Asianet Suvarna News Asianet Suvarna News

ಶಿವಮೊಗ್ಗ: ಕನ್ನಡ ಧ್ವಜರೋಹಣ ಯಾಕೆ ಮಾಡಿಲ್ಲ..? ಸ್ಪಷ್ಟನೆ ಕೊಟ್ಟ ಈಶ್ವರಪ್ಪ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕನ್ನಡ ನಾಡ ಧ್ವಜಾರೋಹಣ ಮಾಡಿಲ್ಲ ಎಂದು ಆಪಾದಿಸಿ ಇಂದು, ಕರವೇ ಕಾರ್ಯಕರ್ತರು, ಸಚಿವ ಈಶ್ವರಪ್ಪರ ಸಮ್ಮುಖದಲ್ಲಿಯೇ, ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಪದ್ದತಿಯಂತೆ ಈ ಬಾರಿಯೂ ನಾಡ ಹಬ್ಬದ ದಿನ ರಾಷ್ಟ್ರಧ್ವಜ ಹಾರಿಸಲಾಗಿದೆ. ನಾವು ಕರ್ನಾಟಕವನ್ನು ಎರಡು ಭಾಗವಾಗಲು ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

we will not allow to break karnataka says eshwarappa
Author
Bangalore, First Published Nov 1, 2019, 2:51 PM IST

ಶಿವಮೊಗ್ಗ(ನ.01) : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕನ್ನಡ ನಾಡ ಧ್ವಜಾರೋಹಣ ಮಾಡಿಲ್ಲ ಎಂದು ಆಪಾದಿಸಿ ಇಂದು, ಕರವೇ ಕಾರ್ಯಕರ್ತರು, ಸಚಿವ ಈಶ್ವರಪ್ಪರ ಸಮ್ಮುಖದಲ್ಲಿಯೇ, ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಶಿವಮೊಗ್ಗದ ಡಿ.ಎ.ಆರ್. ಸಭಾಂಗಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪತ್ರಿಕಾಗೋಷ್ಟಿ ಮುಗಿಸಿ, ಉಪಹಾರ ಸೇವಿಸುತ್ತಾ ಕುಳಿತಿದ್ದ ಸಂದರ್ಭದಲ್ಲಿ ಏಕಾಏಕೀ ಸಭಾಂಗಣದೊಳಗೆ ನುಗ್ಗಿದ ಕರವೇ ಕಾರ್ಯಕರ್ತರು, ಸಚಿವರ ವಿರುದ್ಧ ದಿಕ್ಕಾರ ಕೂಗಿ, ಕನ್ನಡನಾಡ ಧ್ವಜ ಏಕೆ ಹಾರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಕನ್ನಡ ಧ್ವಜ ಹಾರಿಸದಿರುವುದಕ್ಕೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತ ಮತ್ತು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.ಈ ವೇಳೆ, ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದಾರೆ.

ಕಾರ್ಯಕರ್ತರು ಸಭಾಂಗಣದ ಹೊರಕ್ಕೆ

ಶಿವಮೊಗ್ಗದಲ್ಲಿ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂದಿನಂತೆ, ಮೊದನಿಲಿಂದಲೂ ನಡೆದುಕೊಂಡ ಬರುತ್ತಿದ್ದ ರೀತಿ ರಾಷ್ಟ್ರಧ್ವಜ ಹಾರಿಸಲಾಗಿತ್ತು.  ಕನ್ನಡ ಧ್ವಜಾರೋಹಣವನ್ನು ಸಚಿವರು ಹಾಗೂ ಅಧಿಕಾರಿಗಳು ಮಾಡಿಲ್ಲ  ಎಂದು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಧ್ವಜ ಹಾರಿಸದಿದ್ದಕ್ಕೆ ಕರವೇ ಕಾರ್ಯಕರ್ತರ ಈಶ್ರರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಪೊಲೀಸರು ಕರವೇ ಕಾರ್ಯಕರ್ತರನ್ನು ತಕ್ಷಣವೇ ಸಭಾಂಗಣದಿಂದ ಹೊರಗೆ ಕರೆದೊಯ್ದರು. ಸುಮಾರು 12 ಕ್ಕೂ ಹೆಚ್ಚು ಜನ ಇದ್ದ ಕರವೇ ಕಾರ್ಯಕರ್ತರನ್ನು  ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.

ಸ್ಪಷ್ಟನೆ ನೀಡಿದ ಈಶ್ವರಪ್ಪ:

ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮದಂತೆ, ಈ ಬಾರಿಯೂ ರಾಷ್ಟ್ರಧ್ವಜ ಹಾರಿಸಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ  ಬಗ್ಗೆ, ಕನ್ನಡ ಧ್ವಜದ ಬಗ್ಗೆ ಗೌರವ ಇದ್ದೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮೊದಲಿನಿಂದಲೂ ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮದಂತೆ, ಪದ್ದತಿಯಂತೆ ಈ ಬಾರಿಯೂ ನಾಡ ಹಬ್ಬದ ದಿನ ರಾಷ್ಟ್ರಧ್ವಜ ಹಾರಿಸಲಾಗಿದೆ.  ಕರ್ನಾಟಕ ಏಕೀಕರಣದ ಹೋರಾಟ ಆರಂಭವಾದಾಗಿನಿಂದಲೂ, ಇವತ್ತೀನವರೆಗೆ ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಧ್ವಜ ಮಾತ್ರ ಹಾರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ  ಬಗ್ಗೆ ಗೊಂದಲ ಆರಂಭವಾಗಿದೆ ಎಂದು ನಾನು ಒಪ್ಪುವುದಿಲ್ಲ. ನಾಡ ಧ್ವಜಕ್ಕೆ ಅಪಮಾನ ಮಾಡಬೇಕೆಂದೇನೂ ಇಲ್ಲ. ಕನ್ನಡದ ಬಗ್ಗೆ ಕನ್ನಡ ಧ್ವಜದ ಬಗ್ಗೆ ಗೌರವ ಇದೆ ಎಂದು ಅಭಿಪ್ರಾಯ ಪಟ್ಟರು.

ಬೈಕ್ ಸವಾರನನ್ನು ಹಿಗ್ಗಾ ಮುಗ್ಗ ಎಳೆ​ದಾ​ಡಿದ ಪೊಲೀಸ್..!

ಯಾರೋ ಒಬ್ಬೊಬ್ಬರು ಧ್ವಜ ಹಾರಿಸಿದ ತಕ್ಷಣ ಕರ್ನಾಟಕವನ್ನು ಒಡೆಯುತ್ತಿದ್ದಾರೆ ಎಂದಲ್ಲ.  ನಾವು ರಾಜ್ಯವನ್ನು ಒಡೆಯಲು ಬಿಡುವುದಿಲ್ಲ.  ಕೆಲವರು ರಾಜ್ಯ ಹೊಡೆಯಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಆದರೆ, ನಾವು ಕರ್ನಾಟಕವನ್ನು ಎರಡು ಭಾಗವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಒಂದು ತಿಂಗಳ ಕಾಲ ವಿದ್ಯುತ್‌ ವ್ಯತ್ಯಯ...

Follow Us:
Download App:
  • android
  • ios