Asianet Suvarna News Asianet Suvarna News

ಶೂಟಿಂಗ್ ವಿಶ್ವಕಪ್: ಮನು-ಸೌರಭ್‌ಗೆ ಚಿನ್ನ!

ಸ್ಪರ್ಧೆಯ ಕೊನೆ ದಿನವಾದ ಬುಧವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ 16 ವರ್ಷದ ಸೌರಭ್ ಚೌಧರಿ ಹಾಗೂ 17 ವರ್ಷದ ಮನು ಭಾಕರ್ ಜೋಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು

ISSF World Cup 2019 Manu Bhaker,Saurabh Chaudhary Win Gold In 10m Air Pistol Mixed Team Event
Author
New Delhi, First Published Feb 28, 2019, 9:58 AM IST

ನವದೆಹಲಿ(ಫೆ.28): 3 ಚಿನ್ನ, 2 ವಿಶ್ವ ದಾಖಲೆ ಹಾಗೂ 1 ಒಲಿಂಪಿಕ್ ಕೋಟಾದೊಂದಿಗೆ ಭಾರತ, 2019ರ ಮೊದಲ ಐಎಸ್ ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಮುಕ್ತಾಯಗೊಳಿಸಿದೆ. ಸ್ಪರ್ಧೆಯ ಕೊನೆ ದಿನವಾದ ಬುಧವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ 16 ವರ್ಷದ ಸೌರಭ್ ಚೌಧರಿ ಹಾಗೂ 17 ವರ್ಷದ ಮನು ಭಾಕರ್ ಜೋಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ಸೌರಭ್’ಗೆ ವಿಶ್ವದಾಖಲೆಯ ಚಿನ್ನ

ಅರ್ಹತಾ ಸುತ್ತಿನಲ್ಲಿ 778 ಅಂಕ ಗಳನ್ನು ಪಡೆದು ವಿಶ್ವ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ್ದ ಮನು ಹಾಗೂ ಸೌರಭ್, ಫೈನಲ್‌ನಲ್ಲಿ ಚೀನಾ ಶೂಟರ್‌ಗಳ ವಿರುದ್ಧ ಬರೋಬ್ಬರಿ 5.7 ಅಂಕಗಳ ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ವಿಶ್ವ ದಾಖಲೆಯೊಂದಿಗೆ ಅಪೂರ್ವಿಗೆ ಚಿನ್ನ!

ಭಾರತೀಯ ಜೋಡಿ ಒಟ್ಟು 483.4 ಅಂಕ ಗಳಿಸಿದರೆ, ಚೀನಾ ಜೋಡಿ 477.7 ಅಂಕ ಗಳಿಸಿತು. 418.8 ಅಂಕ ಪಡೆದ ದಕ್ಷಿಣ ಕೊರಿಯಾ ಕಂಚಿನ ಪದಕ ಪಡೆಯಿತು. 3 ಚಿನ್ನ ದೊಂದಿಗೆ ಭಾರತ, ಹಂಗೇರಿ ಜಂಟಿ ಮೊದಲ ಸ್ಥಾನ ಪಡೆದವು.

Follow Us:
Download App:
  • android
  • ios