Asianet Suvarna News Asianet Suvarna News

ಸೆಹ್ವಾಗ್ ಬಳಿಕ ಕಿಂಗ್ಸ್ XI ಪಂಜಾಬ್ ತಂಡದಿಂದ ವೆಂಕಟೇಶ್ ಪ್ರಸಾದ್ ಔಟ್!

ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡುತ್ತಿದೆ. ವಿರೇಂದ್ರ ಸೆಹ್ವಾಗ್ ಒಪ್ಪಂದ ಅಂತ್ಯಗೊಳಿಸದ ಬೆನ್ನಲ್ಲೇ, ಇದೀಗ ಕನ್ನಡಿಗ ವೆಂಕಟೇಶ್ ಪ್ರಸಾದ್ ಒಪ್ಪಂದ ನವೀಕರಿಸದೇ, ಆ ಸ್ಥಾನಕ್ಕೆ ಬೇರೊಬ್ಬ ಕೋಚ್ ಆಯ್ಕೆ ಮಾಡಿದೆ.
 

After Virender Sehwag Venkatesh Prasad exits Kings XI Punjab franchise
Author
Bengaluru, First Published Nov 5, 2018, 12:15 PM IST

ಬೆಂಗಳೂರು(ನ.05): ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಮುಂಬರುವ ಐಪಿಎಲ್ ಟೂರ್ನಿಗೆ ಈಗನಿಂದಲೇ ಸಿದ್ದತೆ ಆರಂಭಿಸಿದೆ. ತಂಡದ ಮೆಂಟರ್ ಆಗಿದ್ದ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರೆ ಸೆಹ್ವಾಗ್ ಅವರನ್ನ ಒಪ್ಪಂದ ಅಂತ್ಯಗೊಳಿಸಿದ ಬೆನ್ನಲ್ಲೇ, ಇದೀಗ ತಂಡದ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ  ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ  ವೆಂಕಟೇಶ್ ಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸೆಹ್ವಾಗ್ ಅವರ ಒಪ್ಪಂದ ಅಂತ್ಯಗೊಳಿಸಿದ  ಬಳಿಕ ಇದೀಗ ವೆಂಕಟೇಶ್ ಪ್ರಸಾದ ಅವರನ್ನ ಒಪ್ಪಂದವನ್ನ ಪಂಜಾಬ್ ತಂಡ ನವೀಕರಿಸಿಲ್ಲ. ಹೀಗಾಗಿ ಪಂಜಾಬ್ ತಂಡದಿಂದ ವೆಂಕಿ ಹೊರಬಿದ್ದಿದ್ದಾರೆ.

ವೆಂಕಟೇಶ್ ಪ್ರಸಾದ್ ಸ್ಥಾನಕ್ಕೆ, ಕಳದೆ  ಬಾರಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಹಾಯಕ ಬೌಲಿಂಗ್ ಕೋಚ್ ಆಗಿದ್ದ ಶ್ರೀಧರ್ ಶ್ರೀರಾಮ್ ಅವರನ್ನ ಆಯ್ಕೆ ಮಾಡಿದೆ. ಇತ್ತೀಚೆಗಷ್ಟೇ ತಂಡದ ಮುಖ್ಯ  ಕೋಚ್ ಆಗಿ ನ್ಯೂಜಿಲೆಂಡ್ ಕೋಚ್ ಮೈಕೆ ಹೆಸನ್ ಅವರನ್ನ ಆಯ್ಕೆ ಮಾಡಿತ್ತು

Follow Us:
Download App:
  • android
  • ios