Asianet Suvarna News Asianet Suvarna News

ಶಿವಮೊಗ್ಗ : ಸಂಚಾರ ನಿಯಮ ಉಲ್ಲಂಘನೆಗೆ 21 ಲಕ್ಷ ರು. ವಸೂಲಿ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ 21 ಲಕ್ಷ ರು. ವಸೂಲಿ ಮಾಡಲಾಗಿದೆ. 

21 Lakh Fine Collected From Traffic Rule Violators
Author
Bengaluru, First Published Oct 18, 2019, 1:06 PM IST

ಶಿವಮೊಗ್ಗ [ಅ.18]: ನಗರದಲ್ಲಿ ಸಂಚಾರ ವ್ಯವಸ್ಥೆಯ ಜಾರಿ ಬಗ್ಗೆ ಸಂಚಾರ ನಿಯಂತ್ರಣಕ್ಕಾಗಿ ಅಟೋಮೆಶನ್‌ ತಂತ್ರಾಂಶ ವ್ಯವಸ್ಥೆ 2018 ರಿಂದ ಅನುಷ್ಠಾನಗೊಳಿಸಲಾಗಿದೆ.

ಈ ತಂತ್ರಾಂಶವನ್ನು ಬಳಸಿ ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳ ಸಹಾಯದಿಂದ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನಗಳ ಪೋಟೋಗಳನ್ನು ತೆಗೆಯಲಾಗಿದೆ. ಹಾಗೂ ಇದೇ ರೀತಿ ಭದ್ರಾವತಿ ನಗರದಲ್ಲೂ ಕೂಡ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಸವಾರರ ಪೋಟೋಗಳನ್ನು ಸಂಚಾರಿ ಕರ್ತವ್ಯವನ್ನು ನಿರ್ವಹಿಸುವ ಪೊಲೀಸರು ಪೋಟೋ ತಗೆದು ಪೊಲೀಸ್‌ ಠಾಣೆಗಳಿಗೆ ಎಫ್‌ಟಿವಿಆರ್‌ ಭರ್ತಿ ಮಾಡಿ ನೀಡುತ್ತಾರೆ.

ಈ ಪೋಟೋಗಳನ್ನು ತಂತ್ರಾಂಶಕ್ಕೆ ಅಪ್ಲೋಡ್‌ ಮಾಡಿ ನೋಟಿಸ್‌ಗಳನ್ನು ಮುದ್ರಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನದ ಮಾಲೀಕರ ವಿಳಾಸಕ್ಕೆ ಅಂಚೆಯ ಮುಖಾಂತರ ನೋಟಿಸ್‌ ಕಳುಹಿಸಿ ಅವರಿಂದ ದಂಡದ ಮೊತ್ತ ಪಡೆದುಕೊಳ್ಳಲಾಗುತ್ತಿದೆ

ಹೆಚ್ಚಿನ ಜಿಲ್ಲಾ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

ಅ.1ರಿಂದ ಇಲ್ಲಿಯವರೆಗೆ ಒಟ್ಟು 44,873 ನೋಟಿಸ್‌ಗಳನ್ನು ಸಂಚಾರ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ ಕಳುಹಿಸಲಾಗಿದ್ದು, ಅವುಗಳಲ್ಲಿ 20931 ಪ್ರಕರಣಗಳಲ್ಲಿ, ಒಟ್ಟು ಮೊತ್ತ 21,81,300 ರು.ಗಳ ದಂಡ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕರು ತಿಳಿಸಿದ್ದಾರೆ.

Follow Us:
Download App:
  • android
  • ios