Asianet Suvarna News Asianet Suvarna News

ಪ್ರತಾಪ್ ಸಿಂಹ ಪ್ರತಿಸ್ಪರ್ಧಿ ಯಾರು..? ಬಹಿರಂಗಪಡಿಸಿದ H ವಿಶ್ವನಾಥ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವುದನ್ನು ಎಚ್.ವಿಶ್ವನಾಥ್ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೇ ಅಭ್ಯರ್ಥಿ ಹೆಸರನ್ನು ಬಹಿರಂಗಪಡಿಸಿದ್ದಾರೆ.

JDS State President H vishwanath Hints Who is Mysuru candidate for Loksabha Election
Author
Bengaluru, First Published Jan 27, 2019, 5:15 PM IST

ಮೈಸೂರು,(ಜ.27): ಮೈಸೂರು- ಕೊಡಗು ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಫಿಕ್ಸ್ ಆಗಿದ್ದು, ಹುಣಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅಭ್ಯರ್ಥಿ ಹೆಸರು ಘೋಷಿಸಿದ್ದಾರೆ.

ಹುಣಸೂರಿನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ದೋಸ್ತಿ ಸರ್ಕಾರದ ಸೀಟು ಹಂಚಿಕೆ ಬಹುತೇಕ ಪೂರ್ಣಗೊಂಡಿದೆ.

ಲೋಕಸಭೆ ಚುನಾವಣೆ: ರಾಜ್ಯ ಬಿಜೆಪಿಯಲ್ಲಿ ಶುರುವಾಯ್ತು ತಳಮಳ!

 ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್  ಮೈಸೂರು- ಕೊಡಗು ಲೋಕಸಭಾ ಅಭ್ಯರ್ಥಿ ಎಂದು ಹೇಳಿದರು. ಈ ಮೂಲಕ ಮೈಸೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.

ವಿಶ್ವನಾಥ್ ಅವರ ಈ ಹೇಳಿಕೆಯನ್ನು ನೋಡಿದ್ರೆ ಈಗಾಗಲೇ ಮೈಸೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದು ಮಾತ್ರವಲ್ಲದೇ ಅಭ್ಯರ್ಥಿಯನ್ನು ಫೈನಲ್ ಆಗಿದೆ.

ರಂಗೇರಿತು ಲೋಕಸಭಾ ಎಲೆಕ್ಷನ್ : ಮೊದಲ ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ

ವಿಶ್ವನಾಥ್ ಘೋಷಿಸಿದಂತೆ ವಿಜಯಶಂಕರ್ ಹಾಗೂ ಹಾಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ನಡುವೆ ನೇರ ಹಣಾಹಣಿ ನಡೆಯಲಿದೆ.

Follow Us:
Download App:
  • android
  • ios