news
By Suvarna Web Desk | 05:14 PM January 12, 2018
ನೀವು ಪವರ್'ಫುಲ್ ರಾಷ್ಟ್ರವೇ ಇರಬಹುದು ಆದ್ರೆ ಭಾರತ ದುರ್ಬಲವಲ್ಲ: ಚೀನಾಗೆ ಭಾರತ ಉತ್ತರ

Highlights

ಚೀನಾ ಪ್ರಭಾವಶಾಲಿ ದೇಶವಾಗಿರಬಹುದು ಆದರೆ ಭಾರತ ದುರ್ಬಲ ದೇಶವಲ್ಲ. ನಮ್ಮ ಪ್ರದೇಶದೊಳಗೆ ಯಾರೊಬ್ಬರೂ ಆಕ್ರಮಣ ಮಾಡಲು ನಾವು ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇ

ನವದೆಹಲಿ (ಜ.12): ಚೀನಾ ಪ್ರಭಾವಶಾಲಿ ದೇಶವಾಗಿರಬಹುದು ಆದರೆ ಭಾರತ ದುರ್ಬಲ ದೇಶವಲ್ಲ. ನಮ್ಮ ಪ್ರದೇಶದೊಳಗೆ ಯಾರೊಬ್ಬರೂ ಆಕ್ರಮಣ ಮಾಡಲು ನಾವು ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಚೀನಾದ ಹಠಮಾರಿತನಕ್ಕೆ ಸೂಕ್ತ ಉತ್ತರ ಕೊಡಲು ಭಾರತ ಸಮರ್ಥವಾಗಿದೆ. ನೆರೆಯ ರಾಷ್ಟ್ರಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡಲು ನಾವು ಬಿಡುವುದಿಲ್ಲ. ಉತ್ತರ ಗಡಿ ಭಾಗದ ಕಡೆ ಇನ್ನಷ್ಟು ಗಮನ ಹರಿಸಲಿದ್ದೇವೆ ಎಂದು ರಾವತ್ ಹೇಳಿದ್ದಾರೆ.  ಭಯೋತ್ಪಾದನೆ ಬಗ್ಗೆ ಅಮೆರಿಕಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವುದನ್ನು ಬಿಪಿನ್ ರಾವತ್ ಉಲ್ಲೇಖಿಸುತ್ತಾ, ಇದರ ಪರಿಣಾಮವನ್ನು ಭಾರತ ಕಾದು ನೋಡುತ್ತದೆ ಎಂದಿದ್ದಾರೆ.

ಇದೀಗ ಸಿಬಿಆರ್‌ಎನ್ (ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಅಣು ಶಕ್ತಿ) ಶಸ್ತ್ರಾಸ್ತ್ರಗಳನ್ನು ಬಳಸುವುದು ಸಾಧ್ಯವೆಂದು ಹೇಳಿರುವ ಬಿಪಿನ್, ವಿಶ್ವ ವೇದಿಕೆಯ ನಿಷ್ಕ್ರಿಯ ರಾಷ್ಟ್ರಗಳು ಇವುಗಳನ್ನು ಬಳಸಲು ಸಶಕ್ತವಾಗಿವೆ. ಇದರ ಬಳಕೆಯಿಂದ ದೇಶದ ವಿತ್ತೀಯ ವ್ಯವಸ್ಥೆಗೆ ಧಕ್ಕೆ ತರುವುದಲ್ಲದೇ, ಜನರ ಆರೋಗ್ಯವನ್ನು ಹಾಳು ಮಾಡ ಬಹುದಾಗಿದ್ದು, ಇದರಿಂದ ಆ ದೇಶ ಸುಧಾರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ,' ಎಂದು ರಾವತ್ ಹೇಳಿದ್ದಾರೆ.

 

 

 

 

 

Show Full Article


Recommended


bottom right ad