Asianet Suvarna News Asianet Suvarna News

ಜಾಹೀರ್ ಖಾನ್ ಅವಧಿ 150 ದಿನಗಳು ಮಾತ್ರ: ಶಾಸ್ತ್ರಿಗೆ ಬೆದರಿದರೆ ಗಂಗೂಲಿ

ಕೋಚ್ ಆಯ್ಕೆ ವಿಚಾರದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿರುವ ಕಾರಣ ಶನಿವಾರ ರವಿಶಾಸ್ತ್ರಿಯನ್ನು ಭೇಟಿ ಮಾಡುವವರೆಗೂ ಗುತ್ತಿಗೆ ಅಂತಿಮಗೊಳಿಸದಿರಲು ಕ್ರಿಕೆಟ್ ಆಡಳಿತ ಸಮಿತಿ ನಿರ್ಧರಿಸಿದೆ. ಅಲ್ಲದೇ ವೇತನ ತಾರತಮ್ಯವನ್ನು ಸರಿಪಡಿಸುವುದು ಸಹ ಆಡಳಿತ ಸಮಿತಿ ಉದ್ದೇಶವಾಗಿದೆ.

150 days a year contract for Zaheer says Ganguly

ಕೋಲ್ಕತಾ(ಜು.15): ಭಾರತ ತಂಡದ ನೂತನ ಬೌಲಿಂಗ್ ಸಲಹೆಗಾರ ಜಹೀರ್ ಖಾನ್ ಅವರೊಂದಿಗೆ 150 ದಿನಗಳ ಗುತ್ತಿಗೆ ಮಾಡಿಕೊಳ್ಳಲಾಗಿದೆ ಎಂದು ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಮೊದಲು ಜಹೀರ್‌ರನ್ನು ಭಾರತ ತಂಡದ ಬೌಲಿಂಗ್ ಕೋಚ್ ಎಂದು ಘೋಷಿಸಿದ್ದ ಬಿಸಿಸಿಐ, ಗುರುವಾರ ಅವರು ಬೌಲಿಂಗ್ ಸಲಹೆಗಾರ ಅಷ್ಟೆ. ವಿದೇಶ ಪ್ರವಾಸಗಳ ಸಮಯದಲ್ಲಿ ಮಾತ್ರ ಅವರು ತಂಡದೊಂದಿಗಿರಲಿದ್ದಾರೆ ಎಂದು ತಿಳಿಸಿತ್ತು. ಆರಂಭದಲ್ಲಿ ಜಹೀರ್ 100 ದಿನಗಳು ಮಾತ್ರತಂಡದೊಂದಿಗಿರುವಾಗಿ ವರದಿಯಾಗಿತ್ತು. ಆದರೆ ಸದ್ಯ 150 ದಿನ (5 ತಿಂಗಳು) ತಂಡದೊಂದಿಗೆ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಗುತ್ತಿಗೆ ತಡೆಹಿಡಿದ ಆಡಳಿತ ಸಮಿತಿ:

ಕೋಚ್ ಆಯ್ಕೆ ವಿಚಾರದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿರುವ ಕಾರಣ ಶನಿವಾರ ರವಿಶಾಸ್ತ್ರಿಯನ್ನು ಭೇಟಿ ಮಾಡುವವರೆಗೂ ಗುತ್ತಿಗೆ ಅಂತಿಮಗೊಳಿಸದಿರಲು ಕ್ರಿಕೆಟ್ ಆಡಳಿತ ಸಮಿತಿ ನಿರ್ಧರಿಸಿದೆ. ಅಲ್ಲದೇ ವೇತನ ತಾರತಮ್ಯವನ್ನು ಸರಿಪಡಿಸುವುದು ಸಹ ಆಡಳಿತ ಸಮಿತಿ ಉದ್ದೇಶವಾಗಿದೆ. ಮೂಲಗಳ ಪ್ರಕಾರ ಜಹೀರ್, ಬೌಲಿಂಗ್ ಸಲಹೆಗಾರರಾಗಲು 4 ಕೋಟಿ ಬೇಡಿಕೆ ಇಟ್ಟಿದ್ದಾರೆ. ಆದರೆ ಪೂರ್ಣಾವಧಿ ಕೋಚ್‌ಗಳಿಗೆ ವರ್ಷಕ್ಕೆ 1.8 ಕೋಟಿ ಸಂಭಾವನೆ ಪಡೆಯಲಿದ್ದಾರೆ.

 

Follow Us:
Download App:
  • android
  • ios