Asianet Suvarna News Asianet Suvarna News

ನೌಕರರ ಕೆಲಸದ ಅವಧಿ 8 ರಿಂದ 9 ಗಂಟೆಗೆ ಏರಿಕೆ?

ಕೆಲಸ ನಿರ್ವಹಿಸುವ ಅವಧಿಯನ್ನು ದಿನಕ್ಕೆ 8 ಗಂಟೆಯ ಬದಲು 9 ಗಂಟೆಗಳಿಗೆ ಏರಿಸಲು ಕೇಂದ್ರ ಸರ್ಕಾರದ ವೇತನ ಸಂಹಿತೆಯಲ್ಲಿ ಪ್ರಸ್ತಾಪಿಸಲಾಗಿದೆ. 

Union Govt proposal to increase employee working hours
Author
Bengaluru, First Published Nov 4, 2019, 10:59 AM IST

ನವದೆಹಲಿ [ನ.04] ದೇಶದಲ್ಲಿ ಇನ್ನುಮುಂದೆ ನೌಕರರ ಕೆಲಸದ ಅವಧಿ ದಿನಕ್ಕೆ  9ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

ಇಷ್ಟು ದಿನಗಳ ಕಾಲ ದೇಶದಲ್ಲಿ ಪ್ರತಿಯೊಂದು ವಲಯದಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರ ಅವಧಿ 8 ಗಂಟೆ ಇತ್ತು. ಆದರೆ ಇನ್ನುಮುಂದೆ 9 ಗಂಟೆಗಳಾಗುವ ಸಾಧ್ಯತೆ ಇದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚಿಸಿರುವ ಕರಡು ವೇತನ ಸಂಹಿತೆಯಲ್ಲಿ ಈ ರೀತಿಯ ಪ್ರಸ್ತಾವನೆಯೊಂದನ್ನು ಮಾಡಲಾಗಿದೆ. 

ಕೇಂದ್ರ ಸರ್ಕಾರದ ಈ ನೂತನ ಪ್ರಸ್ತಾವನೆಯಲ್ಲಿ ಕೆಲಸದ ಅವಧಿಯುನ್ನು 8 ರಿಂದ 9 ಗಂಟೆಗಳಿಗೆ ಏರಿಕೆ ಮಾಡುವುದು ಹಾಗೂ ವೇತನ ನಿರ್ಧಾರ ಮಾಡುವಾದ ಭೌಗೋಳಿಕ ವರ್ಗೀಕರಣ ಅನುಸರಿಸುವುದು ಇದೆ. 

ಈ ರೀತಿಯ ಹಲವು ವಿಚಾರಗಳನ್ನು ಕೇಂದ್ರದ ಸಂಹಿತೆಯ ಕರಡಿನಲ್ಲಿ ಉಲ್ಲೇಖ ಮಾಡಲಾಗಿದೆ.  

ಭಾರತದ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ!...

ಆದರೆ ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗದಿಪಡಿಸುವುದರಿಂದ ಸರ್ಕಾರ ಹಿಂದೆ ಸರಿದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕನಿಷ್ಠ ವೇತನ ನಿರ್ಧರಿಸುವಾಗ ಭೌಗೋಳಿಕ ವರ್ಗೀಕರಣ ಪ್ರಮುಖವಾಗಿರಲಿದ್ದು, ಜನಸಂಖ್ಯೆ ಆಧಾರದಲ್ಲಿ ಈ ವರ್ಗೀಕರಣವಾಗಲಿದೆ. 

1948ರ  ಫ್ಯಾಕ್ಟರಿ ಕಾಯ್ದೆ ಪ್ರಕಾರವಾಗಿ ಓರ್ವ 18 ವರ್ಷ ಮೇಲ್ಪಟ್ಟ ವ್ಯಕ್ತಿಯು ವಾರಕ್ಕೆ 48 ಗಂಟೆಗಿಂತ ದಿನಕ್ಕೆ 9 ಗಂಟೆಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತದೆ. 

ಹೆಚ್ಚಿನ ಕೆಲಸ ಮಾಡಿಸುವುದನ್ನು ಸೆಕ್ಷನ್ 51ನೇ ವಿಧಿಯಲ್ಲಿ ನಿರ್ಬಂಧಿಸಲಾಗಿದೆ. ಆದರೆ ಇದೀಗ ಕೇಂದ್ರ ಸರ್ಕಾರ ಕೆಲಸ ಅವಧಿ ಹೆಚ್ಚಿಸಲು ಹೆಜ್ಜೆ ಇಟ್ಟಿದೆ. 

ನವೆಂಬರ್ 1 ರಿಂದಲೇ ಈ ಬಗ್ಗೆ ಸಾರ್ವಜನಿಕರಲ್ಲಿ ಪ್ರತಿಕ್ರಿಯೆ ತಿಳಿಸಲು ಕೋರಲಾಗಿದ್ದು,  ಆ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

Follow Us:
Download App:
  • android
  • ios