Asianet Suvarna News Asianet Suvarna News

ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟನಿಗೆ ಸುನಿಲ್ ಶೆಟ್ಟಿ ಕ್ಲಾಸ್!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ವರ್ತನೆಗೆ ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಗರಂ ಆಗಿದ್ದರು. ಕೊಹ್ಲಿ ವರ್ತನೆ ಸರಿಯಿಲ್ಲ ಎಂದು ಕಿಡಿಕಾರಿದ್ದರು. ಇದೀಗ ನಾಸೀರುದ್ದೀನ್ ಶಾ ವಿರುದ್ಧ ನಟ ಸುನಿಲ್ ಶೆಟ್ಟಿ ಗರಂ ಆಗಿದ್ದಾರೆ.
 

Actor Suniel Shetty questioned Naseerddin Shah for commenting Cricketer Virat kohli
Author
Bengaluru, First Published Dec 22, 2018, 3:04 PM IST

ಮುಂಬೈ(ಡಿ.22): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರೆಸ್ಸೀವ್ ವರ್ತನೆ ಹಲವರ ಕಣ್ಣು ಕೆಂಪಾಗಿಸಿತ್ತು. ಆಸಿಸ್ ನಾಯಕ ಟಿಮ್ ಪೈನೆ ಜೊತೆ ಸ್ಲೆಡ್ಜಿಂಗ್ ಮಾಡಿದ ಕೊಹ್ಲಿ ವಿರುದ್ಧ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಗರಂ ಆಗಿದ್ದರು. ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್, ಆದರೆ ಮೈದಾನದಲ್ಲಿ ಅಷ್ಟೇ ಕೆಟ್ಟ ನಡೆತ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ವಿರುದ್ಧ ಗರಂ ಆದ ಬಾಲಿವುಡ್ ನಟ!

ನಾಸಿರುದ್ದೀನ್ ಶಾ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ತಿರುಗೇಟು ನೀಡಿದ್ದರು. ಇದೀಗ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಆಕ್ರಮಣಕಾರಿ ವ್ಯಕ್ತಿತ್ವ ನಾಯಕನಿಗೆ ಅಗತ್ಯ. ಕೊಹ್ಲಿ ಅಗ್ರೆಸ್ಸೀವ್ ತಂಡಕ್ಕೆ ಮುಖ್ಯವಾಗಿದೆ. ಕೊಹ್ಲಿ ಅತ್ಯಂತ ಯಶಸ್ವಿ ನಾಯಕ ಎಂದು ಸುನಿಲ್ ಶೆಟ್ಟಿ ಪರೋಕ್ಷವಾಗಿ ನಾಸಿರುದ್ದೀನ್ ಶಾಗೆ ತಿರುಗೇಟು ನೀಡಿದ್ದಾರೆ. 

ಇದನ್ನೂ ಓದಿ: ಕೊಹ್ಲಿ ವಿರುದ್ಧ ತಿರುಗಿಬಿದ್ಧ ಟೀಂ ಇಂಡಿಯಾ ಮಾಜಿ ನಾಯಕ..!

ಆಸ್ಟ್ರೇಲಿಯಾ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇದೀಗ ಮೆಲ್ಬೋರ್ನ್ ಟೆಸ್ಟ್ ಪಂದ್ಯದತ್ತ ಚಿತ್ತ ನೆಟ್ಟಿದೆ. ಡಿಸೆಂಬರ್ 26 ರಿಂದ ಆರಂಭಗೊಳ್ಳಲಿದೆ. 4 ಟೆಸ್ಟ್ ಪಂದ್ಯಗಳ ಸರಣಿ ಸದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ.
ಇದನ್ನೂ ಓದಿ: ತಂಡದ ಆಯ್ಕೆ ಎಡವಟ್ಟು -ಕೊಹ್ಲಿ ,ಶಾಸ್ತ್ರಿಗೆ ಖಡಕ್ ಎಚ್ಚರಿಕೆ!

Follow Us:
Download App:
  • android
  • ios