news
By Suvarna Web Desk | 11:33 AM August 12, 2017
30 ಮಕ್ಕಳ ಸಾವು: ತನಿಖೆಗೆ ಯೋಗಿ ಸರ್ಕಾರ ಆದೇಶ

Highlights

ಗೋರಖ್’ಪುರದ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 30 ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ಯೋಗಿ ಆದಿತ್ಯನಾಥ್​ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಗೋರಖ್​'ಪುರ್​ನಲ್ಲಿರುವ ಅತಿದೊಡ್ಡ ಆಸ್ಪತ್ರೆ ಬಾಬಾ ರಾಘವದಾಸ್​ ಮೆಡಿಕಲ್​​​ ಕಾಲೇಜು ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು 48 ಗಂಟೆಗಳ ಅವಧಿಯಲ್ಲಿ 30 ಮಕ್ಕಳು ಮೃತಪಟ್ಟಿದ್ದಾರೆ.

ನವದೆಹಲಿ: ಗೋರಖ್’ಪುರದ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 30 ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ.

ಯೋಗಿ ಆದಿತ್ಯನಾಥ್​ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಗೋರಖ್​'ಪುರ್​ನಲ್ಲಿರುವ ಅತಿದೊಡ್ಡ ಆಸ್ಪತ್ರೆ ಬಾಬಾ ರಾಘವದಾಸ್​ ಮೆಡಿಕಲ್​​​ ಕಾಲೇಜು ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು 48 ಗಂಟೆಗಳ ಅವಧಿಯಲ್ಲಿ 30 ಮಕ್ಕಳು ಮೃತಪಟ್ಟಿದ್ದಾರೆ.

ಬಿಆರ್​ಡಿ ಆಸ್ಪತ್ರೆಗೆ ಖಾಸಗಿ ಕಂಪನಿಯೊಂದು ಗುತ್ತಿಗೆ ಆಧಾರದ ಮೇಲೆ ಆಕ್ಸಿಜನ್ ಸಿಲಿಂಡರ್​​ನ್ನು ಒದಗಿಸುತ್ತಿತ್ತು. ಈ ಮಧ್ಯೆ ಸುಮಾರು 60 ಲಕ್ಷ ರೂ.ಬಾಕಿ ಮೊತ್ತವನ್ನು ಪಾವತಿಸದೇ ಇದ್ದಿದ್ದಕ್ಕೆ ಆಕ್ಸಿಜನ್​ ಪೂರೈಕೆಯಾಗದೇ ಮಕ್ಕಳು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ.

ಯೋಗಿ ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸಿದ್ಧಾರ್ಥ ನಾಥ್, ಮಕ್ಕಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ದುರಂತವಲ್ಲ, ಹತ್ಯಾಕಾಂಡ: ಕೈಲಾಶ್ ಸತ್ಯಾರ್ಥಿ:

 

ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿರುವ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ, ಇದು ದುರಂತವಲ್ಲ, ಹತ್ಯಾಕಾಂಡವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ 70 ವರ್ಷದ ಸ್ವಾತಂತ್ರ್ಯವೆಂದರೆ ಇದೇನಾ? ಎಂದು ಪ್ರಶ್ನಿಸಿರುವ ಸತ್ಯಾರ್ಥಿ, ಭ್ರಷ್ಟ ವೈದ್ಯಕೀಯ ವ್ಯವಸ್ಥೆಯನ್ನು ಸರಿಪಡಿಸುವಂತೆ ಯೋಗಿ ಆದಿತ್ಯನಾಥ್’ಗೆ ಮನವಿ ಮಾಡಿದ್ದಾರೆ.

Show Full Article


Recommended


bottom right ad