Asianet Suvarna News Asianet Suvarna News

ಡೇವಿಸ್ ಕಪ್: ತಟಸ್ಥ ಸ್ಥಳ​ದಲ್ಲಿ ಇಂಡೋ-ಪಾಕ್ ಟೆನಿಸ್‌ ಪಂದ್ಯ

ಡೇವಿಸ್ ಕಪ್ ಈ ಬಾರಿ ತಟಸ್ಥ ಸ್ಥಳದಲ್ಲಿ ನಡೆಯುವುದು ಕೊನೆಗೂ ಅಂತಿಮವಾಗಿದೆ. ಆದರೆ ಪಾಕಿಸ್ತಾನದಿಂದ ಹೊರಗೆ ಎಲ್ಲಿ ನಡೆಯಲಿದೆ ಎನ್ನುವುದು ಇನ್ನು 5 ದಿನದಲ್ಲಿ ಖಚಿತವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Davis Cup India Pakistan tennis match will be played at neutral venue
Author
New Delhi, First Published Nov 5, 2019, 11:20 AM IST

ನ​ವ​ದೆ​ಹ​ಲಿ[ನ.05]: ಭಾರತ ಹಾಗೂ ಪಾಕಿ​ಸ್ತಾನ ನಡುವೆ ಇದೇ ತಿಂಗಳು 29, 30ರಂದು ಇಸ್ಲಾ​ಮಾ​ಬಾದ್‌ನಲ್ಲಿ ನಡೆ​ಯ​ಬೇ​ಕಿದ್ದ ಡೇವಿ​ಸ್‌ ಕಪ್‌ ಪಂದ್ಯ​ವನ್ನು ಅಂತಾ​ರಾ​ಷ್ಟ್ರೀಯ ಟೆನಿಸ್‌ ಫೆಡ​ರೇ​ಷನ್‌ (ಐ​ಟಿ​ಎಫ್‌) ತಟಸ್ಥ ಸ್ಥಳಕ್ಕೆ ಸ್ಥಳಾಂತ​ರಿ​ಸಿದೆ.

ಡೇವಿಸ್‌ ಕಪ್‌: ಪಾಕ್‌ಗೆ ತೆರ​ಳ​ಲಿ​ದ್ದಾರೆ ಪೇಸ್‌!

5 ದಿನ​ಗ​ಳೊ​ಳಗೆ ಹೊಸ ಸ್ಥಳ​ವನ್ನು ತಿಳಿ​ಸು​ವಂತೆ ಪಾಕಿ​ಸ್ತಾನ ಟೆನಿಸ್‌ ಫೆಡ​ರೇ​ಷನ್‌ಗೆ ಸೂಚಿ​ಸ​ಲಾ​ಗಿದೆ. ಪಾಕಿ​ಸ್ತಾ​ನಕ್ಕೆ ಪ್ರಯಾ​ಣಿ​ಸಲು ಭಾರತ ತಂಡ ಒಪ್ಪದ ಕಾರಣ, ಸೆಪ್ಟೆಂಬರ್‌ನಲ್ಲಿ ನಡೆ​ಯ​ಬೇ​ಕಿದ್ದ ಪಂದ್ಯವನ್ನು ಮುಂದೂಡ​ಲಾ​ಗಿತ್ತು. ಆದರೆ ಐಟಿಎಫ್‌ನಿಂದ ನಿಷೇಧ ಶಿಕ್ಷೆ ಎದು​ರಾಗ ಭೀತಿಯಿಂದ, ಪ್ರಮುಖ ಆಟ​ಗಾ​ರರು ಹಿಂದೆ ಸರಿ​ದರೂ ದ್ವಿತೀಯ ದರ್ಜೆ ತಂಡ ಕಳು​ಹಿ​ಸಲು ಅಖಿಲ ಭಾರತ ಟೆನಿಸ್‌ ಫೆಡ​ರೇ​ಷನ್‌ ನಿರ್ಧ​ರಿ​ಸಿತು.

ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಸೋಮ​ವಾರವಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜ್‌ಪಾಲ್‌ರನ್ನು ಭಾರತ ತಂಡದ ಆಡದ ನಾಯ​ಕ​ನ​ನ್ನಾಗಿ ನೇಮಿ​ಸ​ಲಾ​ಗಿತ್ತು. ಇದೀಗ ತಟಸ್ಥ ಸ್ಥಳ​ದಲ್ಲಿ ಪಂದ್ಯ ನಡೆ​ಯುವ ಕಾರಣ, ಭಾರತ ಬಲಿಷ್ಠ ತಂಡ​ದೊಂದಿಗೆ ಆಡಲು ನಿರ್ಧ​ರಿ​ಸುವ ಸಾಧ್ಯತೆ ಇದೆ.

ಡೇವಿಸ್‌ ಕಪ್‌ ತಂಡಕ್ಕೆ ಆಯ್ಕೆಗಾರನೇ ನಾಯ​ಕ!

ಪಾಕಿಸ್ತಾನ ತೆರಳಲಿರುವ ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡಕ್ಕೆ ಮಾಜಿ ಆಟ​ಗಾರ, ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜ್‌ಪಾಲ್‌ರನ್ನು ಆಡದ ನಾಯ​ಕ​ನ​ನ್ನಾಗಿ ಅಖಿಲ ಭಾರ​ತ​ ಟೆನಿಸ್‌ ಫೆಡ​ರೇಷನ್‌ (ಎ​ಐ​ಟಿಎ) ನೇಮಿ​ಸಿದೆ. ಮಹೇಶ್‌ ಭೂಪತಿ, ಪಾಕಿ​ಸ್ತಾನಕ್ಕೆ ತೆರ​ಳಲು ನಿರಾ​ಕ​ರಿ​ಸಿದ ಕಾರಣ ಅವರ ಬದ​ಲಿಗೆ ರೋಹಿತ್‌ಗೆ ತಂಡ ಜವಾ​ಬ್ದಾರಿ ವಹಿ​ಸ​ಲಾ​ಗಿದೆ.

 

Follow Us:
Download App:
  • android
  • ios