Asianet Suvarna News Asianet Suvarna News

ಅಯ್ಯಪ್ಪ ದೇಗುಲ ಪ್ರವೇಶಿಸಿದ ಮಹಿಳೆಗೆ ಅತ್ತೆಯಿಂದ ಗೂಸಾ!: ಆಸ್ಪತ್ರೆಗೆ ದಾಖಲು

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿ ಶತಮಾನಗಳಿಂದ ನಡೆದು ಬಂದಿದ್ದ ಸಂಪ್ರದಾಯಕ್ಕೆ ತೆರೆ ಎಳೆದಿದ್ದ ಮಹಿಳೆಯರಿಬ್ಬರು ಜಗತ್ತಿನಾದ್ಯಂತ ಸದ್ದು ಮಾಡಿದ್ದರು. ಆದರೆ ಅಯ್ಯಪ್ಪ ಭಕ್ತರು ಇಬ್ಬರು ಮಹಿಳೆಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಜೀವ ಬೆದರಿಕೆಯನ್ನೂ ಒಡ್ಡಿದ್ದರು. ಸದ್ಯ ಮನೆಗೆ ವಾಪಾಸಾದ ಮಹಿಳೆ ಮೇಲೆ ಅತ್ತೆಯೂಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

Woman Who Entered Sabarimala Hit By MotherIn Law In Hospital
Author
Sabarimala, First Published Jan 15, 2019, 1:29 PM IST

ಶಬರಿಮಲೆ[ಜ.15]: ಹೊಸ ವರ್ಷದ ಆರಂಭದಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದ ಬಿಂದು ಹಾಗೂ ಕನಕದುರ್ಗ ಶತಮಾನದಿಂದ ನಡೆದು ಬಂದಿದ್ದ ಸಂಪ್ರದಾಯಕ್ಕೆ ತೆರೆ ಎಳೆದಿದ್ದರು. ರಾತ್ರೋ ರಾತ್ರಿ ದೇಗುಲ ಪ್ರವೇಶಿಸಿದ್ದ ಈ ಇಬ್ಬರು ಮಹಿಳೆಯರು ದಿನ ಬೆಳಗಾಗುತ್ತಿದ್ದಂತೆಯೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. ಆದರೆ ಭಕ್ತರ ಆಕ್ರೋಶ ಮಾತ್ರ ಭುಗಿಲೆದ್ದಿತ್ತು. ಅಲ್ಲದೇ ಇಬ್ಬರಿಗೂ ಜೀವ ಬೆದರಿಗಳೂ ಬಂದಿದ್ದವು. ದೇಗುಲ ಪ್ರವೇಶಿಸಿ ಮನೆಗೆ ಮರಳಿದ ಕನಕರದುರ್ಗಾರ ಮೇಲೆ ಅವರ ಅತ್ತೆಯೇ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕನಕದುರ್ಗಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!

2018ರಲ್ಲಿ ಶಬರಿಮಲೆ ದೇಗುಲಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿದ್ದ ಸುಪ್ರೀಂ, ಎಲ್ಲಾ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಲು ಅನುಮತಿ ನೀಡಿತ್ತು. ಹೀಗಿದ್ದರೂ ಭಕ್ತರು ಮಾತ್ರ ಇದನ್ನು ತೀವ್ರವಾಗಿ ವಿರೊಧಿಸಿದ್ದರು. ಹಲವಾರು ಮಹಿಳೆಯರು ದೇಗುಲ ಪ್ರವೇಶಿಸಲು ಯತ್ನಿಸಿದ್ದರೂ ಪ್ರಯೋಜನವಾಗದೆ ಮರಳಿದ್ದರು. ಹೀಗಿರುವಾಗ ಜನವರಿ ಆರಂಭದಲ್ಲಿ ದಲಿತ ಹಕ್ಕುಗಳ ಹೋರಾಟಗಾರ್ತಿ ಬಿಂದು ಹಾಗೂ ಅಯ್ಯಪ್ಪ ಭಕ್ತೆ ಯಾವುದೇ ಸುಳಿವು ನೀಡದೆ ರಾತ್ರೋ ರಾತ್ರಿ ಶಬರಿಮಲೆ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದರು. ದಿನ ಬೆಳಗಾಗುತ್ತಿದ್ದಂತೆಯೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇದಾದ ಬಳಿಕ ಕೇರಳದಾದ್ಯ.ತ ಹಿಂಸಾಚಾರ ಭುಗಿಲೆದ್ದಿತ್ತು. ಇಬ್ಬರ ಮನೆ ಮೇಲೂ ದಾಳಿ ನಡೆದಿತ್ತು ಹಾಗೂ ಜೀವ ಬೆದರಿಕೆಗಳೂ ಬಂದಿದ್ದವು. ಹೀಗಾಘಿ ಇಬ್ಬರೂ ತಲೆ ಮರೆಸಿಕೊಂಡಿದ್ದರು.

ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ

Woman Who Entered Sabarimala Hit By MotherIn Law In Hospital

ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ

ಸದ್ಯ ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿದ್ದರಿಂದ ಮಂಗಳವಾರದಂದು 39 ವರ್ಷದ ಕನಕದುರ್ಗಾ ತಮ್ಮ ಗಂಡನ ಮನೆಗೆ ತೆರಳಿದ್ದರು. ಆದರೆ ಮನೆ ಪ್ರವೆಶಿಸುತ್ತಿದ್ದಂತೆಯೇ ಅತ್ತೆ ಕನಕದುರ್ಗಾರ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಗಂಭೀರವಗಿ ಗಾಯಗೊಂಡಿದ್ದ ಕನಕದುರ್ಗಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿತ್ತು. ಲಭ್ಯವಾದ ಮಾಹಿತಿ ಅನ್ವಯ ಕನಕದುರ್ಗಾ ಚೇತರಿಸಿಕೊಂಡಿದ್ದು, ಹೆಚ್ಚಿನ ಟೆಸ್ಟ್ ಗಳನ್ನು ಮಾಡಲು ವೈದ್ಯರು ಸೂಚಿಸಿದ್ದಾರೆನ್ನಲಾಗಿದೆ. 
 

Follow Us:
Download App:
  • android
  • ios