Asianet Suvarna News Asianet Suvarna News

ಫ್ರೆಂಚ್‌ ಓಪನ್‌ 2019: ಕ್ವಾರ್ಟರ್‌ನಲ್ಲಿ ಸೈನಾಗೆ ಸೋಲು!

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹೋರಾಟ ಅಂತ್ಯವಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಸೈನಾ ಸೆಮೀಸ್ ಹಾದಿಯಲ್ಲಿ ಮುಗ್ಗರಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

French Open 2019 Badminton star Saina Nehwal knocked out in quarter final
Author
Paris, First Published Oct 26, 2019, 10:30 AM IST

ಪ್ಯಾರಿಸ್‌(ಅ.26): ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌, ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

ಫ್ರೆಂಚ್‌ ಓಪನ್‌: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸೈನಾ, ಸಿಂಧು

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ, ಕೊರಿಯಾದ ಅನ್‌ ಸೆ ಯಂಗ್‌ ವಿರುದ್ಧ 20-22, 21-23 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ರೋಚಕತೆಯಿಂದ ಕೂಡಿದ್ದ ಎರಡೂ ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಸೈನಾ, ಟೂರ್ನಿಯಿಂದ ಹೊರನಡೆದರು. ವಿಶ್ವ ನಂ.16 ಯಂಗ್‌, ಕೇವಲ 49 ನಿಮಿಷಗಳಲ್ಲಿ ಜಯ​ಭೇರಿ ಬಾರಿಸಿ ಸೆಮೀಸ್‌ಗೆ ಪ್ರವೇಶ ಪಡೆ​ದರು.

ಈ ವರ್ಷದ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಬಳಿಕ ಸೈನಾ, ಇದೇ ಮೊದಲ ಬಾರಿಗೆ ಟೂರ್ನಿ​ಯೊಂದ​ರಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದರು. ಕಳೆದ 3 ಟೂರ್ನಿಗಳಾದ ಚೀನಾ, ಕೊರಿಯಾ ಮತ್ತು ಡೆನ್ಮಾರ್ಕ್ ಓಪನ್‌ಗಳಲ್ಲಿ ಸೈನಾ ಮೊದಲ ಸುತ್ತಲ್ಲೇ ಹೊರಬಿದ್ದಿದ್ದರು. 2012ರ ಫ್ರೆಂಚ್‌ ಓಪನ್‌ನಲ್ಲಿ ಸೈನಾ ಫೈನಲ್‌ಗೇರಿದ್ದರು. ಅ.29ರಿಂದ ಜರ್ಮ​ನಿಯ ಸಾರ್‌ಬ್ರುಕೆನ್‌ನಲ್ಲಿ ನಡೆ​ಯ​ಲಿ​ರುವ ಸಾರ್‌ಲೊರ್‌ಲಕ್ಸ್‌ ಓಪನ್‌ನಲ್ಲಿ ಸೈನಾ ಆಡ​ಲಿ​ದ್ದಾರೆ.

 

Follow Us:
Download App:
  • android
  • ios