news
By Suvarna Web Desk | 10:04 PM March 07, 2017
ಸರಾಗವಾಗಿ ಟ್ರ್ಯಾಕ್ಟರ್ ಓಡಿಸುವ ಈಕೆಗೆ ತೋಟಕ್ಕೆ ಔಷಧಿ ಸಿಂಪಡಿಸುವ ಕೆಲಸದಲ್ಲಿ ಸರಿ ಸಾಟಿಯೇ ಇಲ್ಲ

Highlights

ಬೈಕ್ ಓಡಿಸುವ ಮಹಿಳೆಯರನ್ನು ನೋಡಿದ್ದೀರಿ. ಕಾರ್ ಡ್ರೈವ್ ಮಾಡುವುದು ಕೂಡಾ ಸಾಮಾನ್ಯ. ಕೆಲ ಮಹಿಳೆಯರು ಪೈಲಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ತಾನು ಪುರುಷನಗಿಂತ ಏನೇನು ಕಮ್ಮಿಯಿಲ್ಲ ಅಂತ ಟ್ರ್ಯಾಕ್ಟರ್​​'ನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಳೆ. ಮಹಿಳಾ ದಿನಾಚರಣೆಯ ವಿಶೇಷದಲ್ಲಿ ಚಿಕ್ಕಬಳ್ಳಾಪುರದ ಸಾಹಸಿ ಮಹಿಳೆಯ ವರದಿ ಇಲ್ಲಿದೆ.

ಚಿಕ್ಕಬಳ್ಳಾಪುರ (ಮಾ.08): ಬೈಕ್ ಓಡಿಸುವ ಮಹಿಳೆಯರನ್ನು ನೋಡಿದ್ದೀರಿ. ಕಾರ್ ಡ್ರೈವ್ ಮಾಡುವುದು ಕೂಡಾ ಸಾಮಾನ್ಯ. ಕೆಲ ಮಹಿಳೆಯರು ಪೈಲಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ತಾನು ಪುರುಷನಗಿಂತ ಏನೇನು ಕಮ್ಮಿಯಿಲ್ಲ ಅಂತ ಟ್ರ್ಯಾಕ್ಟರ್​​'ನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಳೆ. ಮಹಿಳಾ ದಿನಾಚರಣೆಯ ವಿಶೇಷದಲ್ಲಿ ಚಿಕ್ಕಬಳ್ಳಾಪುರದ ಸಾಹಸಿ ಮಹಿಳೆಯ ವರದಿ ಇಲ್ಲಿದೆ.

ಟ್ರ್ಯಾಕ್ಟರ್ ಸ್ಟಾರ್ಟ್​ ಮಾಡಿದರೆ ತೋಟದಲ್ಲಿ ಕೆಲಸ ಮುಗಿಯುವವರೆಗೂ ಚಂದ್ರಕಲಾ ಎಂಬ ಸಾಹಸಿ ಮಹಿಳೆ ನಿಲ್ಲಿಸುವುದೇ ಇಲ್ಲ. ಎಲ್ಲಾ ವಾಹನಗಳಿಗಿಂತ ಕೃಷಿಗಾಗಿ ಕೆಲಸ ಮಾಡುವ ಈ ಟ್ಯ್ರಾಕ್ಟರ್ ಕೆಲಸ ತುಂಬಾನೇ ಕಷ್ಟ. ಆದರೆ, ಚಂದ್ರಕಲಾ ಮಾತ್ರ ಸರಾಗವಾಗಿ ಯಾರ ಸಹಾಯವಿಲ್ಲದೆಯೇ ಕೆಲಸ ಮುಗಿಸುತ್ತಾಳೆ.

ಚಂದ್ರಕಲಾ, ಚಿಕ್ಕಬಳ್ಳಾಪುರ ತಾಲೂಕಿನ ತಿರ್ನಹಳ್ಳಿ ಗ್ರಾಮದ ನಿವಾಸಿ. ಮೋಹನ್ ಬಾಬು ೆನ್ನುವುವರ  ಪತ್ನಿಯಾದ ಈಕೆ  ಪತಿಗೆ ಸಹಾಯ ಆಗಲಿ ಅಂತ ಡ್ರೈವಿಂಗ್ ಕಲಿತಿದ್ದಾರೆ. ತಮಗಿರುವ 4 ಎಕರೆ ದ್ರಾಕ್ಷಿ ತೋಟಕ್ಕೆ ಔಷಧಿ ಸಿಂಪಡಿಸುವ ಕೆಲಸ ಈಕೆಗೆ ನೀರು ಕುಡಿದಷ್ಟೇ ಸಲೀಸು. ಇನ್ನು ಯಾವುದೇ ಕೆಲಸದಲ್ಲೂ ಮಹಿಳೆಯರು ಯಾರಿಗಿಂತಲೂ ಕಮ್ಮಿ ಇಲ್ಲ. ಇದನ್ನ ನನ್ನ ಪತ್ನಿ ಚಂದ್ರಕಲಾ ಸಾಬೀತು ಮಾಡಿದ್ದಾರೆ ಅಂತ ಹಾಡಿ ಹೊಗಳಿದ್ದಾರೆ ಪತಿ ಮೋಹನ್ ಬಾಬು.

ಏನೇ ಆದರೂ ಗ್ರಾಮೀಣ ಪ್ರದೇಶದಲ್ಲೂ ಜನರ ಜೀವನ ಶೈಲಿ ಬದಲಾಗಿದೆ. ಆದರೂ ಈ ಗಟ್ಟಿಗತ್ತಿ ಪುರುಷನಿಗೆ ಜವಾಬು ಕೊಡಬಲ್ಲೆ ಅಂತ ತೋರಿಸಿ ಕೊಟ್ಟಿದ್ದಾಳೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಸಾಹಸಿ ಮಹಿಳೆ ಚಂದ್ರಕಲಾ ಅವರಿಗೂ ನಮ್ಮ ಕಡೆಯಿಂದ ಧ್ಯಾಂಕ್ಸ್​.

 

Show Full Article


Recommended


bottom right ad