Asianet Suvarna News Asianet Suvarna News

ಪಾಕ್ ಮೇಲೆ ಜಲಯುದ್ಧ, ಮೋದಿ ಮತ್ತೊಂದು ಅಸ್ತ್ರ!

ಸೈನಿಕರ ಮೇಲಿನ ದಾಳಿ ನಂತರ ಭಾರತ ಪಾಕಿಸ್ತಾನದ ಮೇಲೆ ಒಂದೊಂದೆ ತಂತ್ರಗಳನ್ನು ಹೇರುತ್ತಾ ಬಂದಿದೆ. ಶೇ. 200 ತೆರಿಗೆ, ಪಾಕ್ ಕಲಾವಿದರಿಗೆ ನಿಷೇಧ ಹೇರಿದ ನಂತರ ಮುಂದುವರಿದ ಹಂತವಾಗಿ ಜಲ ಯುದ್ಧಕ್ಕೆ ಮುಂದಾಗಿದೆ.

Will stop flow of India s share of river water to Pakistan
Author
Bengaluru, First Published Feb 21, 2019, 10:08 PM IST

ನವದೆಹಲಿ[ಫೆ.21] ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸೈನಿಕರ ಮೇಲೆ ದಾಳಿ ನಡೆದ ನಂತರ ಭಾರತ ಒಂದೊಂದೆ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದೆ.

ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ  ಅಖಾಡಕ್ಕೆ ಇಳಿದಿದ್ದು 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನಕ್ಕೆ ಹರಿಯುತ್ತಿರುವ ನದಿಗಳ ನೀರನ್ನು ನಿಲ್ಲಿಸಿ ಅದನ್ನು ಯುಮುನಾ ನದಿ ಕಡೆಗೆ ತಿರುಗಿಸುವುದು ಯೋಜನೆಯ  ಮುಖ್ಯ ಉದ್ದೇಶ.

ಪಾಕ್ ಕಲಾವಿದರು ಬಾಲಿವುಡ್‌ಗೆ ಬರಂಗಿಲ್ಲ

ಉತ್ತರ ಪ್ರದೇಶದ ಭಾಗ್ಪತ್‌ನಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಪುಲ್ವಾಮಾ ಉಗ್ರರ ದಾಳಿ ಬಳಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ 1960ರ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ.

Follow Us:
Download App:
  • android
  • ios