Asianet Suvarna News Asianet Suvarna News

ಮಂಡ್ಯದಿಂದ ನಿಖಿಲ್ ಸ್ಪರ್ಧೆ : JDS ನಿಂದಲೇ ವಿರೋಧ

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲು ಒಲವು ತೋರಿದ್ದು,  ಇದಕ್ಕೆ ಮಂಡ್ಯ ಜೆಡಿಎಸ್ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. 

Lok Sabha Election 2019 JDS Leader Opposed To nikhil Kumaraswamy Contest From Mandya
Author
Bengaluru, First Published Mar 1, 2019, 12:39 PM IST

ಮಂಡ್ಯ :  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಜೆಡಿಎಸ್ ನಾಯಕರು ನಿಖಿಲ್ ಸ್ಪರ್ಧೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮಂಡ್ಯದಿಂದ ನಿಖಿಲ್ ಸ್ಪರ್ಧಿಸುವುದಕ್ಕೆ ಸಂಸದ ಎಲ್.ಆರ್. ಶಿವರಾಮೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸಂಸದನಾಗಿ 6 ತಿಂಗಳಿಗೆ ಮನೆಗೆ ಹೋಗಲು ಬಂದವನಲ್ಲ.  ಮಂಡ್ಯದ ಕೆಲ ಜೆಡಿಎಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಿವಿ ಊದಿ ನಿಖಿಲ್ ಕಣಕ್ಕಿಳಿಸಲು ಆಶಯ ವ್ಯಕ್ತಪಡಿಸುತ್ತಿದ್ದಾರೆ.  ಸಿಎಂ ಮಗ ಕಣಕ್ಕಿಳಿಯುವಾಗ‌ ನಾನು‌ ಹಠಕ್ಕೆ ಬಿದ್ದು, ಟಿಕೆಟ್ ಕಿತ್ತುಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.  

ಸುಮಲತಾ ಅಂಬರೀಶ್‌ಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರ ಆಫರ್ ಮಾಡಿದ ಕಾಂಗ್ರೆಸ್

ಕುಮಾರಸ್ವಾಮಿ ತಮ್ಮನ್ನ ಬೆಂಬಲಿಸುತ್ತಾರೆ ಎಂದು ಮಂಡ್ಯದ ಬುದ್ದಿವಂತರು ನಿಖಿಲ್ ಕಣಕ್ಕೆ ಇಳಿಸಲು ಹೇಳುತ್ತಿದ್ದಾರೆ. ಅಲ್ಲದೇ ಅವರನ್ನು ಚುನಾವಣೆ ಕಣಕ್ಕೆ ಇಳಿಸಿದಲ್ಲಿ ಗೆಲ್ಲಿಸುವುದಾಗಿಯೂ ಮೈಸೂರಿನಲ್ಲಿ ಗೌಪ್ಯ ಸಭೆ ಮಾಡಿದ್ದಾರೆ ಎಂದು ಶಿವರಾಮೇಗೌಡ ಆರೋಪಿಸಿದ್ದಾರೆ. 

ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧವೂ ಪರೋಕ್ಷ ವಾಗ್ದಾಳಿ‌ ನಡೆಸಿದ ಸಂಸದ ಶಿವರಾಮೇಗೌಡ, ಬುದ್ಧಿವಂತ ನಾಯಕರ ಈ ಚಿಲ್ಲರೆ ಆಟ ನಡೆಯಬಾರದು. ಆದ್ದರಿಂದ ನಾನೇ ನೇರವಾಗಿ ನಿಖಿಲ್ ಬಂದರೆ‌ ಸ್ವಾಗತಿಸುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.  

‘ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ

ಇನ್ನು ಹಾಸನದಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಂಬಂಧಿಸಿದಂತೆ ತಮಗೆ ಇನ್ನೂ 2 ವರ್ಷ ಕಾಲಾವಕಾಶ ಬೇಕು ಎಂದು ಸ್ಟೇ ತಂದರು. ಆದರೆ ರಾಜಕೀಯದಲ್ಲಿರುವ ನಾನು ಈ ರೀತಿ ಸ್ಟೇ ತರಲು ಆಗುತ್ತದೆಯಾ ಎಂದು ಶಿವರಾಮೇಗೌಡ ಪ್ರಶ್ನಿಸಿದರು.

ನಿಖಿಲ್ ಕುಮಾರಸ್ವಾಮಿ ಅವರನ್ನು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಿ ಎಂದು ಯಾರೋ ಜಿಲ್ಲಾ ಪಂಚಾಯ್ತಿ ಮೆಂಬರ್ ಗಳು ಪ್ರೆಸ್ ಮೀಟ್ ಮಾಡುತ್ತಾರೆ. ಡಿ.ಸಿ.ತಮ್ಮಣ್ಣ ಪುತ್ರನೊಂದಿಗೆ  ನಿಖಿಲ್ ಸುತ್ತಾಡುತ್ತಿದ್ದಾರೆ. ನಿಖಿಲ್ ಗೆ ಟಿಕೆಟ್ ನೀಡಿದರೆ ನನಗೂ ಸರಿ ಸಮನಾದ ಸ್ಥಾನ ನೀಡಬೇಕು ಎಂದು ಕೇಳುತ್ತೇನೆ. ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios