Asianet Suvarna News Asianet Suvarna News

ಹಗ್ಗದಲ್ಲಿ ಸಾಹಸ ಮಾಡಿದ ರಿಜಿಜು; ಕ್ರೀಡಾ ಸಚಿವರ ಫಿಟ್ನೆಸ್‌ಗೆ ಸಲಾಂ!

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಫಿಟ್ನೆಸ್ ಮತ್ತೆ ಚರ್ಚೆಯಾಗುತ್ತಿದೆ. ರೋಪ್ ಕ್ಲೈಬಿಂಗ್ ಮಾಡೋ ಮೂಲಕ ಕ್ರೀಡಾಪಟುಗಳನ್ನೇ ನಾಚಿಸಿದ್ದಾರೆ. ರಿಜಿಜು ಸಾಹಸ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Sports minister kiren rijiju Rope climbing video goes viral on social media
Author
Bengaluru, First Published Oct 28, 2019, 10:43 AM IST

ದಿರಾಂಗ್(ಅರುಣಾಚಲ ಪ್ರದೇಶ) ಅ.28):  ಅತ್ಯಂತ ಫಿಟ್ಟೆಸ್ಟ್ ಹಾಗೂ ಸದಾ ಚಟುವಟಿಕೆಯ ರಾಜಕಾರಣಿಗಳ ಪಟ್ಟಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಮೊದಲ ಸ್ಥಾನ. ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಕುರಿತ ಯಾವುದೇ ಚಾಲೆಂಜ್ ಇದ್ದರೂ ಸ್ವೀಕರಿಸುತ್ತಾರೆ. ಇದೀಗ ರೋಪ್ ಕ್ಲೈಬಿಂಗ್ ಮಾಡೋ ಮೂಲಕ, ಎಲ್ಲರ ಹುಬ್ಬೇರಿಸಿದ್ದಾರೆ. 

ಇದನ್ನೂ ಓದಿ: ಓಟದ ಮೈದಾನದಲ್ಲಿ ಗುರ್ಜಾರ್ ಘರ್ಜನೆ: ರಿಜಿಜು ಅಂದರು ಟ್ರೈನಿಂಗ್ ಕೊಡ್ತೇನೆ!

ಅರುಣಾಚಲ ಪ್ರದೇಶದ ದಿರಾಂಗ್‌ನಲ್ಲಿರುವ ರಾಷ್ಟ್ರೀಯ ಪರ್ವತಾರೋಹಣ ಸಂಸ್ಥೆಗೆ ಕಿರಣ್ ರಿಜಿಜು ಭೇಟಿ ನೀಡಿದ್ದರು. ಈ ವೇಳೆ ಕಿರಣ್ ರಿಜಿಜು, ಟ್ರಕಿಂಗ್ ಮಾಡುವವರಿಗೆ ತರಭೇತಿ ನೀಡೋ ರೋಪ್ ಕ್ಲೈಬಿಂಗ್(ಹಗ್ಗದ ಮೂಲಕ ಏರುವುದು)‌ನಲ್ಲಿ ರಿಜಿಜು ಕೂಡ ಸಾಹಸ ಪ್ರದರ್ಶಿಸಿದರು.

 

ಇದನ್ನೂ ಓದಿ: #BottleCapChallenge;ಕೇಂದ್ರ ಕ್ರೀಡಾ ಮಂತ್ರಿ ಪ್ರಯತ್ನಕ್ಕೆ ಮೆಚ್ಚುಗೆ!

ಹಗ್ಗ ಹಿಡಿದು ಮೇಲಕ್ಕೇರಿದ ಕಿರಣ್ ರಿಜಿಜುಗೆ ಚಪ್ಪಾಳೆ ಮೂಲಕ ನೆರೆದಿದ್ದವರು ಪ್ರೋತ್ಸಾಹಿಸಿದರು. ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ, ಗಾಂಧಿ ಸಂಕಲ್ಪ ಯಾತ್ರೆ ಪೂರೈಸಲು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಜೊತೆ ಸೇರಿ 15,000 ಎತ್ತರದ ಮಾಂಗೋ-ತಿಂಗು ಚಾರಣ ಮಾಡಲಿದ್ದೇನೆ ಎಂದು ಟ್ವಿಟರ್ ಮೂಲಕ ಹೇಳಿದ್ದಾರೆ.

ಹಗ್ಗ ಹಿಡಿದು ಮೇಲಕ್ಕೇರಿ ಸಾಹಸ ಪ್ರದರ್ಶಿಸಿದ ಕಿರಿಣ್ ರಿಜಿಜು ಸಾಧನೆಯನ್ನು ಎಲ್ಲರು ಕೊಂಡಾಡಿದ್ದಾರೆ. ಕ್ರೀಡಾ ಸಚಿವರು ಅಂದರೆ ಹೀಗಿರಬೇಕು ಎಂದು ಶ್ಲಾಘಿಸಿದ್ದಾರೆ.

 

 

Follow Us:
Download App:
  • android
  • ios