Asianet Suvarna News Asianet Suvarna News

ಅವರ ಗ್ರೂಪ್‌ ಚಾಟ್‌ನ ಗುರಿ ಹುಡುಗಿಯರ ಗ್ಯಾಂಗ್‌ರೇಪ್‌ !

ದಿಲ್ಲಿಯ ಕೆಲವು ಹದಿಹರೆಯದ ಹುಡುಗರ ಒಂದು ಸೋಶಿಯಲ್‌ ಸೈಟ್‌ ಗ್ರೂಪ್‌ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಹೆಸರು 'ಬಾಯ್ಸ್‌ ಲಾಕರ್‌ ರೂಮ್‌' ಅಂತೆ. ಇದರಲ್ಲಿ ನಡೀತಿದ್ದ ಮಾತುಕತೆ ಏನು ಗೊತ್ತಾ? ತಮ್ಮದೇ ಪ್ರಾಯದ, ತಮ್ಮದೇ ಕ್ಲಾಸಿನ ಹುಡುಗಿಯರನ್ನು ಬೆತ್ತಲೆಯಾಗಿ ಊಹಿಸಿಕೊಳ್ಳುವುದು. ಅವರ ಫೋಟೋಗಳನ್ನು ಟ್ವಿಟರ್, ಫೇಸ್‌ಬುಕ್‌ ಮೊದಲಾದ ಕಡೆಗಳಿಂದ ಕದ್ದು ಸಂಗ್ರಹಿಸಿ ಅವುಗಳನ್ನು ಡಿಜಿಟಲೀ ಮಾರ್ಫ್‌ ಮಾಡಿ, ನಗ್ನವಾಗಿ ಚಿತ್ರಿಸಿಕೊಂಡು ಹಂಚಿ ಖುಷಿಪಡುವುದು,

Delhi Boys locker room puts spotlight on Indian rape culture
Author
Bengaluru, First Published May 4, 2020, 5:38 PM IST

ದಿಲ್ಲಿಯ ಕೆಲವು ಹದಿಹರೆಯದ ಹುಡುಗರ ಒಂದು ಸೋಶಿಯಲ್‌ ಸೈಟ್‌ ಗ್ರೂಪ್‌ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಹೆಸರು 'ಬಾಯ್ಸ್‌ ಲಾಕರ್‌ ರೂಮ್‌' ಅಂತೆ. ಇದರಲ್ಲಿ ನಡೀತಿದ್ದ ಮಾತುಕತೆ ಏನು ಗೊತ್ತಾ? ತಮ್ಮದೇ ಪ್ರಾಯದ, ತಮ್ಮದೇ ಕ್ಲಾಸಿನ ಹುಡುಗಿಯರನ್ನು ಬೆತ್ತಲೆಯಾಗಿ ಊಹಿಸಿಕೊಳ್ಳುವುದು. ಅವರ ಫೋಟೋಗಳನ್ನು ಟ್ವಿಟರ್, ಫೇಸ್‌ಬುಕ್‌ ಮೊದಲಾದ ಕಡೆಗಳಿಂದ ಕದ್ದು ಸಂಗ್ರಹಿಸಿ ಅವುಗಳನ್ನು ಡಿಜಿಟಲೀ ಮಾರ್ಫ್‌ ಮಾಡಿ, ನಗ್ನವಾಗಿ ಚಿತ್ರಿಸಿಕೊಂಡು ಹಂಚಿ ಖುಷಿಪಡುವುದು, ಇನ್ಯಾರದೋ ಹುಡುಗಿಯರ ಚಿತ್ರಗಳನ್ನು ಗ್ಯಾಂಗ್‌ರೇಪ್‌ಗೆ ಒಳಗಾಗಿದ್ದಾಳೆ ಎಂದೆಲ್ಲ ಊಹಿಸಿಕೊಂಡು ಬರೆದು ಉದ್ರೇಕಪಡುವುದು- ಇತ್ಯಾದಿ. ಇವರ ಚರ್ಚೆಯ ಪ್ರಧಾನ ವಿಷಯ, ಹುಡುಗಯರನ್ನು ಗ್ಯಾಂಗ್‌ ರೇಪ್‌ ಮಾಡುವುದು ಹೇಗೆ ಎಂಬುದು. ಎಲ್ಲರೂ 16-17ವರ್ಷದ ಹುಡುಗರು. ಈ ಗ್ರೂಪ್‌ಗಳೂ ಸ್ನ್ಯಾಪ್‌ಚಾಟ್‌, ಇನ್‌ಸ್ಟಗ್ರಾಮ್‌ಗಳಲ್ಲಿ ಸಕ್ರಿಯ. ಇದನ್ನು ಒಬ್ಬಾಕೆ ಹುಡುಗಿ ಗಮನಿಸಿದ್ದಾಳೆ. ಇದರ ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಿ, ಟ್ವಿಟ್ಟರ್‌ನಲ್ಲಿ ಪ್ರಕಟ ಮಾಡಿದ್ದಾಳೆ. ಎಲ್ಲರೂ ಈ ಹುಡುಗರಿಗೆ ಉಗಿದು ಉಪ್ಪು ಹಾಕಿದ್ದಾರೆ. ಈಗ ಪೊಲೀಸ್‌ ಕೇಸೂ ದಾಖಲಾಗಿದೆ. ಈ ಹುಡುಗಿಯ ತರಗತಿಯ ಒಂದಿಬ್ಬರು ಹುಡುಗರು ಈ ಗ್ರೂಪ್‌ನಲ್ಲಿ ಇದ್ದುದು ಇವಳಿಗೆ ಗೊತ್ತಾಗಿದೆ. ಅದರ ಮೂಲಕ ಇವರ ಕತೆ ಹೊರಬಿದ್ದಿದೆ. ಈ ಒಟ್ಟೂ ಪ್ರಕರಣ ಬಯಲಾಗಿದ್ದರೂ ಈ ಹುಡುಗರು ಯಾವುದೇ ನಾಚಿಕೆಗೆ ಒಳಗಾದಂತಿಲ್ಲ, ಕ್ಷಮೆ ಕೇಳಿಲ್ಲ.

ಇದೊಂದು ಭಯಾನಕ ಸತ್ಯ. ನಮ್ಮ ಹದಿಹರೆಯದ ಹುಡುಗರು ಎಷ್ಟು ಅಸಹ್ಯವಾದ ಪ್ರಪಂಚಕ್ಕೆ ತಮ್ಮನ್ನು ಈಗಾಗಲೇ ತೆರೆದುಕೊಂಡಿದ್ದಾರೆ ಎಂಬುದು ನಮಗೆ ಈಗಲಾದರೂ ಗೊತ್ತಾಗಬೇಕು. ಇಂಥದೇ ಹಲವಾರು ಗ್ರೂಪ್‌ಗಳು, ಸಾವಿರಾರು ಗ್ರೂಪ್‌ಗಳೂ ನಮ್ಮ ದೇಶಾದ್ಯಂತ ಕ್ರಿಯಾಶೀಲವಾಗಿದ್ದರೂ ಆಶ್ಚರ್ಯಪಡಬೇಕಾಗಿಲ್ಲ. ಮೊಬೈಲ್‌ ಫೋನ್‌ ಲಭ್ಯವಿರುವ ಪ್ರತಿಯೊಂದು ಊರಿನ ಅಥವಾ ತರಗತಿಯ ಪಡ್ಡೆ ಹುಡುಗರೂ ಇಂಥ ಸೋಶಿಯಲ್‌ ಗ್ರೂಪ್‌ಗಳನ್ನು ರಚಿಸಿಕೊಂಡಿರಬಹುದು. ಈ ಗ್ರೂಪ್‌ಗಳ ಮೂಲಕ ಅವರು ತಮ್ಮ ಕ್ಲಾಸಿನ ಟೆಕ್ಸ್ಟ್‌ ನೋಟ್ಸ್ ಇತ್ಯಾದಿಗಳನ್ನು ಹಂಚಿಕೊಳ್ಳುತ್ತಿದ್ದಾರೆಂದು ನಾವು ಭಾವಿಸಿದರೆ ಬಹುಶಃ ನಾವ ಮೂರ್ಖರಾಗಬೇಕಾಗಬಹುದು. ಅವರ ಗ್ರೂಪ್‌ಗಳಲ್ಲಿ ಏನು ಓಡಾಡುತ್ತಿರುತ್ತದೆ  ಎಂಬುದು ಒಳಹೊಕ್ಕು ನೋಡಿದರೆ ಮಾತ್ರ ಗೊತ್ತಾಗಬಹುದು. ಹೀಗಾಗಿ ಇವರ ಗ್ರೂಪ್‌ಗಳ ಮೇಲೆ ನಿಗಾ ಇಡುವುದು ಒಂದು ವ್ಯವಸ್ಥೆ ಅಥವಾ ಹೆತ್ತವರು ನಿಗಾ ಇಡುವುದು ಅಗತ್ಯವಾಗಿದೆ.

 

ಫೀಲ್‌ ಫ್ರೀ : ಹೆಣ್ಮಕ್ಕಳಿಗೂ ಸೆಕ್ಸ್ ಮಾಡಿದ್ರೆ ಆ ಫೀಲ್ ಸಿಗುತ್ತಾ? 

ಈ ಗ್ರೂಪ್‌ಗಳ ಅಥವಾ ಈ ಮನಸ್ಥಿತಿಯ ಅತ್ಯಂತ ಕೆಟ್ಟ ಪರಿಣಾಮ ಆಗುವುದು ಅವರ ತರಗತಿಯ ಅಥವಾ ಅವರಿಗೆ ಆಪ್ತರಾದ ಹುಡುಗಿಯರ ಮೇಲೆ. ಮೇಲ್ನೋಟಕ್ಕೆ ಸಭ್ಯರಂತೆ ಸಂಭಾವಿತರಂತೆ ಕಾಣಿಸುವ ಈ ಹುಡುಗರು ಅಂತರಂಗದಲ್ಲಿ ಎಷ್ಟು ವಿಕೃತರಾಗಿರುತ್ತಾರೆ ಎಂಬುದನ್ನು ಈ ಗ್ರೂಪ್‌ ನೋಡಿದರೆ ಗೊತ್ತಾಗಬಹುದು. ಹುಡುಗಿ ಒಂಟಿಯಾಗಿ ಸಿಕ್ಕಿದರೆ, ಗ್ರೂಪಿನ ಹುಡುಗರು ಜತೆಯಾಗಿದ್ದರೆ, ಆಗ ಇವರು ಗ್ಯಾಂಗ್‌ರೇಪ್‌ ನಡೆಸಲೂ ಹಿಂಜರಿಯಲಾರರು. ಯಾಕೆಂದರೆ ಆಗ ವ್ಯಕ್ತಿಯ ವೈಯಕ್ತಿಕ ಮಾನಸಿಕತೆ ಹಿಂದೆ ಸರಿದು ಗುಂಪು ಮನೋಭಾವವೇ ಜಾಗೃತವಾಗಿರುತ್ತದೆ ಎನ್ನುತ್ತಾರೆ ಮಾನಸಿಕ ತಜ್ಞರು, ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿರುವದೇ ಇಂಥ ಗುಂಪು ಮನೋಭಾವ. ನಾವು ಇಷ್ಟೊಂದು ಜನರಿದ್ದೇವಲ್ಲ, ಏನು ಮಾಡಿದರೂ ಯಾರಿಗೂ ಗೊತ್ತಾಗಲಾರದು ಅಥವಾ ಗೊತ್ತಾದರೂ ಎಲ್ಲರಿಗೂ ಒಂದೇ ಬಗೆಯ ಶಿಕ್ಷೆಯಾದೀತು ಎಂಬ ಸಲೀಸು ಮನೋಭಾವ ಅವರನ್ನು ಆವರಿಸಿರುತ್ತದೆ. ಅದರ ಜೊತೆಗೆ ಮದ್ಯ ಅಮಲು ಪದಾರ್ಥಗಳ ವ್ಯವಸನವೂ ಸೇರಿಕೊಂಡರೆ ಅಪರಾಧ ಖಚಿತ. ದಿಲ್ಲಿ, ತೆಲಂಗಾಣಗಳಲ್ಲಿ ನಡೆದ ಬರ್ಬರ ಗ್ಯಾಂಗ್‌ರೇಪ್‌ ಪ್ರಕರಣಗಳಲ್ಲಿ ಇಂಥ ಅಮಲುಕೋರತನವೂ, ಪ್ರಚೋದಕ ಲೈಂಗಿಕ ವಿಡಿಯೋಗಳ ಪ್ರಭಾವವೂ ಸಾಕಷ್ಟು ಕಂಡುಬಂದಿದೆ.

 

ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ! 

ಇದನ್ನು ತಡೆಯಲು ಕೆಲವು ದಾರಿ ಅನುಸರಿಸಬಹುದು- ಲೈಂಗಿಕ ಅಪರಾಧ ಪ್ರವೃತ್ತಿ ಹೊಂದಿರುವ ಯುವಕರ ಗ್ರೂಪ್ ಚಾಟ್‌ ಹಿಸ್ಟರಿ, ಇಂಟರ್‌ನೆಟ್‌ ಬ್ರೌಸಿಂಗ್‌ ಹಿಸ್ಟರಿಗಳನ್ನು ಪದೇ ಪದೇ ಪರಿಶೀಲಿಸುತ್ತಿರಬೇಕು. ಲೈಗಿಕ ಗೀಳು ಕಂಡುಬಂದರೆ ಮಾನಸಿಕ ಚಿಕಿತ್ಸೆ ಕೊಡಿಸಬೇಕು. ಇದರಿಂದ ವ್ಯಕ್ತಿಯ ಖಾಸಗಿತನದ ಹಕ್ಕಿಗೆ ಧಕ್ಕೆ ಆಗುವುದಿಲ್ವಾ ಎಂಬ ಮಾತನ್ನೆಲ್ಲ ಸದ್ಯಕ್ಕೆ ಬದಿಗಿಡೋಣ. ನಮ್ಮ ಹದಿಹರೆಯದ ತರುಣಿಯರು, ಸ್ತ್ರೀಯರ ಬದುಕಿನ ಸುರಕ್ಷತೆಗಿಂತ ಹುಡುಗರ ಖಾಸಗಿತನ ಮುಖ್ಯವಾದದ್ದಲ್ಲ. ಹುಡುಗರಲ್ಲಿ ಅಥವಾ ಹುಡುಗಿಯರಲ್ಲಿ ಖಿನ್ನತೆ ಕಂಡುಬಂದರೆ, ಅಸಹಜ ನಡವಳಿಕೆ ಕಂಡುಬಂದರೆ ಅವರನ್ನೂ ಮಾತಾಡಿಸಿ ವಿವರ ಪಡೆಯಬೇಕು. ಸೈಬರ್‌ ತನಿಖೆ ಚುರುಕಾಗಿರಬೇಕು. ಹೆಣ್ಣುಮಕ್ಕಳೂ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಗ್ರಾಮ್‌ನಂಥ ಸೋಶಿಯಲ್‌ ಸೈಟ್‌ಗಳಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವಾಗ ಹುಷಾರಾಗಿರಬೇಕು. ಈ ಫೋಟೋಗಳೂ ಲೈಂಗಿಕ ದುರ್ವ್ಯಸನಿಗಳಿಂದ ದುರುಪಯೋಗಕ್ಕೆ ಒಳಗಾಗಬಹುದು. 

Follow Us:
Download App:
  • android
  • ios