Asianet Suvarna News Asianet Suvarna News

#AirStrike ನಿಂದ ಬಿಜೆಪಿಗೆ 22 ಸೀಟು ಖಚಿತ: ಯಡಿಯೂರಪ್ಪಗೆ ಛೀಮಾರಿ

ಪಾಕಿಸ್ತಾನ ಗಡಿ ದಾಟಿದ ವಾಯುಸೇನೆಯಿಂದ ಉಗ್ರರ ನೆಲೆ ಧ್ವಂಸ ಮಾಡಿದ್ದು, ದೇಶದೆಲ್ಲೆಡೆ ಮೋದಿ ಅಲೆ ಎದ್ದಿದೆ. ಇದು ನಮಗೆ ಲೋಕಸಭಾ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಸೀಟು ಗೆಲ್ಲಲು ಅನುಕೂಲ ಮಾಡಿಕೊಡುತ್ತದೆ ಎಂದಿದ್ದರು. ಸದ್ಯ ಬಿಎಸ್ ವೈ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

BS Yeddyurappa Slammed For Politicizing Air Surgical Strike On Balakot
Author
Bangalore, First Published Feb 28, 2019, 2:27 PM IST

ಬೆಂಗಳೂರು[ಫೆ.28]: ಒಂದೆಡೆ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿಗೆ ಪ್ರತೀಕರವೆಂಬಂತೆ, ಭಾರತೀಯ ವಾಯುಸೇನೆಯು LOC ದಾಟಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ. ಯೊಧರ ಈ ಸಾಹಸಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಮತ್ತೊಂದೆಡೆ ರಾಜಕೀಯ ಮುಖಂಡರು ಇದನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸುತ್ತಿದ್ದಾರೆ. ನಿನ್ನೆ ಫೆ.28ರಂದು ಬಿ. ಎಸ್. ಯಡಿಯೂರಪ್ಪ ನೀಡಿದ್ದ ಹೇಳಿಕೆ ಇದಕ್ಕೆ ಅತ್ಯುತ್ತಮ ಉದಾಹರಣೆ ಎನ್ನಬಹುದು. ಆದರೀಗ ಬಿಎಸ್ ವೈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಕಮಲ ಪಾಳಯದ ನಯಕರೂ ಅವರ ಈ ಹೇಳಿಕೆಗೆ ಛೀಮಾರಿ ಹಾಕಿದ್ದಾರೆ.

’ಸರ್ಜಿಕಲ್ ಸ್ಟ್ರೈಕ್: ರಾಜ್ಯದಲ್ಲಿ 22 ಲೋಕಸಭಾ ಸೀಟು ಖಚಿತ’

ಬಿಎಸ್ ವೈ ಹೇಳಿದ್ದೇನು?

ಪುಲ್ವಾಮಾ ದಾಳಿಗೆ ಪ್ರತೀಕಾರವೆಂಬಂತೆ ನಮ್ಮ ಸೇನೆ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿದ ಬಳಿಕ ಇದೀಗ ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಎದ್ದಿದೆ. ಇದು0 ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 22 ಸೀಟು ಗೆಲ್ಲಲು ಇದು ನೆರವಾಗಲಿದೆ ಎಂದಿದ್ದರು. ಯಡಿಯೂರಪ್ಪ ಈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ. ಕೆ ಸಿಂಗ್ ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರು ಹೀಗೂ ಮತ ಸೆಳೆಯಲು ಯತ್ನಿಸುತ್ತಾರೆಂಬುವುದು ನಿಜಕ್ಕೂ ಅಸಹ್ಯ ಹಾಗೂ ಆಘಾತಕಾರಿ ವಿಚಾರವಾಗಿದೆ. ದೇಶಪ್ರೇಮಿಯೊಬ್ಬರು ಸೈನಿಕರ ಸಾವಿನಲ್ಲೂ ಇಂತಹ ಹೇಳಿಕೆ ನೀಡುವುದಿಲ್ಲ. ಕೇವಲ ದೇಶದ್ರೋಹಿಗಳಷ್ಟೇ ಹೀಗೆ ಹೇಳಲು ಸಾಧ್ಯ ಎಂದಿದ್ದಾರೆ.

ಅತ್ತ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ವಿ. ಕೆ ಸಿಂಗ್ ಕೂಡಾ ಬಿ. ಎಸ್ ಯಡಿಯೂರಪ್ಪನವರ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ’ಯಡಿಯೂರಪ್ಪನವರೇ ಭಿನ್ನವಾಗಿರಿ. ನಾವೆಲ್ಲರೂ ಒಂದಾಗಿದ್ದೇವೆ. ನಮ್ಮ ಸರ್ಕಾರ ತೆಗೆದುಕೊಂಡ ಕ್ರಮ ದೇಶದ ಹಾಗೂ ಇಲ್ಲಿನ ನಾಗರಿಕರ ರಕ್ಷಣೆಗಾಗಿ ಮಾತ್ರ. ಚುನಾವಣೆಯಲ್ಲಿ ಹೆಚ್ಚುವರಿ ಸ್ಥಾನ ಗಳಿಸುವ ಉದ್ದೆಶದಿಂದ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios