Asianet Suvarna News Asianet Suvarna News

ಕೊನೆಗೂ ನಿಗಮ ಮಂಡಳಿಗೆ ಕುಮಾರಸ್ವಾಮಿ ಅಂಕಿತ: ಯಾರಿಗೆಲ್ಲ ಚಾನ್ಸ್?

ಕೊನೆಗೂ ನಿಗಮ ಮಂಡಳಿ ಸಹಿ ಹಾಕಿದ ಸಿಎಂ ಕುಮಾರಸ್ವಾಮಿ! ಕಾಂಗ್ರೆಸ್ ಪಟ್ಟಿಯಲ್ಲಿ ಕೆಲವಕ್ಕೆ ಸಿಎಂ ಬ್ರೇಕ್! ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿ 19ರಲ್ಲಿ 14 ನಿಗಮಕ್ಕೆ ಮಾತ್ರ ನೇಮಕಾತಿ! JDS ಖಾತೆಗೆ ಸಂಬಂಧಿಸಿದ ಮತ್ತು ಪ್ರಮುಖ ನಿಗಮಕ್ಕೆ ನೇಮಕ ಇಲ್ಲ! ಹಾಗಾದ್ರೆ 14 ನಿಗಮ ಮಂಡಳಿ ಪಟ್ಟಿಯಲ್ಲಿ ಯಾರೆಲ್ಲ ಹೆಸರುಗಳಿವೆ? ಇಲ್ಲಿದೆ ಪಟ್ಟಿ. 

CM  HD Kumaraswamy appoints 14 Boards and Corporations chairmen
Author
Bengaluru, First Published Jan 6, 2019, 8:46 PM IST

ಬೆಂಗಳೂರು, [ಜ.06]: ಹಗ್ಗಜಗ್ಗಾಟದ ಮಧ್ಯೆಯೂ ಕಾಂಗ್ರೆಸ್ ನಿಗಮ ಮಂಡಳಿ ಪಟ್ಟಿಗೆ ಕೊನೆಗೂ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಸಹಿ ಹಾಕಿದ್ದಾರೆ.

ಆದ್ರೆ ಕಾಂಗ್ರೆಸ್ ಸೂಚಿಸಿದ್ದ 19ರಲ್ಲಿ ಕುಮಾರಸ್ವಾಮಿ ಅವರು 14 ನಿಗಮ ಮಂಡಳಿಗಳಿಗೆ ಮಾತ್ರ ನೇಮಿಸಿ ಆದೇಶ ಹೊರಡಿಸಿದ್ದಾರೆ. 

14 ಶಾಸಕರಿಗೆ ನಿಗಮ ಮಂಡಳಿಗೆ ಜೊತೆಗೆ 8 ಸಂಸದೀಯ ಕಾರ್ಯದರ್ಶಿಗೂ ಸಹಿ ಹಾಕಿದೆ. ಆದ್ರೆ ಕಾಂಗ್ರೆಸ್ ಕಳುಹಿಸಿದ ನಿಗಮ ಮಂಡಳಿ ಪಟ್ಟಿಯಿಂದ ಐವರ ಹೆಸರುಗಳು ಕಾಣೆಯಾಗಿವೆ.

ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಘೋಷಣೆ: ಯಾರಿಗೆ? ಯಾವುದು?

ಕಾಂಗ್ರೆಸ್ ಕಳಿಸಿದ ಪಟ್ಟಿಯಲ್ಲಿ ಟಿ.ವೆಂಕಟರಮಣಯ್ಯ, S.N.ಸುಬ್ಬಾರೆಡ್ಡಿ, N.A.ಹ್ಯಾರಿಸ್ , S.T.ಸೋಮಶೇಖರ್, ಡಾ.ಕೆ.ಸುಧಾಕರ್ ಹೆಸರಗಳಿದ್ದವು.

ಆದ್ರೆ ಇವರುಗಳ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ.  ಇದ್ರಿಂದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದ್ದು, ಮತ್ತೆ ದೋಸ್ತಿಗಳ ನಡುವಿನ ಕುಸ್ತಿ ಮುಂದುವರಿಯುವ ಸಾಧ್ಯತೆಗಳಿವೆ.

ನಿಗಮ ಮಂಡಳಿ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ? 

1. ಕರ್ನಾಟಕ ಭೂ ಸೇನಾ ನಿಗಮ- ಬಿ.ಕೆ.ಸಂಗಮೇಶ್ವರ್​
2. ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ- ನರೇಂದ್ರ ಆರ್.​
3. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ- ಬಿ.ನಾರಾಯಣ ರಾವ್​.
4. ಕರ್ನಾಟಕ ಗೋದಾಮು ನಿಗಮ- ಡಾ.ಉಮೇಶ್​ ಜಿ. ಜಾಧವ್​.
5. ಹಟ್ಟಿ ಚಿನ್ನದ ಗಣಿ ಲಿಮಿಟೆಡ್​- ಟಿ.ರಘುಮೂರ್ತಿ.
6. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ- ಯಶ್ವಂತ್​ ರಾಯ್​ ಗೌಡ ವಿ.ಪಾಟೀಲ್.
7. ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಮಂಡಳಿ- ಬಿ.ಎ.ಬಸವರಾಜು.
8. ಕರ್ನಾಟ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ  ಮಂಡಳಿ[ಕಿಯಾನಿಕ್ಸ್​]- ಬಿ.ಶಿವಣ್ಣ.
9. ಡಾ.ಬಿ.ಆರ್.ಅಂಬೇಡ್ಕರ್​ ಅಭಿವೃದ್ಧಿ ನಿಗಮ- ನಾರಾಯಣಸ್ವಾಮಿ ಎಸ್.ಎನ್​.
10.  ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ- ಮುನಿರತ್ನ.
11.ವಾಯವ್ಯ ಕೆಎಸ್​ಆರ್​ಟಿಸಿ- ಶಿವರಾಮ್​ ಹೆಬ್ಬಾರ್.
12. ಕೆಎಸ್​ಎಸ್​ಐಡಿಸಿ- ಬಿ.ಎಸ್​ ಸುರೇಶ್​,.
13. ಮೈಸೂರು ಮಿನರಲ್ಸ್ ಲಿಮಿಟೆಟ್ – ಲಕ್ಷ್ಮೀ ಹೆಬ್ಬಾಳ್ಕರ್
14. ಮಲ್ನಾಡ್ ಏರಿಯಾ ಅಭಿವೃದ್ದಿ ಪ್ರಾಧಿಕಾರ – ಟಿ.ಡಿ ರಾಜೇಗೌಡ.

ಸಂಸದೀಯ ಕಾರ್ಯದರ್ಶಿಗಳು:
1. ಕೆ.ಅಬ್ದುಲ್ ಜಬ್ಬಾರ್, ಎಮ್ಎಲ್​ಸಿ
2. ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್, ಶಾಸಕಿ
3. ಐವಾನ್ ಡಿಸೋಜ, ಎಮ್ಎಲ್​ಸಿ
4. ಕೌಜಲಗಿ ಮಹಂತೇಶ್ ಶಿವಾನಂದ್, ಶಾಸಕ
5. ರೂಪಕಲಾ ಎಮ್ ಶಶಿಧರ್, ಶಾಸಕಿ
6. ಗೋವಿಂದರಾಜ್, ಎಮ್ಎಲ್​ಸಿ
7. ಕೆ.ರಾಘವೇಂದ್ರ ಬಸವರಾಜ್ ಹಿಟ್ನಾಳ್, ಶಾಸಕ
8. ಡಿ.ಎಸ್ ಹೂಲಗೇರಿ,  ಶಾಸಕ

Follow Us:
Download App:
  • android
  • ios