Asianet Suvarna News Asianet Suvarna News

ದುಬೈನಲ್ಲಿರುವ ಭಾರತೀಯರಿಗೆ ಗುಡ್ ನ್ಯೂಸ್

ಯುಎಇಯಲ್ಲಿ ಉದ್ಯೋಗ ಹುಡುಕುವವರಿಗೆ ಆರು ತಿಂಗಳ ತಾತ್ಕಲಿಕ ವೀಸಾ ನೀಡಿದ ಬೆನ್ನಲ್ಲಿಯೇ ಯುಎಇ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕಾನೂನು ಜಾರಿಗೆ ತಂದಿದೆ.  

UAE Announces 5 year Residence Visa for expats
Author
Bengaluru, First Published Sep 19, 2018, 6:45 PM IST

ದುಬೈ, (ಸೆ.19): ಯುಎಇಯಲ್ಲಿ ಉದ್ಯೋಗ ಹುಡುಕುವವರಿಗೆ ಆರು ತಿಂಗಳ ತಾತ್ಕಲಿಕ ವೀಸಾ ನೀಡಿದ ಬೆನ್ನಲ್ಲಿಯೇ ಯುಎಇ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕಾನೂನು ಜಾರಿಗೆ ತಂದಿದೆ.  

ವಿದೇಶಿಯರು ಯುಎಇಯಲ್ಲಿ ನಿವೃತ್ತರಾದ ಬಳಿಕ ಆ ದೇಶದಲ್ಲಿ ದೀರ್ಘಾವಧಿ ವಾಸ್ತವ್ಯ ಹೂಡಲು ಅವಕಾಶ ನೀಡುವ ಕಾನೂನಿಗೆ ಯುಎಇ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಬಗ್ಗೆ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಮಾಹಿತಿ ನೀಡಿದ್ದಾರೆ.

ಯುಎಇನಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ 5 ವರ್ಷಗಳ ವಾಸ್ತವ್ಯ ವೀಸಾ ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಆದರೆ, ವೀಸಾ ನೀಡಲು ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ಈ ಕೆಳಗಿನಂತಿವೆ.

* ನಿವೃತ್ತಿ ಹೊಂದಿದ ವ್ಯಕ್ತಿ 55 ವರ್ಷ ಮೇಲ್ಟಟ್ಟಿರಬೇಕು 
* ನಿವೃತ್ತಿ ಹೊಂದಿದ ವ್ಯಕ್ತಿಯು 2 ಮಿಲಿಯನ್  ದಿರ್ಹಾಮ್ (ಇಂಡಿಯನ್ ರುಪಾಯಿಯಲ್ಲಿ ಸುಮಾರು 4 ಕೋಟಿ] ಆಸ್ತಿ ಹೊಂದಿರಬೇಕು. ಅಥವಾ
* ಕನಿಷ್ಠ 1 ಮಿಲಿಯನ್ ದಿರಾಮ್ ಗಿಂತ ಉಳಿತಾಯ ಹೊಂದಿರಬೇಕು.  
* ಪ್ರತಿ ತಿಂಗಳಿಗೆ ಕನಿಷ್ಠ 20,000ಕ್ಕಿಂತ ಹೆಚ್ಚು ಆದಾಯ ಇರಬೇಕು. 

Follow Us:
Download App:
  • android
  • ios