Asianet Suvarna News Asianet Suvarna News

ಭಾರತದ ASATನಿಂದ ಬಾಹ್ಯಾಕಾಶದಲ್ಲಿ ಕಸದ ರಾಶಿ: ನಾಸಾ ಅಸಮಾಧಾನ!

ಭಾರತದ ASAT ಯಶಸ್ವಿ ಪರೀಕ್ಷೆಗೆ ನಾಸಾ ಅಸಮಾಧಾನ| ASAT ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಕಸದ ರಾಶಿ| ಸ್ಫೋಟಗೊಂಡ ಉಪಗ್ರಹದ ಸುಮಾರು 400 ಚೂರು ಬಾಹ್ಯಾಕಾಶದಲ್ಲಿ| 10 ಸೆ.ಮೀಗೂ ಅಳತೆಯ 60 ಚೂರುಗಳನ್ನು ಪತ್ತೆ ಹಚ್ಚಿದ ನಾಸಾ| ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತಂದೊಡ್ಡುವ ಆತಂಕ|

NASA Says ASAT Test Created 400 Pieces Of Debris in Space
Author
Bengaluru, First Published Apr 2, 2019, 11:33 AM IST

ವಾಷಿಂಗ್ಟನ್(ಏ.02): ಅಮೆರಿಕದ ವಿದೇಶಾಂಗ ನೀತಿಯೇ ಹಾಗೆ. ತನ್ನ ರಕ್ಷಣೆಗಾಗಿ ಅಮೆರಿಕ ವಿನಾಶಕಾರಿ ಅಣ್ವಸ್ತ್ರಗಳನ್ನು ಹೊಂದಬಹುದು. ಖಗೋಳ ತಂತ್ರಜ್ಞಾನದಲ್ಲಿ ಏಕಸ್ವಾಮ್ಯ ಸಾಧಿಸಿ ಬಾಹ್ಯಾಕಾಶವನ್ನೂ ಆಳಬಹುದು. ಆದರೆ ಮತ್ತೊಂದು ರಾಷ್ಟ್ರ ಇದೇ ಹಾದಿಯಲ್ಲಿ ನಡೆದಾಗ ವಿಶ್ವ ಶಾಂತಿ, ಪರಿಸರ ರಕ್ಷಣೆ, ಬಾಹ್ಯಾಕಾಶ ರಕ್ಷಣೆ ಅಂತೆಲ್ಲಾ ಬೊಬ್ಬೆ ಹೊಡೆಯುತ್ತದೆ.

ಅದರಂತೆ ಭಾರತದ ಗುಪ್ತಚರ ಉಪಗ್ರಹ ಹೊಡೆದುರುಳಿಸಬಲ್ಲ ಕ್ಷಿಪಣಿ ASAT ಪರೀಕ್ಷಾರ್ಥ ಪ್ರಯೋಗವನ್ನು ಅಮೆರಿಕದ ನಾಸಾ ವಿರೋಧಿಸಿದೆ. ASAT ಯಶಸ್ವಿ ಪರೀಕ್ಷೆಯಿಂದಾಗಿ ಬಾಹ್ಯಾಕಾಶದಲ್ಲಿ ಕಸದ ರಾಶಿ ಹರಡಿದೆ ಎಂದು ನಾಸಾ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ಜಿಮ್ ಬ್ರಿಡೆನ್'ಸ್ಟೈನ್, ಮಿಶನ್ ಶಕ್ತಿ ಪರೀಕ್ಷೆಯಿಂದಾಗಿ ಸುಮಾರು 400ಕ್ಕೂ ಅಧಿಕ ಚೂರುಗಳು ಬಾಹ್ಯಾಕಾಶದಲ್ಲಿ ಸುತ್ತುತ್ತಿದ್ದು ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತರಬಲ್ಲದು ಎಂದು ಹೇಳಿದ್ದಾರೆ.

ಈಗಾಗಲೇ 10 ಸೆ.ಮೀ ಅಳತೆಯ 60ಕ್ಕೂ ಹೆಚ್ಚು ಚೂರುಗಳನ್ನು ಗುರುತಿಸಲಾಗಿದ್ದು, ಈ ಬೃಹತ್ ಕಸದ ರಾಶಿಯನ್ನು ತೆಗೆದು ಹಾಕುವ ಹೊಣೆ ಭಾರತದ ಮೇಲಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ISSಗಿಂತ 300 ಕಿ.ಮೀ. ಕೆಳ ಸ್ತರದಲ್ಲಿ ಭಾರತ ASAT ಪ್ರಯೋಗ ನಡೆಸಿದ್ದು, ಇದರಿಂದ ಸಿಡಿದಿರುವ ಉಪಗ್ರಹದ ಚೂರುಗಳು ISSಗೆ ಅಪಾಯ ತಂದೊಡ್ಡಬಲ್ಲದು ಎಂದು ನಾಸಾ ಆತಂಕ ವ್ಯಕ್ತಪಡಿಸಿದೆ.

Follow Us:
Download App:
  • android
  • ios