Asianet Suvarna News Asianet Suvarna News

ಮಂಡ್ಯ ಜಿಲ್ಲೆಯಲ್ಲಿ ಕಾಮುಕರನ್ನ ಬೆಂಡೆತ್ತೋಕೆ ಬರ್ತಿದೆ ಖದರ್ ಟೀಂ: ಹೆಣ್ಣು ಮಕ್ಕಳನ್ನು ಚುಡಾಯಿಸಿದ್ರೆ ಜೈಲೇ ಗತಿ

ಇನ್ಮುಂದೆ ಮಂಡ್ಯದಲ್ಲಿ ಬೀದಿ ಕಾಮಣ್ಣರ ಆಟ ನಡಿಯೋದಿಲ್ಲ. ಅಂತಹವರನ್ನು ಮಟ್ಟ ಹಾಕಲು ಸಜ್ಜಾಗಿದೆ ಮಹಿಳಾ ಖಾಕಿ ಪಡೆ. ಅದಕ್ಕಾಗಿಯೇ ಮಹಿಳಾ ಪೊಲೀಸ್ ಪಡೆಗೆ ವಿಶೇಷ ತರಬೇತಿ ಕೂಡ ನೀಡಲಾಗುತ್ತಿದೆ. ಹೇಗಿರುತ್ತೆ ಆ ಪಡೆ? ಇಲ್ಲಿದೆ ವಿವರ.

Vabitha squad is started in mandya to stop harassment on girls

ಮಂಡ್ಯ(ಅ.19): ಮಂಡ್ಯ ಜಿಲ್ಲೆಯಲ್ಲಿ ಬೀದಿ ಕಾಮಣ್ಣರು ಇನ್ಮುಂದೆ ಬಾಲ ಬಿಚ್ಚಂಗಿಲ್ಲ. ಹೆಣ್ಣು ಮಕ್ಕಳನ್ನು ಚುಡಾಯಿಸಿದ್ರೆ ಜೈಲೇ ಗತಿ. ಕಾಮುಕರಿಗೆ ಪಾಠ ಕಲಿಸಲು ಮಂಡ್ಯದಲ್ಲಿ ಸಜ್ಜಾಗ್ತಿದೆ ಕಾವೇರಿ ವನಿತಾ ಪಡೆ. ಜಿಲ್ಲಾ ಪೊಲೀಸ್ ಇಲಾಖೆ ಮಹಿಳಾ ಪೊಲೀಸರಿಗೆ ವಿಶೇಷ ತರಬೇತಿ ನೀಡುತ್ತಿದೆ. ಮುಂದಿನ ನವಂಬರ್ ತಿಂಗಳಿನಲ್ಲಿ ಈ ಪಡೆ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯ ಎಲ್ಲಾ ಸ್ಥಳೀಯ ವ್ಯಾಪ್ತಿಯಲ್ಲಿ ಈ ಪಡೆ ಕಾರ್ಯ ನಿರ್ವಹಿಸಲಿದೆ.

ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ಹಲವು ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾವೇರಿ‌ ವನಿತಾ ಪಡೆ ಹುಟ್ಟು ಹಾಕಲಾಗಿದೆ. ತರಬೇತಿ ಪಡೆದ ತಂಡ ಬಸ್ ಸ್ಟಾಂಡ್, ಕಾಲೇಜ್ ಆವರಣ, ಹಾಗೂ ಮಹಿಳೆಯರು ಹೆಚ್ಚು ಸಂಚರಿಸುವ ಜಾಗದಲ್ಲಿ ಕಾರ್ಯ ನಿರ್ವಹಿಸಲಿದೆ.

ಒಟ್ಟಾರೆ ಕಾವೇರಿ‌ ವನಿತಾ ಪಡೆಗೆ ಮಂಡ್ಯ ಜಿಲ್ಲೆಯಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಾರ್ವಜನಿಕರ ವಲಯದಲ್ಲಿ ಎಷ್ಟರ ಮಟ್ಟಿಗೆ ಭರವಸೆ ಉಳಿಸಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

Follow Us:
Download App:
  • android
  • ios