Asianet Suvarna News Asianet Suvarna News

(ವಿಡಿಯೋ)ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ರಾಜಕೀಯ ರಹಸ್ಯ ಬಹಿರಂಗ: ಜನಸೇವನಾಗಲು ಖಾದಿಧಾರಿಯಾದ ಉಪ್ಪಿ

ನಟ ಉಪೇಂದ್ರ ರಾಜಕೀಯಕ್ಕೆ ಬರ್ತಾರೆ ಎಂಬ ಗುಮಾನಿಗೆ ಈಗ ಸ್ವತಃ ಉಪೇಂದ್ರ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ರುಪ್ಪೀಸ್ ರೆಸಾರ್ಟ್'ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಉಪೇಂದ್ರ ತಮ್ಮದೇ ಪಕ್ಷವನನ್ನು ಸ್ಥಾಪಿಸುವ ಮುನ್ಸೂಚನೆ ನೀಡಿದ್ದಾರೆ.

Upendra Speaks About His Political Party

ಬೆಂಗಳೂರು(ಆ.12): ನಟ ಉಪೇಂದ್ರ ರಾಜಕೀಯಕ್ಕೆ ಬರ್ತಾರೆ ಎಂಬ ಗುಮಾನಿಗೆ ಈಗ ಸ್ವತಃ ಉಪೇಂದ್ರ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ರುಪ್ಪೀಸ್ ರೆಸಾರ್ಟ್'ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಉಪೇಂದ್ರ ತಮ್ಮದೇ ಪಕ್ಷವನನ್ನು ಸ್ಥಾಪಿಸುವ ಮುನ್ಸೂಚನೆ ನೀಡಿದ್ದಾರೆ.

ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಕುರಿತ ಸುದ್ದಿಗೋಷ್ಟಿಗೆ ಇಂದು ತೆರೆ ಬಿದ್ದಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪ್ಪಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನ ಸಾಮಾನ್ಯರಲ್ಲ, ಜನರು ಅಸಾಮಾನ್ಯರು. ಜಾತಿ ಹಾಗೂ ಹಣ ಬಲದಿಂದ ರಾಜಕೀಯ ಮಾಡಬಾರದು. ಇದನ್ನು ಹೊರತುಪಡಿಸಿ ಒಂದು ಪ್ರಯೋಗಕ್ಕೆ ಕೈ ಹಾಕಲು ಹೊರಟಿದ್ದೇನೆ. ನನ್ನ ಜೊತೆ ನೀವೂ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ:

ಅಲ್ಲದೆ ತಮ್ಮ ಪಕ್ಷ ಹೇಗಿರುತ್ತದೆ? ಇದು ಹೇಗೆ ಕಾರ್ಯ ನಿರ್ವಹಿಸಲಿದೆ? ಪಕ್ಷದ ಕಾರ್ಯಕರ್ತರು ಹೇಗಿರಬೇಕು? ಈ ಪಕ್ಷ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತಾಗಿಯೂ ತಿಳಿಸಿದ್ದಾರೆ. ಇನ್ನು ಈ ಕುರಿತಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದು ಅದಕ್ಕಾಗಿ, ಮೂರು ಇ ಮೇಲ್ ಐಡಿಗಳನ್ನ ನೀಡಿದ್ದಾರೆ( prajakarana1@gmail.com, prajakarana2@gmail.com, Prajakarana3@gmail.com ) ಜೊತೆಗೆ ಪಕ್ಷ ಸ್ಥಾಪನೆಗೆ ಸಲಹೆ ಸೂಚನೆ ನೀಡೋರು ರುಪ್ಪೀಸ್ ರೆಸಾರ್ಟ್ ವಿಳಾಸಕ್ಕೆ ಪತ್ರವನ್ನೂ ಬರೆಯಬಹುದು ಅಂತಾ ಹೇಳಿದ್ದಾರೆ.

ಸುದ್ದಿಗೋಷ್ಠಿಗೆ ಖಾಕಿ ಉಡುಪಿನಲ್ಲೇ ಬಂದ ಉಪೇಂದ್ರ ಖಾಕಿ ಕಾರ್ಮಿಕರ ಸಂಕೇತ. ನಾನು ರಾಜಕೀಯದಲ್ಲಿ  ಸಂಬಳಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ ಎಂದಿದ್ದಾರೆ.

 

Follow Us:
Download App:
  • android
  • ios