Asianet Suvarna News Asianet Suvarna News

8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ

ಕರ್ನಾಟಕ ಮೈತ್ರಿ ಸರ್ಕಾರ ಸಚಿವ ಸಂಪುಟ ಪುನಾರಚನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು  ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಟ್ಟು, 8 ಶಾಸಕರಿಗೆ ಮಂತ್ರಿಗಿರಿ ಹಾಗೂ ನಿಗಮ ಮಂಡಳಿಗೆ 20 ಶಾಸಕರುಗಳ ಹೆಸರುಗಳನ್ನು ಫೈನಲ್ ಮಾಡಲಾಗಿದೆ. ಹಾಗಾದ್ರೆ ಯಾರಿಗೆಲ್ಲ ಮಂತ್ರಿ ಬಾಗ್ಯ? ಯಾರಿಗೆಲ್ಲ ನಿಗಮ ಮಂಡಳಿ?

Karnataka cabinet expansion The Final List Of Minister and board corporations chairmen
Author
Bengaluru, First Published Dec 21, 2018, 10:03 PM IST

ಬೆಂಗಳೂರು, [ಡಿ.21]: ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿದ್ದ ಕರ್ನಾಟಕ ಮೈತ್ರಿ ಸರ್ಕಾರ ಸಚಿವ ಸಂಪುಟ ಪುನಾರಚನೆಗೆ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಇಂದು [ಶುಕ್ರವಾರ] ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದು, ನೂತನ ಸಚಿವರ ಪಟ್ಟಿಗೆ ರಾಹುಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ರಾಹುಲ್ ಜತೆ ಸಭೆ ಅಂತ್ಯ: ಕಾಂಗ್ರೆಸ್‌ನ 8 ಶಾಸಕರಿಗೆ ಸಚಿವಗಿರಿ

ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಟ್ಟು, 8 ಶಾಸಕರಿಗೆ ಮಂತ್ರಿಗಿರಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಮಂತ್ರಿ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಧಾನ ಪಡಿಸಲು ನಿರ್ಧರಿಸಿದ್ದಾರೆ.

ಯಾರಿಗೆ ಮಂತ್ರಿ ಚಾನ್ಸ್..?

 ಹಾಲಿ ಸಚಿವರಾದ  ರಮೇಶ್ ಜಾರಕಿಹೊಳಿ ಹಾಗೂ ಆರ್. ಶಂಕರ್ ಗೆ ಕೊಕ್ ನೀಡಲಾಗಿದ್ದು,  ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸಿ.ಎಸ್.ಶಿವಳ್ಳಿ, ಇ.ತುಕಾರಾಂ, ಎಂ.ಟಿ.ಬಿ.ನಾಗರಾಜ್, ರಹೀಂಖಾನ್, ಪಿ.ಟಿ.ಪರಮೇಶ್ವರ್ ನಾಯ್ಕ್ ಮತ್ತು ಎಂ.ಬಿ.ಪಾಟೀಲ್ ಗೆ ಮಂತ್ರಿ ಸೀಟು ಪಕ್ಕಾ ಆಗಿದೆ. 

ನಿಗಮ ಮಂಡಳಿಗೆ 20 ಶಾಸಕರು ಫೈನಲ್

ನೂತನ ಸಚಿವರ ಪಟ್ಟಿ ಜೊತೆ  20 ಶಾಸಕರ ಹೆಸರುಗಳು ನಿಗಮ ಮಂಡಳಿಗೆ  ಫೈನಲ್ ಮಾಡಲಾಗಿದೆ.  ಬಿಡಿಎ ಅಧ್ಯಕ್ಷರಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್,  ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ಶಾಸಕ ಡಾ.ಸುಧಾಕರ್,  ಕರ್ನಾಟಕ ಭೂಸೇನಾ ನಿಗಮದ ಹುದ್ದೆಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಅಂತಿಮಗೊಳಿಸಿದ್ದಾರೆ. 

ಇನ್ನು ನಾರಾಯಣ್ ರಾವ್, ಉಮೇಶ್ ಜಾಧವ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಅಬ್ಬಯ್ಯ ಪ್ರಸಾದ್, ನರೇಂದ್ರ, ಎನ್.ಎ.ಹ್ಯಾರಿಸ್, ಸಂಗಮೇಶ್ ಸೇರಿದಂತೆ ನಿಗಮ ಮಂಡಳಿಗೆ 20 ಶಾಸಕರುಗಳ ಹೆಸರುಗಳನ್ನು ಫೈನಲ್ ಮಾಡಲಾಗಿದೆ.

ಮಹಿಳಾ ಶಾಸರುಗಳಿಗೆ ಹುದ್ದೆ ಭಾಗ್ಯ
ಮೂವರು ಮಹಿಳಾ ಶಾಸಕಿಯರಾದ ರೂಪಾ ಶಶಿಧರ್, ಸೌಮ್ಯಾ ರೆಡ್ಡಿ ಮತ್ತು ಅಂಜಲಿ ನಿಂಬಾಳ್ಕರ್ ಸೇರಿದಂತೆ ಒಟ್ಟು 7 ಜನರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಇನ್ನು ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಗೆ ದೆಹಲಿ ವಿಶೇಷ ಪ್ರತಿನಿಧಿ, ಹಾಗೂ ಸಂಸದ ವಿ ಮುನಿಯಪ್ಪಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಮಾಡಲಾಗಿದೆ.

Follow Us:
Download App:
  • android
  • ios