Asianet Suvarna News Asianet Suvarna News

ಇಂದು ಕಾವೇರಲಿದೆ ಅಧಿವೇಶನ; ಕೆಪಿಎಂಇ ವಿಧೇಯಕದ ಮೇಲೆ ಚರ್ಚೆ

ಚಳಿಗಾಲದ ಅಧಿವೇಶನದ 8ನೇ ದಿನವಾದ ಇಂದು  ಬಿಸಿ ಬಿಸಿ ಚರ್ಚೆಗಳು ನಡೆಯಲಿವೆ. ನಿನ್ನೆ ಮಹತ್ವದ ಕೆಪಿಎಂಇ ವಿಧೇಯಕ ಮಂಡನೆಯಾಗಿದ್ದು, ಇದರ ಮೇಲಿನ ಚರ್ಚೆ ಕಾವೇರಲಿದೆ. ಈ ಮಧ್ಯೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತೂ ಚರ್ಚೆಯಾಗುವ ಸಾಧ್ಯತೆಗಳಿವೆ.

Today Winter Session will Discuss about KPME Bill

ಬೆಳಗಾವಿ (ನ.22): ಚಳಿಗಾಲದ ಅಧಿವೇಶನದ 8ನೇ ದಿನವಾದ ಇಂದು  ಬಿಸಿ ಬಿಸಿ ಚರ್ಚೆಗಳು ನಡೆಯಲಿವೆ. ನಿನ್ನೆ ಮಹತ್ವದ ಕೆಪಿಎಂಇ ವಿಧೇಯಕ ಮಂಡನೆಯಾಗಿದ್ದು, ಇದರ ಮೇಲಿನ ಚರ್ಚೆ ಕಾವೇರಲಿದೆ. ಈ ಮಧ್ಯೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತೂ ಚರ್ಚೆಯಾಗುವ ಸಾಧ್ಯತೆಗಳಿವೆ.

ಚಳಿಗಾಲದ ಅಧಿವೇಶನದ ಏಳನೇ ದಿನವಾದ ನಿನ್ನೆ ಸರ್ಕಾರದ ಕನಸಿನ ವಿಧೇಯಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧೇಯಕವನ್ನ ಮಂಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಈ ಕಾಯ್ದೆಯದ್ದೇ ಚರ್ಚೆ ನಡೆದಿತ್ತು. ಸಾಕಷ್ಟು ಮಂದಿ ಅಮಾಯಕರು ಇದೇ ವಿಧೇಯಕ ವಿಚಾರದಲ್ಲಿ ಬಲಿಯಾಗಿದ್ದಾರೆ.. ಈ ವಿಧೇಯಕ ಮಂಡನೆಯಾಗೋ ಬಗ್ಗೆಯೂ ಸಾಕಷ್ಟು ಅನುಮಾನುಗಳು ಹುಟ್ಟಿಕೊಂಡಿದ್ವು. ಕೊನೆಗೂ ಆರೋಗ್ಯ ಸಚಿವ ರಮೇಶಕುಮಾರ್ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ್ದಾರೆ..

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಲ್ಲಿನ ಜೈಲು ಶಿಕ್ಷೆ ಅಂಶವನ್ನ ತೆಗೆದು ಹಾಕುವ ಮೂಲಕ ಸರ್ಕಾರ ಖಾಸಗಿ ಆಸ್ಪತ್ರೆ ವೈದ್ಯರ ಒತ್ತಡಕ್ಕೆ ಮಣಿದಂತಾಗಿದೆ. ಉಳಿದಂತೆ ಚಿಕಿತ್ಸೆ ದರದ ಪಟ್ಟಿ ಹಾಕುವುದು, ಕುಂದು ಕೊರತೆಗಳ ಸಮಿತಿ ರಚನೆ ಅಂಶ ಕಾಯ್ದೆಯಲ್ಲಿದೆ. ಈ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಯಾಗಿ ಬಳಿಕ ಕಾಯ್ದೆಯಾಗಿ ಹೊರ ಹೊಮ್ಮ ಬೇಕಿದೆ. ವಿಪಕ್ಷಗಳು ಕೆಲ ಅಂಶಗಳ ಸೇರ್ಪಡೆಗೆ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಿದೆ.

 ಇನ್ನೂ 2004 - 2014 ರ ವರೆಗೆ ಇಂಧನ ಇಲಾಖೆಯಲ್ಲಿ ಅವ್ಯವಹಾರವಾಗಿದೆ.. ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ  ಮಾಡಿದ ತಪ್ಪಿನಿಂದ ೧,೫೯೦ ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಇಂಧನ ಸದನ ಸಮಿತಿ ವರದಿ ಸಲ್ಲಿಸಿದೆ.. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಫುಲ್ ಟಾರ್ಗೆಟ್ ಮಾಡಿದಂತೆ ಇದ್ದು.. ಇದು ಕೂಡ ಇಂದು ಗದ್ದಲಕ್ಕೆ ಕಾರಣವಾಗಬುಹುದು.. ಇದಲ್ಲದೇ ಮಹದಾಯಿ, ಕಳಸಾ ಬಂಡೂರಿ ಸೇರಿದಂತೆ.. ಉತ್ತರ ಕರ್ನಾಟಕದ ಕೆಲ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios