Asianet Suvarna News Asianet Suvarna News

ಮೇಲ್ಜಾತಿಗೆ ಮೀಸಲು ಮಸೂದೆಗೆ ರಾಜ್ಯಗಳು ಅಡ್ಡಿಯಾಗ್ತವಾ? ಸಂವಿಧಾನ ಏನೇಳುತ್ತೆ

ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಮೀಸಲು ಮಸೂದೆ ಲೋಕಸಭೆಯಲ್ಲಿ ಪಾಸ್  ಆಗಿದೆ. ರಾಜ್ಯಸಭೆಯಲ್ಲೂ ಅನುಮೋದನೆ ಪಡೆದುಕೊಳ್ಳುವುದು ಪಕ್ಕಾ.. ಇಷ್ಟಾದರೆ ಮಸೂದೆ ಕಾನೂನಾಗಿ ಬದಲಾಗುತ್ತದೆಯೇ?.  ರಾಜ್ಯಗಳಿಗೆ ಇದು ಸಂಬಂಧಿಸುತ್ತದೆಯಾ?...  ಉತ್ತರ ಇಲ್ಲಿದೆ.

To provide 10 Percent quota for General category Bill Explainer
Author
Bengaluru, First Published Jan 9, 2019, 7:19 PM IST

ನವದೆಹಲಿ[ಜ.09]  ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಆದರೆ ಸಾಕಾಗುವುದಿಲ್ಲ. ಇದಕ್ಕೆ  ಆಯಾ ರಾಜ್ಯಗಳು ತಮ್ಮ ಒಪ್ಪಿಗೆ ನೀಡಬೇಕಾಗುತ್ತದೆ.  ಒಟ್ಟು ಮೀಸಲಾತಿ ಪ್ರಮಾಣವು ಶೇ 50ರಷ್ಟನ್ನು ಮೀರಬಾರದು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೂ ಸಾಮಾನ್ಯ ವರ್ಗಕ್ಕೆ ಶೇ 10ರಷ್ಟು ಮೀಸಲು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅದು ಅಂಗೀಕಾರ ಆಗದು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಮೀಸಲಾತಿ ನೀಡಲು ಪ್ರಯತ್ನ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಒಂದು ವೇಳೆ ಸಾಮಾನ್ಯ ವರ್ಗದ ಬಡವರಿಗೆ ಶೇ. 10 ಮೀಸಲು ನೀಡುವ ಮಸೂದೆ ಸಂಸತ್ತಿನ ಎರಡು ಸದನಗಳಲ್ಲಿ ಪಾಸ್ ಆದ  ನಂತರ ಏನಾಗುತ್ತದೆ ಎಂಬುದನ್ನು ನೋಡಲೇಬೇಕು. ನಂತರ ಈ ಮಸೂದೆಗೆ  ದೇಶದ 30 ರಾಜ್ಯಗಳಲ್ಲಿ ಕನಿಷ್ಠ 15 ರಾಜ್ಯಗಳು ಈ ಮಸೂದೆ ಚರ್ಚೆ ಮಾಡಿ ಪಾಸ್ ಮಾಡಬೇಕಾಗುತ್ತದೆ. ಆಗ ಮಾತ್ರ ಕಾನೂನಾಗಿ ಜಾರಿಗೆ ಬರಲು ಸಾಧ್ಯ. ಆದರೆ ಇಲ್ಲಿ ಮತ್ತೊಂದು ಅಂಶಗಳನ್ನು ಗಮನಿಸಬೇಕು. ಸಂವಿಧಾನದ ಮೂಲ ಆಶಕ್ಕೆ ಧಕ್ಕೆ ಬರುತ್ತಿದೆ. ಮೂಲ ಆಶಯ ತಿದ್ದುಪಡಿ ಮಾಡಲಾಗುತ್ತಿದೆ ಎಂದಾಗ ಮಾತ್ರ ಮಸೂದೆ ರಾಜ್ಯ ಸರಕಾದ ಕಡೆ ಬರುತ್ತದೆ.

ಮೋದಿ ಮೀಸಲು ಅಸ್ತ್ರ: ಇಲ್ಲಿದೆ ಮಾಸ್ಟರ್‌ ಸ್ಟ್ರೋಕ್‌ನ ಕಂಪ್ಲೀಟ್ ಲೆಕ್ಕಾಚಾರ!

ಈ ಮಸೂದೆ ಕತೆ ಏನು? ಸಾಮಾಜಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲು ಬೇರೆ, ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲು ಬೇರೆ. ಇದು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವ ಮೀಸಲಾಗಿದೆ. ಸಂವಿಧಾನ ಮೀಸಲು ಪ್ರಮಾಣ ಶೇ. 50 ಮೀರಬಾರದು ಎಂದು ಹೇಳುತ್ತದೆ. ಒಂದು ವೇಳೆ  ಈ ಮಸೂದೆ ಕಾನೂನಾದರೂ ಆಶಯಕ್ಕೆ ತೊಡಕು ಬರುವುದಿಲ್ಲ. ಹಾಗಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಆದ ಮಸೂದೆ ಕಾನೂನಾಗುತ್ತದೆ.

 

 
Follow Us:
Download App:
  • android
  • ios