Asianet Suvarna News Asianet Suvarna News

ಫ್ಲರ್ಟಿ ಭಾವನಿಂದ ಹಿಡಿದು ಸಿಡುಕ ಅಂಕಲ್‌ವರೆಗೆ ವಿವಾಹದಲ್ಲಿ ವಿಧವಿಧ ವ್ಯಕ್ತಿತ್ವ

ಮದುವೆಯೊಂದು ನಡೆದು ಎರಡು ವರ್ಷವಾಗುತ್ತಿದ್ದಂತೆಯೇ ಅಲ್ಲಿ ವಧು ಎಂಥ ಬಟ್ಟೆ ಧರಿಸಿದ್ದಳು, ಎಷ್ಟು ಒಡವೆ ಹಾಕಿದ್ದಳು ಎಂಬುದು ಹೋದ ಅತಿಥಿಗಳಿಗೆ ಮರೆತುಹೋಗಬಹುದು. ಆದರೆ, ತಮ್ಮ ಸ್ವಭಾವದಿಂದ ಎಲ್ಲರ ಮಾತಿಗೆ ಸರಕಾದ, ಒಂದು ನೆನಪನ್ನು ಹುಟ್ಟುಹಾಕಿದ ವ್ಯಕ್ತಿತ್ವಗಳು ಮಾತ್ರ ಬಹುತೇಕರ ನೆನಪಿನಲ್ಲುಳಿಯುತ್ತಾರೆ. ಅವರು ಮಾಡಿದ ಕೆಲಸ, ಆಡಿದ ಮಾತು ಬಹುಕಾಲ ಮಾತಿನ ಚಲಾವಣೆಯಲ್ಲುಳಿಯುತ್ತದೆ. 

6 annoying wedding guests you will find in Indian weddings
Author
Bangalore, First Published Oct 13, 2019, 12:24 PM IST

ಮದುವೆ ಎಂದರೆ ಬರೀ ವಧುವರರಲ್ಲ. ಅವರಿಗೆ ಇಷ್ಟವಾಗುತ್ತದೋ ಇಲ್ಲವೋ, ಕೆಲವೊಮ್ಮೆ ವಿವಾಹದಲ್ಲಿ ಅತಿಥಿಗಳಾಗಿ ಬಂದವರು ಎಲ್ಲರ ಗಮನ ಸೆಳೆದು ಮೆರೆಯುವುದಿದೆ. ಮದುವೆಗೆ ಬಂದವರೆಲ್ಲರ ಬಾಯಿಯಲ್ಲೂ ಮಾತಾಗಿ ಬಿಡುವ ಟ್ಯಾಲೆಂಟ್‌ಗಳು ಹಲವರಿರುತ್ತಾರೆ.

ಏನ್ಸಾರ್! ಬ್ರಾಹ್ಮಣರ ಮನೆಯ ಸಾರು ಸೂಪರ್!

ಅದರಲ್ಲೂ ಭಾರತೀಯ ವಿವಾಹಗಳೆಂದರೆ ಅಲ್ಲಿ ಸಿಟ್ಟು ಬರಿಸುವ, ಕಿರಿಕಿರಿ ಎನಿಸುವ ಕೆಲ ಅತಿಥಿಗಳಂತೂ ಇರಲೇಬೇಕು. ವಿವಾಹ ಮುಗಿದ ಮೇಲೂ ಇವರು ಸುದ್ದಿಯಾಗಿ ಚಲಾವಣೆಯಲ್ಲಿರುತ್ತಾರೆ. ಸಿಹಿಯೋ, ಕಹಿಯೋ ನೆನಪಾಗಿ ಉಳಿಯುತ್ತಾರೆ. ನಮ್ಮ ನಿಮ್ಮ ಮದುವೆಗಳಲ್ಲಿ ಕಾಣಬಹುದಾದ ಅಂಥ ಕೆಲವು ಅತಿಥಿಗಳು ಯಾರು ಗೊತ್ತಾ?

ಫ್ಲರ್ಟ್ ಮಾಡುವ ವಿವಾಹಿತ

ಮದುವೆಮನೆ ಎಂದರೆ ಬಹುತೇಕರು ಫ್ಲರ್ಟ್ ಮಾಡಲು ಲೈಸೆನ್ಸ್ ಸಿಕ್ಕಿದಂತೆ ಭಾವಿಸುತ್ತಾರೆ. ಅದರಲ್ಲೂ ಕೆಲ ವಿವಾಹಿತ ಯುವಕರು ಸಣ್ಣ ವಯಸ್ಸಿನ ಯುವತಿಯರನ್ನು ಕಿಚಾಯಿಸುತ್ತಾ ಮಜವಾಗಿ ಫ್ಲರ್ಟ್ ಮಾಡುತ್ತಿರುತ್ತಾರೆ. ಪತ್ನಿಯರ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಕೂಡಾ ಅಲ್ಲಿಯೂ ಏನೋ ತಮಾಷೆ ಮಾಡಿ ತಪ್ಪಿಸಿಕೊಳ್ಳುವ ಛಾತಿಯವರು ಇವರು. 

ಮದುವೆಯಾಗ್ತಿದೀರಾ? ಹಾಗಾದ್ರೆ ಈ 7 ವಿಷಯಗಳನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡ್ಕೋಬೇಡಿ!

ಜಮದಗ್ನಿ ಅಂಕಲ್

ಮದುವೆ ಎಂದೊಡನೆ ಅಲ್ಲಿ ಒಬ್ಬ ಮಾವನ ಭರಾಟೆ ಜೋರಾಗಿರುತ್ತದೆ. ಮೆನುವಿನಿಂದ ಹಿಡಿದು ಡೆಕೋರೇಶನ್‌ವರೆಗೆ, ಮ್ಯೂಸಿಕ್‌ನಿಂದ ಹಿಡಿದು ಗಿಫ್ಟ್‌ವರೆಗೆ ತಮ್ಮ ನಿರ್ಧಾರ ಹೇರುವ ಛಾತಿಯುಳ್ಳ ಮಾವ ಇವರು. ಹಾಗಾಗಿ, ಅಲ್ಲಿ ಉಳಿದವರೆಲ್ಲರಿಗಿಂತ ತಾನು ಪ್ರಮುಖ ವ್ಯಕ್ತಿ ಎಂದು ಬಗೆವ ಈ ಮಾವ, ಸಣ್ಣಪುಟ್ಟ ಕಾರಣಕ್ಕೂ ದೊಡ್ಡದಾಗಿ ಕೂಗಾಡಿ ರೇಗಾಡಿ ಸೀನ್ ಕ್ರಿಯೇಟ್ ಮಾಡುತ್ತಿರುತ್ತಾರೆ.

ಈ ಮನುಷ್ಯನನ್ನು ಖುಷಿಯಾಗಿಡಲು ಒಂದಿಷ್ಟು ಕುಟುಂಬ ಸದಸ್ಯರು ಇವರು ಹೇಳಿದಂತೆಲ್ಲ ಕುಣಿದುಕೊಂಡಿರುತ್ತಾರೆ. ಆದರೆ, ಅವರೇನೇ ಮಾಡಿದರೂ, ಮಾವನನ್ನು ಖುಷಿಯಾಗಿಸುವುದು ಮಾತ್ರ ದುಸ್ತರ.

ಅತಿಯಾಗಿ ಮೇಕಪ್ ಮಾಡಿಕೊಂಡ ಮಹಿಳೆ

ಮೇಕಪ್ ಮಾಡಿ ಮೆರೆಯಲು, ಒಡವೆ ಧರಿಸಿ ಓಡಾಡಲು ಮದುವೆಗಿಂತ ಉತ್ತಮ ಕಾರ್ಯಕ್ರಮ ಇನ್ಯಾವುದಿದೆ? ಆದರೆ ಕೆಲ ಮಹಿಳೆಯರು ಮಾತ್ರ ಇನ್ನು ಇಂಥದ್ದು ಮತ್ತೊಂದು ಕಾರ್ಯಕ್ರಮ ಸಿಗುವುದೇ ಇಲ್ಲವೇನೋ ಎಂಬಂತೆ ಅಡಿಯಿಂದ ಮುಡಿವರೆಗೆ ಅತ್ಯಂತ ಆಡಂಬರವಾಗಿ ಸಿಂಗರಿಸಿಕೊಂಡಿರುತ್ತಾರೆ.

ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!

ಆ ಜಿಗಿಜಿಗಿ ಸೀರೆಗೆ ಮತ್ತಷ್ಟು ಒಡವೆಗಳನ್ನು ಹೇರಿಕೊಂಡು, ಮುಖದಲ್ಲಿ ಎರಡಿಂಚು ಮೇಕಪ್ ಮೆತ್ತಿಕೊಂಡು ಮದುವೆಯಲ್ಲಿ ಪದೇ ಪದೆ ಹಿಂದೆ ಮುಂದೆ ಓಡಾಡುವ ಈ ಮಹಿಳೆಯನ್ನು ನೋಡುವುದೇ ಒಂದು ಮನರಂಜನೆ. 

ಮ್ಯಾಚ್‌ಮೇಕರ್ಸ್

ಮದುವೆಮನೆ ಎಂದರೆ ಅದು ಬಹಳ ಹಿಂದಿನಿಂದಲೂ ಬೇರೆ ಯುವಕ ಯುವತಿಯರಿಗೆ ಜೋಡಿ ಹುಡುಕಲು ಸರಿಯಾದ ಉಚಿತ ವಧು ವರಾನ್ವೇಷಣಾ ಕೇಂದ್ರ. ಮದುವೆಮನೆಯಲ್ಲಿ ಬಂದ ಕೆಲವೊಂದಿಷ್ಟು ಮಹಿಳೆಯರು ಹಾಗೂ ಅಂಕಲ್‌ಗಳಿಗೆ ಯಾರು ವಿವಾಹವಾಗಬೇಕಾದ ಯುವಕರಿದ್ದಾರೆ, ಯುವತಿಯರಿದ್ದಾರೆ ಎಂದು ದುರ್ಬೀನು ಹಾಕಿ ಹುಡುಕುವುದೇ ಕೆಲಸ. ಇವರು ಕಣ್ಣಿಗೆ ಚೆಂದವೆನಿಸಿದವರ ಬಗ್ಗೆಯೆಲ್ಲ ಅವರಿವರ ಬಳಿ ವಿಚಾರಿಸಿ ಮಾಹಿತಿ ಸಂಗ್ರಹಿಸಿರುತ್ತಿರುತ್ತಾರೆ.

ಅಷ್ಟೇ ಅಲ್ಲ, ಅಲ್ಲಿಯೇ ಜೋಡಿ ಮಾಡುವ ನಿರ್ಧಾರವನ್ನೂ ಕೈಗೊಳ್ಳುತ್ತಾರೆ- ಅರೆ ಅವನು ಬಹಳ ಎತ್ತರವಾಗಿ ಚೆನ್ನಾಗಿದ್ದಾನೆ. ಅವಳು ಬೆಳ್ಳಗಿದ್ದಾಳೆ, ಜೋಡಿ ಚೆನ್ನಾಗಾಗುತ್ತದೆ ಎಂದು ಅವರ ಮೆದುಳು ಕ್ಷಣವೊಂದರಲ್ಲಿ ಹೇಳಿಬಿಡುತ್ತದೆ. ಇನ್ನು ಗಂಡು ನೋಡುತ್ತಿರುವ ಯುವತಿಯರೂ, ಹೆಣ್ಣು ನೋಡುತ್ತಿರುವ ಯುವಕರೂ ಇದೇ ಕಾರಣಕ್ಕಾಗಿ ಚೆನ್ನಾಗಿ ರೆಡಿಯಾಗಿ ಮದುವೆ ಅಟೆಂಡ್ ಮಾಡುವುದು ಕೂಡಾ ಸಾಮಾನ್ಯ ವಿಷಯ. 

Pre-Wedding Shoot: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಪೊಲೀಸ್!

ಅತಿಥಿಗಳೂ, ಅವರ ಗೆಳೆಯರೂ

ಭಾರತೀಯರ ವಿವಾಹದಲ್ಲಿ ಅತಿಥಿಗಳ ಸಂಖ್ಯೆಗೆ ಮಿತಿಯೇನೂ ಇಲ್ಲ. ಕಾರ್ಡ್ ತೋರಿಸಿಯೇ ಒಳಬರಬೇಕೆಂಬ ನಿಯಮವಿಲ್ಲ. ಹೀಗಾಗಿ, ಅತಿಥಿಗಳಲ್ಲಿ ಹಲವರು, ತಮ್ಮ ಪರಿಚಯದವರು, ಗೆಳೆಯರು ಮುಂತಾದವರನ್ನು ಜೊತೆಗೆ ಕರೆದುಕೊಂಡು ಬಂದಿರುತ್ತಾರೆ. ಇನ್ನು ಕೆಲ ಅಪರಿಚಿತರು ಹೀಗೆ ಮದುವೆಮನೆಗೆ ಬಿಟ್ಟಿ ಊಟ ಮಾಡಿಹೋಗಲೆಂದೇ ಬಂದಿರುತ್ತಾರೆ. ಶುಭಕಾರ್ಯದಲ್ಲಿ ಊಟ ಬಯಸಿ ಬಂದವರನ್ನು ದೂರವಿಡುವ ಮನಸ್ಸು ಯಾರಿಗೂ ಇರುವುದಿಲ್ಲವಾದ್ದರಿಂದ ಇದನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. 

ಪ್ರಭುದೇವ 

ಸಂಬಂಧಿಕರ ಯಾವುದೇ ಮದುವೆ ಇರಲಿ, ಅದರಲ್ಲಿ ಈ ಪ್ರಭುದೇವನ ಡ್ಯಾನ್ಸ್ ಇರಲೇಬೇಕು. ಇಷ್ಟಕ್ಕೂ ಮ್ಯೂಸಿಕ್ ಬಗ್ಗೆ ಈತ ಕೇರ್ ಮಾಡುವುದಿಲ್ಲ, ತನಗೆ ಗೊತ್ತಿರುವ ಅದೇ ನಾಲ್ಕು ಸ್ಟೆಪ್‌ಗಳನ್ನಿಟ್ಟುಕೊಂಡು ಆತ ಯಾವುದೇ ಸಂಗೀತಕ್ಕೆ ಡ್ಯಾನ್ಸ್ ಶುರು ಹಚ್ಚಬಲ್ಲ. ಅಷ್ಟೇ ಅಲ್ಲ, ಬಂದವರನ್ನೂ ಕುಣಿಸಬಲ್ಲ. ಇದೇ ಕಾರಣಕ್ಕಾಗಿ ಈತನೆಂದರೆ ಸಂಬಂಧಿಕರಿಗೆ ಅಚ್ಚುಮೆಚ್ಚು. ಮದುವೆ ಬಸ್‌ನಲ್ಲಿ, ವಿವಾಹದ ಹಿಂದಿನ ದಿನ, ವಿವಾಹದ ದಿನ, ಮರುದಿನ - ಹೀಗೆ ಯಾವಾಗ ಬೇಕಾದರೆ ಆಗ, ಎಲ್ಲಿ ಬೇಕೆಂದರಲ್ಲಿ ಆತ ಡ್ಯಾನ್ಸ್ ಮಾಡಿ ಕಾರ್ಯಕ್ರಮದ ಮನರಂಜನೆ ಹೆಚ್ಚಿಸಬಲ್ಲ.

Follow Us:
Download App:
  • android
  • ios