Asianet Suvarna News Asianet Suvarna News

ಬಲಪಂಥೀಯ ವಿರೋಧಿ ಧೋರಣೆ: ಸಂಸದೀಯ ಸಮಿತಿ ಮುಂದೆ ಬರಲ್ಲ ಎಂದ ಟ್ವಿಟ್ಟರ್ ಸಿಇಒ!

ಬಲಪಂಥೀಯ ವಿರೋಧಿ ಧೋರಣೆ ಅನುಸರಿಸುತ್ತಿರುವ ಟ್ವಿಟ್ಟರ್? ಸಂಸದೀಯ ಸಮಿತಿ ಮುಂದೆ ಹಾಜರಾಗುವಂತೆ ಟ್ವಿಟ್ಟರ್ ಸಿಇಒಗೆ ಸೂಚನೆ| ಸಂಸದೀಯ ಸಮಿತಿ ಮುಂದೆ ಹಾಜರಾಗಲು ಟ್ವಿಟ್ಟರ್ ಸಿಇಒ ನಿರಾಕರಣೆ| ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಸಂಸದೀಯ ಸಮಿತಿ|

Twitter CEO Decline To Appear Before Parliamentary Panel
Author
Bengaluru, First Published Feb 9, 2019, 4:07 PM IST

ನವದೆಹಲಿ(ಫೆ.09): ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ ವಿರುದ್ಧ, ಬಲಪಂಥೀಯ ಧೋರಣೆಯುಳ್ಳ ಖಾತೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿರುವ ಆರೋಪ ಕೇಳಿ ಬಂದಿದೆ. 

ಈ ಸಂಬಂಧ ಸ್ಪಷ್ಟನೆ ನೀಡಲು ಸಂಸದೀಯ ಸಮಿತಿ ಮುಂದೆ ಹಾಜರಾಗಲು ಟ್ವಿಟ್ಟರ್ ಸಿಇಒ ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಟ್ವಿಟ್ಟರ್ ಸಿಇಒ ಹಾಗೂ ಹಿರಿಯ ಅಧಿಕಾರಿಗಳು ಸಂಸದೀಯ ಸಮಿತಿ ಮುಂದೆ ಹಾಜರಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಫೆಬ್ರವರಿ 1ರಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ,  ಟ್ವಿಟ್ಟರ್ ಗೆ ಸಮನ್ಸ್ ಜಾರಿ ಮಾಡಿ ಫೆಬ್ರವರಿ 11ಕ್ಕೆ ನಿಗದಿಯಾಗಿರುವ ಸಭೆಯಲ್ಲಿ ಭಾಗಿಯಾಗುವಂತೆ ಸೂಚಿಸಲಾಗಿತ್ತು. 

ಆದರೆ ವಿಚಾರಣೆಗೆ ಹಾಜರಾಗಲು 10 ದಿನ ಕಾಲವಕಾಶ ನೀಡಿದರೂ, ಕಡಿಮೆ ಅವಧಿಯ ಕಾರಣ ನೀಡಿ ಸಂಸದೀಯ ಸಮಿತಿ ಮುಂದೆ ಹಾಜರಾಗಲು ಟ್ವಿಟ್ಟರ್ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಸಂಸದೀಯ ಸಮಿತಿ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ವಿಟ್ಟರ್, ಬಲಪಂಥೀಯ ವಿರೋಧಿ ಧೋರಣೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಮಾತುಕತೆ ಮುಗಿದ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ಟ್ವಿಟ್ಟರ್ ಇಂಡಿಯಾ ವಕ್ತಾರರು ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios