Asianet Suvarna News Asianet Suvarna News

ಪ್ರಧಾನಿ ಹುದ್ದೆಗೆ ಗುಡ್‌ಬೈ ಹೇಳಿದ ರಾಜಪಕ್ಸೆ ಈಗ ಲಂಕಾ ಪ್ರತಿಪಕ್ಷ ನಾಯಕ!

ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಹಿಂದಾ ರಾಜಪಕ್ಸೆ ಅವರು ಇದೀಗ ಸಂಸತ್ತಿನ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ

unanimous decision by upfa to appoint former president rajapakse as the opposition leader
Author
Colombo, First Published Dec 19, 2018, 9:38 AM IST

ಕೊಲಂಬೋ[ಡಿ.19]: ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಹಿಂದಾ ರಾಜಪಕ್ಸೆ ಅವರು ಇದೀಗ ಸಂಸತ್ತಿನ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. 2015ರಿಂದಲೂ ವಿಪಕ್ಷ ನಾಯಕನಾಗಿದ್ದ ತಮಿಳ್‌ ಪಕ್ಷದ ಹಿರಿಯ ನಾಯಕ ಆರ್‌.ಸಂಪತನ್‌(73) ಅವರನ್ನು ಹಿಂದೆ ಸರಿಸಿ ರಾಜಪಕ್ಸೆ ಅವರು ಮುಖ್ಯ ವಿಪಕ್ಷ ನಾಯಕರಾಗಿದ್ದಾರೆ.

ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಪದಚ್ಯುತಗೊಂಡು 51 ದಿನಗಳ ರಾಜಕೀಯ ಬಿಕ್ಕಟ್ಟಿನ ಬಳಿಕ ರನಿಲ್‌ ವಿಕ್ರಂ ಸಿಂಘೆ ಅವರು ಮತ್ತೆ ಪ್ರಧಾನಿಯಾಗಿ ಮರು ನೇಮಕವಾದ ಬೆನ್ನಲ್ಲೇ, ಸ್ಪೀಕರ್‌ ಕರು ಜಯಸೂರ್ಯ ಅವರು ರಾಜಪಕ್ಸೆ ಅವರನ್ನು ವಿಪಕ್ಷ ನಾಯಕನನ್ನಾಗಿ ಘೋಷಿಸಿದ್ದಾರೆ.

ಆದರೆ, ವಿಪಕ್ಷ ನಾಯಕನಾಗಿ ರಾಜಪಕ್ಸೆ ಆಯ್ಕೆಯನ್ನು ತಮಿಳ್‌ ನ್ಯಾಷನಲ್‌ ಅಲಯನ್ಸ್‌(ಟಿಎನ್‌ಎ), ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್‌ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೆ, ಇತ್ತೀಚೆಗೆ ಪಕ್ಷಾಂತರ ಮಾಡಿ ರಾಜಪಕ್ಸೆ ಅವರ ಸದಸ್ಯತ್ವವನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿವೆ.

Follow Us:
Download App:
  • android
  • ios