news
By Suvarna Web Desk | 03:15 PM December 07, 2017
ಮತ್ತೊಮ್ಮೆ ಪ್ರಧಾನಿ ಮೋದಿಗೆ ರಾಹುಲ್ ಟಾಂಗ್

Highlights

ತಾವು ಮಾಡಿದ ಟ್ವೀಟ್’ನಲ್ಲಿ ಆಗಿದ್ದ ತಪ್ಪುಗಳನ್ನು ಒಪ್ಪಿಕೊಂಡಿರುವ ರಾಹುಲ್ ಗಾಂಧಿ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುನಃ ಟಾಂಗ್ ನೀಡಿದ್ದಾರೆ.

ನವದೆಹಲಿ(ಡಿ.7): ತಾವು ಮಾಡಿದ ಟ್ವೀಟ್’ನಲ್ಲಿ ಆಗಿದ್ದ ತಪ್ಪುಗಳನ್ನು ಒಪ್ಪಿಕೊಂಡಿರುವ ರಾಹುಲ್ ಗಾಂಧಿ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುನಃ ಟಾಂಗ್ ನೀಡಿದ್ದಾರೆ.

`ಬಿಜೆಪಿ ಸ್ನೇಹಿತರೇ, ನಾನು ನರೇಂದ್ರಭಾಯಿ ಅವರಷ್ಟು ವಿಭಿನ್ನ ವ್ಯಕ್ತಿಯಲ್ಲದೇ ಇರಬಹುದು. ಆದರೆ  ನಾನು ಮಾನವ. ಸಹಜವಾಗಿಯೇ ಎಲ್ಲರಂತೆ ನಾನೂ ತಪ್ಪು ಮಾಡುತ್ತೇನೆ.

ಇದು ಜೀವನವನ್ನು ಕುತೂಹಲಕಾರಿ ಯಾಗಿಸುತ್ತದೆ. ನನ್ನ ತಪ್ಪು ಎತ್ತಿ ತೋರಿಸಿದ್ದಕ್ಕೆ ಧನ್ಯವಾದ. ತಪ್ಪನ್ನು ಎತ್ತಿ ತೋರಿಸುತ್ತಿರಿ. ಇದರಿಂದ ನಾನು ಸುಧಾರಣೆ ಯಾಗುತ್ತೇನೆ. ನಿಮ್ಮನ್ನೆಲ್ಲ ನಾನು ಪ್ರೀತಿಸುತ್ತೇನೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Show Full Article


Recommended


bottom right ad