Asianet Suvarna News Asianet Suvarna News

ಮಾಲಿಕತ್ವಕ್ಕೆ ಎರಡು ಗ್ರಾಮಗಳ ಜಿದ್ದಾಜಿದ್ದಿ, ದೇವರಿಗೆ ಬಿಟ್ಟ ಕೋಣಕ್ಕೂ ಡಿಎನ್‌ಎ ಪರೀಕ್ಷೆ

ಇದು ಒಂದು ಕೋಣದ ಕತೆ/ ಕೋಣ ಯಾರದ್ದು? / ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮಸ್ಥರ ನಡುವಿನ ತಿಕ್ಕಾಟ/ ಅಂತಿಮವಾಗಿ ಡಿಎನ್‌ಎ ಪರೀಕ್ಷೆ

Shivamogga VS Davanagere Buffalo ownership issue turn to DNA test
Author
Bengaluru, First Published Oct 17, 2019, 10:12 PM IST

ಶಿವಮೊಗ್ಗ [ಅ. 17] ಎರಡು ಗ್ರಾಮಗಳ ನಡುವೆ ಒಂದು ಕೋಣದ ಒಡೆತನಕ್ಕಾಗಿ ನಡೆದ ತಿಕ್ಕಾಟ ಇದೀಗ ಅಂತಿಮವಾಗಿ ಡಿಎನ್‌ಎ ಪರೀಕ್ಷೆಯ ಬಳಿ ಬಂದು ನಿಂತಿದೆ.

ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮಸ್ಥರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ದೇವರಿಗೆ ಬಿಟ್ಟ ಕೋಣದ ನಿಜವಾದ ವಾರಸುದಾರರು ಯಾರು ಎಂಬುದನ್ನು ಪತ್ತೆ ಹಚ್ಚಲು ಜನಪ್ರತಿನಿಧಿಗಳು, ಪೊಲೀಸರು ಡಿಎನ್‌ಎ ಪರೀಕ್ಷೆ ಮಾಡಿಸಲು ಒಪ್ಪಿಕೊಂಡಿದ್ದಾಾರೆ. ಅಲ್ಲಿಯವರೆಗೆ ಈ ಕೋಣವನ್ನು ತಟಸ್ಥ ಜಾಗ ಎಂದರೆ ಶಿವಮೊಗ್ಗದ ಮಹಾವೀರ ಗೋಶಾಲೆಯಲ್ಲಿ ಇಡಲು ನಿರ್ಧರಿಸಲಾಗಿದೆ.

ಒಂದು ಹಂತದಲ್ಲಿ ಪೊಲೀಸರು ಈ ಕೋಣ ಹಾರನಹಳ್ಳಿ ಗ್ರಾಮಸ್ಥರದ್ದು ಎಂದು ತೀರ್ಪು ನೀಡಲಾಗಿತ್ತು. ಆದರೆ ಅಲ್ಲಿಯವರೆಗೆ ಜನರ ಮಟ್ಟದಲ್ಲಿದ್ದ ವ್ಯಾಜ್ಯ ರಾಜಕಾರಣದ ಅಂಗಳ ಪ್ರವೇಶಿಸಿತು. ರಾಜಕಾರಣಿಗಳು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದರು. ಹೀಗಾಗಿ ವಿವಾದ ಮತ್ತೆ ಭುಗಿಲೆದ್ದಿತು.

ಪ್ರಕರಣದ ಕತೆ ಏನು?  ಹಾರನಹಳ್ಳಿಯಲ್ಲಿ ದೇವರಿಗೆ ಕೋಣವೊಂದನ್ನು ಐದು ವರ್ಷಗಳ ಹಿಂದೆ ಬಿಡಲಾಗಿತ್ತು. ಈ ಕೋಣ ನಡೆದಿದ್ದೇ ಹಾದಿ ಎಂಬಂತೆ ಇಡೀ ಊರು ಅಲೆಯುತ್ತಿತ್ತು. ಆದರೆ  ಎರಡು ವರ್ಷಗಳ ಹಿಂದೆ ಇದು ಗ್ರಾಮದಿಂದ ನಾಪತ್ತೆಯಾಗಿತ್ತು. ಎಲ್ಲಿ ಹುಡುಕಿದರೂ ಈ ಕೋಣ ಸಿಕ್ಕಿರಲಿಲ್ಲ.

ನಾಪತ್ತೆಯಾದ ಕೋಣದ ಕತೆ

ಇತ್ತ ಬೇಲಿಮಲ್ಲೂರಿನ ಶ್ರೀ ಆಂಜನೇಯ ಹಾಗೂ ಶ್ರೀ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯವರು ಕೂಡ ಗ್ರಾಮದ ಪರವಾಗಿ ಕೋಣವೊಂದನ್ನು ದೇವರ ಹೆಸರಿನಲ್ಲಿ ಬಿಟ್ಟಿದ್ದರು. ಸುಮಾರು 8 ವರ್ಷ ಕೋಣ ಸರಾಸರಿ ಒಂದು ಕ್ವಿಂಟಾಲ್‌ಗೂ ಹೆಚ್ಚು ತೂಕವಿದ್ದು ದಷ್ಟಪುಷ್ಟವಾಗಿ ಬೆಳೆದು ನಿಂತಿದೆ. 

"

ಹಾರನಹಳ್ಳಿಯವರಿಗೆ ಕೆಲ ದಿನಗಳ ಹಿಂದೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಾಮದಲ್ಲಿ ಕೋಣವೊಂದು ಇದೆ ಎಂದು ವಿಷಯ ತಿಳಿಯಿತು. ತಕ್ಷಣವೇ ಹಾರನಹಳ್ಳಿ ಗ್ರಾಮಸ್ಥರು ಅಲ್ಲಿಗೆ ದೌಡಾಯಿಸಿದರು. ಕೋಣವನ್ನು ನೋಡುತ್ತಿದ್ದಂತೆ ಇದು ತಮ್ಮ ಊರಿನದ್ದೇ ಎಂದರು. ವಾಹನವೊಂದರಲ್ಲಿ ತಮ್ಮೂರಿಗೆ ಕರೆದೊಯ್ಯದರು.

ವಿಷಯ ತಿಳಿದ  ಬೇಲಿಮಲ್ಲೂರು ಗ್ರಾಮಸ್ಥರು ಹಾರನಹಳ್ಳಿಗೆ ದೌಡಾಯಿಸಿದರು. ಇದು ನಮ್ಮ ಊರ ಕೋಣ ಎಂದರು. ಹಾರನಹಲ್ಳಿ ಗ್ರಾಮಸ್ಥರು ಇದನ್ನು ಒಪ್ಪಲಿಲ್ಲ. ಒಂದು ಹಂತದಲ್ಲಿ ಇದು ಬಗೆಹರಿಯಿತು. ಹಾರನಹಳ್ಳಿ ಗ್ರಾಮಸ್ಥರು ಕೋಣನ ಕಾಲಿಗೆ ಕಟ್ಟಿದ್ದ ಗೆಜ್ಜೆ, ಮಚ್ಚೆ ಇತ್ಯಾದಿ ವಿವರ ನೀಡಿ ತಮ್ಮ ಕೋಣದ ಅಸಲಿತನವನ್ನು ಸಾಬೀತುಪಡಿಸಿದರು. ಕೋಣವನ್ನು ಹಾರನಹಳ್ಳಿಯಲ್ಲಿಯೇ ಇಟ್ಟುಕೊಳ್ಳಲು ನಿರ್ಧರಿಸಲಾಯಿತು.

ಅಷ್ಟರಲ್ಲಿ ಇದರಲ್ಲಿ ರಾಜಕಾರಣ ಪ್ರವೇಶಿಸಿತು. ವಿವಾದ ಮತ್ತೆ ಭುಗಿಲೆದ್ದಿತು. ಈ ಕೋಣದ ಮಾಲೀಕತ್ವ ಬಗೆಹರಿಸಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು. ಪೊಲೀಸರ ಯಾವುದೇ ರಾಜೀ ಸಂಧಾನ ಫಲ ನೀಡಲಿಲ್ಲ.

ಹೇಗೆ ಡಿಎನ್‌ಎ ಪರೀಕ್ಷೆ: ಹೈದರಾಬಾದ್‌ನಲ್ಲಿರುವ ಸೆಂಟರ್ ಫಾರ್ ಸೆಲ್ಲುಲ್ಲರ್ ಅಂಡ್ ಮಾಲಿಕ್ಯುಲರ್ ಬಯಾಲಜಿಕಲ್ ಲ್ಯಾಬ್‌ನಲ್ಲಿ ಈ ಪರೀಕ್ಷೆ ನಡೆಯಲಿದೆ.

ಈ ವಿವಾದಿತ ಕೋಣದ ಡಿಎನ್‌ಎ ಜೊತೆಗೆ  ಬೇಲಿ ಮಲ್ಲೂರು ಗ್ರಾಮ ಮತ್ತು ಹಾರನಹಳ್ಳಿ ಗ್ರಾಮದಲ್ಲಿರುವ ಕೋಣದ ತಾಯಿ ಎನ್ನಲಾದ ಎಮ್ಮೆಯ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. ಆದರೆ ಇದೆಲ್ಲ ತಕ್ಷಣಕ್ಕೆ ಆಗುವುದಂತಹದಲ್ಲ. ಡಿಎನ್‌ಎ ಪರೀಕ್ಷೆಗೆ ರಕ್ತ ಕಳಿಸಿ ತಿಂಗಳುಗಟ್ಟಲೇ ಕಾಯಬೇಕು ಎಂದು ಮೂಲಗಳು ಹೇಳುತ್ತವೆ.

ತಟಸ್ಥ ಜಾಗದಲ್ಲಿ ಕೋಣ:   ಕೋಣದ ಮಾಲೀಕತ್ವ ವಿವಾದ ಬಗೆಹರಿಯುವ ತನಕ ಅದನ್ನು ತಟಸ್ಥ ಜಾಗದಲ್ಲಿರಿಸಲು ಇಬ್ಬರೂ ಒಪ್ಪಿಕೊಂಡಿದ್ದಾಾರೆ. ಇದನ್ನು ಶಿವಮೊಗ್ಗದ ಮಹಾವೀರ ಗೋ ಶಾಲೆಯ ಸುರ್ಪದಿಗೆ ಕೋಣವನ್ನು ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

Follow Us:
Download App:
  • android
  • ios