Asianet Suvarna News Asianet Suvarna News

ಗಂಟೆಗೆ 180 ಕಿ. ಮೀಟರ್ ವೇಗ!: ಭಾರತದ ಅತಿ ವೇಗದ ರೈಲಿದು!

ಟ್ರೈನ್‌ 18 ರೈಲು ಭಾನುವಾರ ದೆಹಲಿ- ಮುಂಬೈ ರೈಲು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಕೈಗೊಂಡ ವೇಳೆ ಗಂಟೆಗೆ 180 ಕಿ.ಮೀ. ವೇಗವನ್ನು ಸಾಧಿಸಿದೆ ಈ ಮೂಲಕ  ಭಾರತದ ಅತಿ ವೇಗದ ರೈಲು ಎಂಬ ದಾಖಲೆ ನಿರ್ಮಿಸಿದೆ.

Train 18 breached the 180 Kmph speed limit during a test run
Author
Mumbai, First Published Dec 3, 2018, 4:33 PM IST

ಮುಂಬೈ[ಡಿ.03]: ಭಾರತದ ಪ್ರಥಮ ಎಂಜಿನ್‌ ರಹಿತ ಟ್ರೈನ್‌-18 ರೈಲು ದೆಹಲಿ- ಮುಂಬೈ ಮಾರ್ಗದಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಭಾರತದ ಅತಿ ವೇಗದ ರೈಲು ಎಂಬ ದಾಖಲೆ ನಿರ್ಮಿಸಿದೆ.

ಟ್ರೈನ್‌ 18 ರೈಲು ಭಾನುವಾರ ದೆಹಲಿ- ಮುಂಬೈ ರೈಲು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಕೈಗೊಂಡ ವೇಳೆ ಗಂಟೆಗೆ 180 ಕಿ.ಮೀ. ವೇಗವನ್ನು ಸಾಧಿಸಿದೆ. ಇನ್ನೂ ಹಲವಾರು ಪ್ರಯೋಗಗಳು ಬಾಕಿ ಇವೆ. ಇದೊಂದು ಟ್ರೈನ್‌-18ನ ಸಣ್ಣ ಮೈಲಿಗಲ್ಲು ಎಂದು ಸಮಗ್ರ ಕೋಚ್‌ ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕ ಸುಧಾಂಶು ಮಣಿ ಹೇಳಿದ್ದಾರೆ.

ಶನಿವಾರದಂದು ಪರೀಕ್ಷಾರ್ಥ ಸಂಚಾರದ ವೇಳೆ ದೆಹಲಿ- ಮುಂಬೈ ರಾಜಧಾನಿ ಮಾರ್ಗದಲ್ಲಿ ಟ್ರೈನ್‌- 18 ರೈಲು ಗಂಟೆಗೆ 170 ಕಿ.ಮೀ. ವೇಗದಲ್ಲಿ ಸಂಚರಿಸಿತ್ತು. ರೈಲು ಸರಾಸರಿ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು ಎಂದು ಆರ್‌ಡಿಎಸ್‌ಒ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರೈನ್‌- 18 ಅನ್ನು ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ರೈಲು ಭವಿಷ್ಯದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳನ್ನು ಬದಲಾಯಿಸಲಿದೆ. ಟ್ರೈನ್‌- 18 ರೈಲು ಗರಿಷ್ಠ 200 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಟ್ರೈನ್‌- 18 ರೈಲು 2019ರ ಜನವರಿಯಿಂದ ವಾಣಿಜ್ಯ ಸೇವೆಯನ್ನು ಆರಂಭಿಸುವ ನಿರೀಕ್ಷೆ ಇದೆ.

Follow Us:
Download App:
  • android
  • ios