಚ್ ಆಗಿದ್ದ ಆಲನ್ ಡೋನಾಲ್ಡ್ ಸಹ ತಂಡ ತೊರೆದಿದ್ದಾರೆ.

ಸದ್ಯ ಆರ್‌ಸಿಬಿಯಲ್ಲಿ ಬೌಲಿಂಗ್ ಕೋಚ್ ಸ್ಥಾನ ಖಾಲಿಯಿದ್ದು, ಆ ಸ್ಥಾನವನ್ನು ನೆಹ್ರಾ ತುಂಬಲಿದ್ದಾರೆ. ತಾವು ಆರ್‌ಸಿಬಿ ಬೌಲಿಂಗ್ ಕೋಚ್ ಆಗುವ ಬಗ್ಗೆ ನೆಹ್ರಾ, ತಮ್ಮ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios