news
By Suvarna Web Desk | 02:07 PM January 12, 2018
ಸಿಎಂ-ಯೋಗಿ ಟ್ವಿಟರ್ ಗೇಮ್ ; ಯೋಗಿ ಉತ್ತಮ 'ಖಿಲಾಡಿ' ಎಂದು ಮೋದಿ ಶ್ಲಾಘನೆ

Highlights

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ರನ್ನು ಶ್ಲಾಘಿಸಿದ್ದಾರೆ. ಯೋಗಿ ಆದಿತ್ಯಾಥ್ ಟ್ವಿಟರ್  ಗೇಮ್'ನಲ್ಲಿ "ಒಳ್ಳೆಯ ಆಟಗಾರರಿಗೆ" ಸವಾಲು ಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೊಗಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನವದೆಹಲಿ (ಜ.12): ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್'ರನ್ನು ಶ್ಲಾಘಿಸಿದ್ದಾರೆ. ಯೋಗಿ ಆದಿತ್ಯಾಥ್ ಟ್ವಿಟರ್  ಗೇಮ್'ನಲ್ಲಿ "ಒಳ್ಳೆಯ ಆಟಗಾರರಿಗೆ" ಸವಾಲು ಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೊಗಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಯೋಗಿ ಆದಿತ್ಯನಾಥ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ 'ಹಿಂದೂ' ವಿಚಾರವಾಗಿ ಟ್ವಿಟರ್ ವಾರ್ ನಡೆದ ಹಿನ್ನಲೆಯಲ್ಲಿ ಮೋದಿ ಈ ಮಾತನ್ನು ಹೇಳಿದ್ದಾರೆ.

ಏನ್ ಹೇಳಿದ್ರು ಸಿಎಂ?

ಯೋಗಿ ಹಸು ಎಮ್ಮೆ ಸಾಕಿದ್ದಾನಾ? ಹಸುವಿನ ಸಗಣಿ ಎತ್ತಿ, ಗೊಬ್ಬರ ಹೊತ್ತಿದ್ದಾನಾ? ಹಸು ಸಾಕದವರತ್ರ ಗೋವು ಬಗ್ಗೆ ಪಾಠ ಮಾಡುತ್ತಾನೆ. ನಾನು ಸಗಣಿ ಎತ್ತಿದ್ದೇನೆ, ಗೊಬ್ಬರ ಹೊತ್ತವನು. ಯೋಗಿ ಒಬ್ಬ ಡೋಂಗಿ ವ್ಯಕ್ತಿ. ನನಗೆ ಬೀಫ್ ಹಿಡಿಸಲ್ಲ, ಒಮ್ಮೆ ತಿಂದು ಆಮೇಲೆ ತಿಂದಿಲ್ಲ. ಯಾರಿಗೇನು ಬೇಕೋ ಅದನ್ನು ತಿಂತಾರೆ. ತಿನ್ನು- ತಿನ್ನಬೇಡ ಅನ್ನೋದಕ್ಕೆ ಇವರ್ಯಾರು? ಎಂದು ಸಿಎಂ ಸಿದ್ದರಾಮಯ್ಯ ವಾಕ್ ಪ್ರಹಾರ ನಡೆಸಿದ್ದರು.

 

 

ಸಿಎಂ ಸಿದ್ದರಾಮಯ್ಯ V/S ಯೋಗಿ ಆದಿತ್ಯನಾಥ್ ಟ್ವಿಟರ್ ವಾರ್

 

Show Full Article


Recommended


bottom right ad