Asianet Suvarna News Asianet Suvarna News

ಆಡಿಯೋ ಕೇಸ್: ಸುಪ್ರೀಂನಲ್ಲಿ ಕೈ ಮೇಲು, BSY, ಅನರ್ಹ ಶಾಸಕರಿಗೆ ಸಂಕಷ್ಟ

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಿಎಸ್ ಯಡಿಯೂರಪ್ಪನವರ ಆಪರೇಷನ್ ಕಮಲ ಆಡಿಯೋ ಕೇಸ್ ಅನ್ನು ಸುಪ್ರೀಂಕೋರ್ಟ್ ಪರಿಗಣಿಸಿದ್ದು, ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ಇದ್ರಿಂದ ಬಿಎಸ್ ವೈ ಹಾಗೂ ಅನರ್ಹ ಶಾಸಕರಿಗೆ ಆತಂಕ ಶುರುವಾಗಿದೆ.

sc Accepted congress request over cm Yediyurappa audio  Case Hearing on Nov 5
Author
Bengaluru, First Published Nov 4, 2019, 6:56 PM IST

ನವದೆಹಲಿ/ಬೆಂಗಳೂರು,[ನ.04]: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಡಿಯೋ ಸಾಕ್ಷ್ಯವನ್ನು ಸುಪ್ರೀಂಕೋರ್ಟ್ ಪರಿಗಣಿಸಿದ್ದು, ಈ ಕುರಿತು ನಾಳೆ(ಮಂಗಳವಾರ) ಆಡಿಯೋ ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಇದರಿಂದ ಅನರ್ಹರಿಗೆ ಆತಂಕ ಶುರುವಾಗಿದೆ.

ಯಾಕಂದ್ರೆ, ಈಗಾಗಲೇ ಸುಪ್ರೀಂ ಕೋರ್ಟ್ ಅನರ್ಹರ ವಿಚಾರಣೆಯನ್ನು ಮುಗಿಸಿದ್ದು, ತೀರ್ಪು ನಿಡುವುದೊಂದೇ ಬಾಕಿ ಇತ್ತು. ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ತೀರ್ಪು ಪ್ರಕಟವಾಗುವ ಎಲ್ಲಾ ನಿರೀಕ್ಷೆಗಳಿದ್ದವು. ಆದ್ರೆ, ಇದೀಗ ಯಡಿಯೂರಪ್ಪನವರ ಆಪರೇಷನ್ ಕಮಲದ ಆಡಿಯೋ ಸ್ಫೋಟಗೊಂಡಿದ್ದು, ಅನರ್ಹ ಶಾಸಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ದೋಸ್ತಿ ಬೀಳಲು ಅಸಲಿ ನಿರ್ದೇಶಕರು ಯಾರು, ಸಿದ್ದರಾಮಯ್ಯ ಕೊಟ್ಟ ಸಾಕ್ಷ್ಯಗಳು!

ಇಂದು [ಸೋಮವಾರ]  ನ್ಯಾಯಾಧೀಶ ಎನ್.ವಿ.ರಮಣ ಅವರ ಮುಂದೆ ಆಡಿಯೋ ಬಗ್ಗೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಪ್ರಸ್ತಾಪ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು,ಈಗಾಗಲೇ ವಿಚಾರಣೆ ಮುಗಿದಿದ್ದು, ಈಗ ಏನು ಹೇಳಬೇಕು ಕಪಿಲ್ ಸಿಬಲ್ ಅವರಿಗೆ ಪ್ರಶ್ನಿಸಿದರು.

ವಿಚಾರಣೆ ಮುಗಿದ ಬಳಿಕ ಮಹತ್ವದ ಬೆಳವಣಿಗೆ ನಡೆದಿದ್ದು, ಆಡಿಯೋ ಕ್ಲಿಪ್ ಲೀಕ್ ಆಗಿದೆ. ಹಾಗಾಗಿ ನ್ಯಾಯಾಲಯದ ಗಮನಕ್ಕೆ ತರಬೇಕಿದೆ. ಲೀಕ್ ಆಗಿರುವ ಆಡಿಯೋವನ್ನು ಭಾಷಾಂತರ ಮಾಡಲಾಗಿದ್ದು, ನ್ಯಾಯಾಲಯ ಪರಿಗಣಿಸಬೇಕೆಂದು ಕಪಿಲ್ ಸಿಬಲ್ ಮನವಿ ಮಾಡಿಕೊಂಡರು.

ಅನರ್ಹ ಶಾಸಕರಿಗೆ ಎದುರಾಯ್ತು ಮತ್ತೊಂದು ಕಂಟಕ !

ಮನವಿ ಆಲಿಸಿದ ನ್ಯಾಯಾಧೀಶರು, ನಿಮ್ಮದು ಸೇರಿ ಕೆಲವು ಪ್ರಕರಣ ಇತ್ಯರ್ಥ ಪಡಿಸಬೇಕು. ಹಾಗಾಗಿ ನಾಳೆ [ಮಂಗಳವಾರ] ಕೆಲ ಸಮಯ ಹಳೆಯ ಪೀಠವನ್ನು ಮುಂದುವರಿಸೋಣ. ನಿಮ್ಮ ಮನವಿ ಏನಿದೆ ಸಲ್ಲಿಸಿ, ನಾಳೆ ಪರಿಶೀಲಿಸೋಣ ಎಂದು ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.

Follow Us:
Download App:
  • android
  • ios