Asianet Suvarna News Asianet Suvarna News

ಪುತ್ರನ ಹತ್ಯೆಗೆ ತಾಯಿ ಸುಪಾರಿ : 6 ತಿಂಗಳಿಂದ ರೇಪ್ ಮಾಡಿದ್ದಕ್ಕೆ ಕೊಲೆ ಮಾಡಿಸಿದಳು

ಇದರಿಂದ ಬೇಸತ್ತ ರಜನಿ ಇತ್ತೀಚೆಗೆ ತನ್ನ ಹಿರಿಯ ಪುತ್ರ ಸೀತಾರಾಂಗೆ ವಿಷಯ ತಿಳಿಸಿದ್ದಳು. ಜೊತೆಗೆ 50000 ರು. ಕೊಟ್ಟು ಹೇಗಾದರೂ ಮಾಡಿ ಆತನನ್ನು ಕೊಲ್ಲಿಸು ಎಂದು ಸುಪಾರಿ ನೀಡಿದ್ದಳು.

Woman arranges sons murder after he sexually abused her and other female relatives

ಮುಂಬೈ(ಸೆ.20): 6 ತಿಂಗಳಿಂದ ತನ್ನ ಮೇಲೇ ರೇಪ್ ಮಾಡುತ್ತಿದ್ದ ಪುತ್ರನನ್ನು ಆತನ ತಾಯಿಯೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ವಿಲಕ್ಷಣ ಘಟನೆ ಮುಂಬೈ ಪಶ್ಚಿಮ ಭಾಯಂದರ್ ಪ್ರದೇಶದಲ್ಲಿ ನಡೆದಿದೆ. 55 ವರ್ಷದ ರಜನಿ ಎಂಬ ಮಹಿಳೆಗೆ ಇಬ್ಬರು ಪುತ್ರರು. ಈ ಪೈಕಿ ರಾಮಚರಣ್ ಮಹಾನ್ ಕುಡುಕ ಮತ್ತು ಮಾದಕ ವಸ್ತು ವ್ಯಸನಿ. ಮಾದಕ ವಸ್ತು ಸೇವಿಸಿ ಮನೆಗೆ ಬರುತ್ತಿದ್ದ, ಆತ ಕಳೆದ 6 ತಿಂಗಳಿಂದ ತನ್ನ ತಾಯಿಗೇ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಇದರಿಂದ ಬೇಸತ್ತ ರಜನಿ ಇತ್ತೀಚೆಗೆ ತನ್ನ ಹಿರಿಯ ಪುತ್ರ ಸೀತಾರಾಂಗೆ ವಿಷಯ ತಿಳಿಸಿದ್ದಳು. ಜೊತೆಗೆ 50000 ರು. ಕೊಟ್ಟು ಹೇಗಾದರೂ ಮಾಡಿ ಆತನನ್ನು ಕೊಲ್ಲಿಸು ಎಂದು ಸುಪಾರಿ ನೀಡಿದ್ದಳು. ತಾಯಿ ಹೇಳಿದಂತೆ ಸೀತಾರಾಂ ತನ್ನಿಬ್ಬರು ಸ್ನೇಹಿತರನ್ನು ಬಳಸಿಕೊಂಡು ಚೂರಿ ಇರಿದು ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಇದೀಗ ತಾಯಿ, ಆಕೆಯ ಇನ್ನೊಬ್ಬ ಪುತ್ರ ಹಾಗೂ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪಂಜಾಬ್‌ನಲ್ಲೂ ಓರ್ವ ಮಹಿಳೆ, ತನ್ನ ಪುತ್ರ ವಿರುದ್ಧ ಅತ್ಯಾಚಾರದ ದೂರು ನೀಡಿದ್ದರು. ತನ್ನ ಮೇಲೇ ರೇಪ್ ಮಾಡಿದ್ದ.

Follow Us:
Download App:
  • android
  • ios