Asianet Suvarna News Asianet Suvarna News

ನಿರ್ಭಯಾ ಬದುಕಿದ್ದರೆ ಏನಾಗುತ್ತಿತ್ತು ಎಂಬ ಯೋಚನೆಯೇ 'ರಂಗನಾಯಕಿ'!

ಅದಿತಿ ಪ್ರಭುದೇವ ನಾಯಕಿಯಾ ಅಭಿನಯಿಸಿರುವ ‘ರಂಗನಾಯಕಿ’ ಚಿತ್ರವನ್ನು ಮಹಿಳೆಯರಿಗಾಗಿಯೇ ವಿಶೇಷವಾದ ಪ್ರದರ್ಶನ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್‌ 1ರಂದು ರಾಜ್ಯಾದ್ಯಾಂತ ತೆರೆ ಕಾಣುತ್ತಿರುವ ಈ ಚಿತ್ರವನ್ನು ದಯಾಳ್‌ ನಿರ್ದೇಶನ ಮಾಡಿದ್ದು, ಎಸ್‌ ವಿ ನಾರಾಯಣ್‌ ನಿರ್ಮಿಸಿದ್ದಾರೆ. 

Kannada Movie Ranganayaki special show for Women on november 1st
Author
Bangalore, First Published Oct 26, 2019, 9:24 AM IST

ಮಹಿಳಾ ಪ್ರಧಾನ ಕತೆಯನ್ನು ಒಳಗೊಂಡ ಸಿನಿಮಾ. ಈ ಕಾರಣಕ್ಕೆ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಬೇಕೆಂದು ಸೆಲೆಬ್ರಿಟಿ ಶೋ ಮಾದರಿಯಲ್ಲೇ ಮಹಿಳಾ ಸ್ಪೆಷಲ್‌ ಶೋ ಆಯೋಜಿಸಲಾಗುತ್ತಿದೆ.

'ರಂಗನಾಯಕಿ' ಫಸ್ಟ್ ಲುಕ್ ರಿಲೀಸ್!

ಬಿಡುಗಡೆಯ ನಂತರ ಅಥವಾ ಬಿಡುಗಡೆಯ ದಿನವೇ ಈ ವಿಶೇಷ ಪ್ರದರ್ಶನ ನಡೆಯಲಿದೆ. ‘ಅತ್ಯಾಚಾರಕ್ಕೆ ಒಳಗಾದ ಒಬ್ಬ ಹೆಣ್ಣು ಮಗಳ ಕತೆ. ದೆಹಲಿಯಲ್ಲಿ ನಿರ್ಭಯ ಪ್ರಕರಣ ನಡೆಯಿತು. ಒಂದು ವೇಳೆ ಆ ನಿರ್ಭಯ ಬದುಕಿ, ತನಗೆ ಆದ ಅನ್ಯಾಯವನ್ನು ಪ್ರಶ್ನಿಸಿದರೆ ಏನಾಗುತ್ತಿತ್ತು, ಜತೆಗೆ ಆಕೆ ಎಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಳು ಎಂಬುದು ‘ರಂಗನಾಯಕಿ’ ಚಿತ್ರದ ಕತೆ. ಮಹಿಳೆಯರಿಗೆ ಧೈರ್ಯ ತುಂಬುವ ಮತ್ತು ಅರಿವು ಮೂಡಿಸುವ ಕತೆ ಇದಾಗಿದ್ದು ಮಹಿಳೆಯರಿಗೆ ಈ ಸಿನಿಮಾ ತಲುಪಬೇಕು ಎಂದು ಅವರಿಗಾಗಿಯೇ ಪ್ರತ್ಯೇಕವಾದ ಶೋ ಆಯೋಜಿಸಲಾಗಿದೆ’ ಎಂಬುದು ನಿರ್ಮಾಪಕರು ಕೊಡುವ ವಿವರಣೆ.

ನಿರ್ಭಯ ನೆರಳಲ್ಲಿ 'ರಂಗನಾಯಕಿ'!

ಮಣಿಕಾಂತ್‌ ಕದ್ರಿ ಸಂಗೀತ ನೀಡಿರುವ ಚಿತ್ರವಿದು. ಚಿತ್ರದ ನಿರ್ಮಾಪಕ ನಾರಾಯಣ್‌ ಈ ಹಿಂದೆ ಎಟಿಎಂನಲ್ಲಿ ಮಹಿಳೆ ಮೇಲಾದ ಮಾರಣಾಂತಿಕ ಘಟನೆಯನ್ನು ಇಟ್ಟುಕೊಂಡು ಮಾಡಿದ್ದ ‘ಎಟಿಎಂ’ ಚಿತ್ರವನ್ನು ನಿರ್ಮಿಸಿದವರು.

Follow Us:
Download App:
  • android
  • ios