Asianet Suvarna News Asianet Suvarna News

ಅಯೋಧ್ಯೆ: ಏಕತಾ ಪ್ರತಿಮೆಗಿಂತಲೂ ಎತ್ತರದ ರಾಮನ ಪ್ರತಿಮೆ?

ಯೋಗಿ ನೇತೃತ್ವದ ಸರ್ಕಾರವು ಅಯೋಧ್ಯೆಯಲ್ಲಿ ಏಕತಾ ಪ್ರತಿಮೆಗಿಂತಲೂ ಎತ್ತರದ ರಾಮ ಪ್ರತಿಮೆ ನಿರ್ಮಿಸಲು ಯೋಜನೆ ರೂಪಿಸಿದೆ, ಶೀಘ್ರದಲ್ಲೇ ಸಿಎಂ ಯೋಗಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ.

Yogi Government Is Planning To Build Ram Statue Bigger Than Statue Of Unity
Author
Lucknow, First Published Nov 6, 2018, 1:16 PM IST

ಲಖನೌ[ನ.06]: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂಬ ಕೂಗು ಜೋರಾಗುತ್ತಿದೆ. ಹೀಗಿರುವಾಗ ಇಂದು ಸಂಜೆ ಭವ್ಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಿಎಂ ಯೋಗಿ ಆದಿತ್ಯನಾಥ್ ಕೆಲ ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ.

ಯೋಗಿ ಸರ್ಕಾರ ನಿರ್ಮಿಸಲು ಯೋಚಿಸಿರುವ ಶ್ರೀರಾಮನ ಭವ್ಯ ಮೂರ್ತಿ ಬರೋಬ್ಬರಿ 151 ಮೀಟರ್ ಎತ್ತರವಿರಲಿದ್ದು, ಇದನ್ನು 51 ಮೀಟರ್ ಎತ್ತರದ ಪೀಠವೊಂದರ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ ಎನ್ನಲಾಗಿದೆ. ಹೀಗಿರುವಾಗ ಇದು ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಿರ್ಮಿಸಲಾದ ವಿಶ್ವದ ಅತ್ಯಂತ ಎತ್ತರದ[182 ಮೀಟರ್] ಸರ್ದಾರ್ರ್‌ ವಲ್ಲಭಭಾಯಿ ಪಟೇಲರ ಏಕತಾ ಮೂರ್ತಿಗಿಂತಲೂ ಎತ್ತರವಾಗುವುದರಲ್ಲಿ ಅನುಮಾನವಿಲ್ಲ.

ಕನಸಲ್ಲಿ ಹೇಳಿದ ರಾಮ: ಹಿಂದೂವಾಗಿ ಮತಾಂತರವಾದ ಮುಸ್ಲಿಂ ಕುಟುಂಬ

ಈ ಬಾರಿಯೂ ಹಿಂದುತ್ವ, ರಾಮ ಮಂದಿರವೇ ಟ್ರಂಪ್ ಕಾರ್ಡ್

ಮೋದಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ರಾಮ ಮೂರ್ತಿ ನಿರ್ಮಾಣದ ವಿವರಣೆ ಪಡೆದಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಹಿಂದುತ್ವ ಹಾಗೂ ಅಯೋಧ್ಯೆ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ ಎಂಬುವುದು ಬಹುತೇಕ ಖಚಿತವಾಗಿದೆ.

ಸೀತೆಯನ್ನು ಅಪಹರಿಸಿದ್ದು ಮರ್ಯಾದಾ ಪುರುಷೋತ್ತಮನಂತೆ..!

ಫೖಜಾಬಾದ್ ಹೆಸರಲ್ಲೂ ಬದಲಾವಣೆ

ದೀಪೋತ್ಸವದಲ್ಲಿ ಇಂದು ಯೋಗಿ ವಿಶ್ವ ಹಿಂದೂ ಪರಿಷತ್ ಬೇಡಿಕೆಯಂತೆಯೇ ಫೖಜಾಬಾದ್ ಪ್ರದೇಶದ ಹೆಸರನ್ನು ಶ್ರೀ ಅಯೋಧ್ಯಾ ಎಂದು ಮರು ನಾಮಕರಣ ಮಾಡುತ್ತಾರಾ ಎಂಬ ವಿಚಾರವೂ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ವಿಎಚ್‌ಪಿ ನಾಯಕ ಶರದ್ ಶರ್ಮಾ ’ಗುಲಾಮರೆಂದು ನೆನಪಿಸುವ ಪ್ರತಿಯೊಂದು ಹೆಸರನ್ನೂ ಅಳಿಸಿ ಹಾಕಬೇಕು’ ಎಂಬ ಹೇಳಿಕೆ ನೀಡಿದ್ದರು. ಆದರೆ ಇತಿಹಾಸಕಾರರು ಫೖಜಾಬಾದ್ ಹೆಸರು ಬದಲಾಯಿಸಿದರೆ ’ಸಾಕೆತ್’ ಎಂದು ಮರುನಾಮಕರಣ ಮಾಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Follow Us:
Download App:
  • android
  • ios