Asianet Suvarna News Asianet Suvarna News

ಡಬ್ಬಿಂಗ್ ವಿರೋಧಿಸುತ್ತಿದ್ದ ಸುದೀಪ್ ದಿಢೀರನೇ ಪರ ನಿಂತಿದ್ಯಾಕೆ?

ಸೈರಾ ಸಿನಿಮಾದಲ್ಲಿ ಸುದೀಪ್ ಅವುಕು ರಾಜ ಪಾತ್ರ ಮೆಚ್ಚುಗೆ ಗಳಿಸಿದೆ | ಕನ್ನಡಕ್ಕೂ ಡಬ್ ಆಯ್ತು ಸೈರಾ |  ಕನ್ನಡ ಪರ ಸಂಘಟನೆಗಳಿಂದ ಸುದೀಪ್ ಗೆ ಸನ್ಮಾನ 

pro kannada organisation honor kiccha Sudeep for dubbing Sye Raa Narasimha Reddy
Author
Bengaluru, First Published Oct 12, 2019, 4:37 PM IST

ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ಸೇರಿದಂತೆ ಮಲ್ಟಿ ಸ್ಟಾರರ್ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಿಚ್ಚ ಸುದೀಪ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಸುದೀಪ್ ಅವುಕು ರಾಜನ ಪಾತ್ರ ಜನ ಮೆಚ್ಚುಗೆ ಗಳಿಸಿದೆ. 

ಬಿಗ್ ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಗೆ ಆಲ್ಕೋಹಾಲ್ ಮೊಬೈಲ್?

ಸೈರಾ ವನ್ನು ಕನ್ನಡಕ್ಕೆ ಡಬ್ ಮಾಡಿ ಈ ಮೂಲಕ ಕನ್ನಡ ಬೆಳೆಸುತ್ತಿರುವ  ಕಿಚ್ಚನಿಗೆ ಕನ್ನಡ ಸಂಘಟನೆಗಳು ಸನ್ಮಾನ ಮಾಡಿವೆ. ಭಗವದ್ಗೀತೆ, ಮಂಕುತ್ತಿಮ್ಮನ ಕಗ್ಗವನ್ನ ಕೊಟ್ಟು  ಕನ್ನಡ ಸಂಘಟನೆಗಳು ಗೌರವಿಸಿವೆ. ಜೆಪಿ ನಗರದಲ್ಲಿರುವ ನಿವಾಸಕ್ಕೆ ಕರ್ನಾಟಕ ರಕ್ಷಣಾ  ವೇದಿಕೆ ಬನವಾಸಿ ಬಳಗ,ಕರ್ನಾಟಕ ಗ್ರಾಹಕರ ವೇದಿಕೆ, ಕರುನಾಡ ಸೇವಕರು,ಕರ್ನಾಟಕ ರಣಧೀರ ಪಡೆ, ಕರುನಾಡ ಯೋಧರು ಬಳಗ ಭೇಟಿ ನೀಡಿ ಅಭಿನಂದನೆ ಸಲ್ಲಿಸಿವೆ. 

ಇಷ್ಟು ದಿನ ಡಬ್ಬಿಂಗ್ ವಿರೋಧಿಸಿಕೊಂಡು ಬರುತ್ತಿದ್ದ ಸುದೀಪ್ ದಿಢೀರನೇ ಡಬ್ಬಿಂಗ್ ಪರ ನಿಂತಿದ್ದು ಅಚ್ಚರಿ ಮೂಡಿಸಿದೆ. ಇದಕ್ಕೆ ಸುದೀಪ್ ಕೊಟ್ಟಿರುವ ಸ್ಪಷ್ಟನೆ ಹೀಗಿದೆ. ‘ಕಾಲ ಬದಲಾದಂತೆ ನಾವು ಬದಲಾಗಬೇಕು. ಕೆಲ ವರ್ಷಗಳ ಹಿಂದೆ ಡಬ್ಬಿಂಗ್ ವಿರುದ್ಧ ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಿಜ.‌ ಆದರೆ ದೊಡ್ಡ ಸಿನಿಮಾ ಮಾಡುವಾಗ ಡಬ್ಬಿಂಗ್ ಅನಿವಾರ್ಯ. ಬೇರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ಬಂದ್ರೆ ಸಂತಸ ಪಡಬೇಕು’ ಎಂದರು.  

Follow Us:
Download App:
  • android
  • ios