Asianet Suvarna News Asianet Suvarna News

ನನ್ನ ಮಕ್ಕಳು ಬರು​ತ್ತಿ​ರು​ವುದೇ ನನಗೆ ದೊಡ್ಡ ಹಬ್ಬ : ಡಿಕೆಶಿ ತಾಯಿ ಗೌರ​ಮ್ಮ

ತಿಹಾರ್ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಬಿಡುಗಡೆಯಾಗಿದ್ದು, ನನ್ನ ಮಕ್ಕಳು ನನ್ನ ಮನೆಗೆ ವಾಪಸಾಗುತ್ತಿರುವೇ ಹಬ್ಬ ಎಂದು ತಾಯಿ ಗೌರಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. 

DK Shivakumar Mother Happy Over Son Released From Jail
Author
Bengaluru, First Published Oct 24, 2019, 8:42 AM IST

ರಾಮ​ನ​ಗರ [ಅ.24]: ನನ್ನ ಮಗ ಹೇಗೊ ರಿಲೀಸ್‌ ಆದ ಸುದ್ದಿ ಕೇಳಿ ತುಂಬಾ ಸಂತೋಷ ಆಗು​ತ್ತಿದೆ. ನನ್ನ ಮಕ್ಕಳು ಬರು​ತ್ತಿ​ರು​ವುದೇ ನನಗೆ ದೊಡ್ಡ ಹಬ್ಬ ಎಂದು ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಅವರ ತಾಯಿ ಗೌರಮ್ಮ ಪ್ರತಿ​ಕ್ರಿ​ಯಿ​ಸಿ​ದರು.

ಕನ​ಕ​ಪುರ ತಾಲೂ​ಕಿನ ಕೋಡಿ​ಹಳ್ಳಿ ಗ್ರಾಮ​ದ ನಿವಾ​ಸ​ದಲ್ಲಿ ತಮ್ಮನ್ನು ಭೇಟಿ​ಯಾದ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಗೌರಮ್ಮ ಅವರು, ನನ್ನ ಮಕ್ಕಳು ನನ್ನ ಜತೆ​ಯಿ​ದ್ದರೆ ಅದ​ಕ್ಕಿಂತ ಖುಷಿಯ ವಿಷಯ ಮತ್ತೊಂದಿಲ್ಲ. ನನ್ನ ಮಗ ಬಂದ​ರೆ ಅದೇ ಹಬ್ಬ. ಪಟಾಕಿ ಹೊಡೆ​ಯಲೇ ಬೇಕಾ​ಗಿ​ಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನ ಮಕ್ಕಳು ಗೌರಿ ಹಬ್ಬ ಮತ್ತು ದಸರಾ ಹಬ್ಬ​ದಲ್ಲಿ ಇರ​ಲಿಲ್ಲ. ಇದ​ರಿಂದ ಮನ​ಸ್ಸಿ​ಗೆ ತುಂಬಾ ನೋವಾ​ಗಿತ್ತು. ನನ್ನ ಮಗನ ಬಿಡು​ಗ​ಡೆ​ಗಾಗಿ ದೇವ​ರಲ್ಲಿ ಬೇಡಿ​ಕೊಂಡಿ​ದ್ದೆವು. ನಮ್ಮ ಪ್ರಾರ್ಥ​ನೆಗೆ ದೇವರು ಆಸೀ​ರ್ವಾದ ಮಾಡಿ​ದ್ದಾನೆ. ಮಗನ ಬಿಡು​ಗ​ಡೆಯ ಸುದ್ದಿ ಕೇಳಿ ಆಗು​ತ್ತಿ​ರುವ ಖುಷಿಗೆ ಏನು ಮಾತ​ನಾ​ಡ​ಬೇಕು ಎಂಬು​ದೇ ಗೊತ್ತಾ​ಗು​ತ್ತಿಲ್ಲ ಎಂದು ಹೇಳಿ​ದ​ರು.

Follow Us:
Download App:
  • android
  • ios