Asianet Suvarna News Asianet Suvarna News

ಕಳ್ಳತನಕ್ಕೆ ಬಂದವರು ಸಿಸಿಟಿವಿಯಲ್ಲಿ ಸೆರೆ: ಸಿಸಿಟಿವಿ ನೋಡಿ ಖದೀಮರಿಗೆ ಗೂಸಾ ಕೊಟ್ಟ ಸ್ಥಳೀಯರು

ವೀಕೆಂಡ್​​ ಬಂತು ಅಂದ್ರೆ ಸಾಕು ಅಲ್ಲಿ  ಖರ್ತಾನಾಕ್​ ಕಳ್ಳರು ತಮ್ಮ ಕೈಚಳಕವನ್ನ ತೋರಿಸುತ್ತಿದ್ದರು. ಕಳ್ಳರ ಹಾವಳಿಯಿಂದ ರೋಸಿಹೋಗಿದ್ದ  ಆ ಮಂದಿ  ಕಳ್ಳರನ್ನು  ಹಿಡಿಯಲು ತಾವೇ CCTVಯನ್ನು ಅಳವಡಿಸಿಕೊಂಡಿದ್ದರು. ರಾತ್ರೋ ರಾತ್ರಿ ಸಿಕ್ಕಿಬಿಟ್ಟಿ ಕಳ್ಳನಿಗೆ ಆ ಏರಿಯಾದ ಜನ ಕೊಟ್ಟ ಭರ್ಜರಿ ಗಿಫ್ಟ್​ ಏನು ಗೊತ್ತಾ..? ಇಲ್ಲಿದೆ ನೋಡಿ ಈ ಕುರಿತಾದ ವಿವರ 

Thief Caught In CCTv

ಬೆಂಗಳೂರು(ಜು.17): ವೀಕೆಂಡ್​​ ಬಂತು ಅಂದ್ರೆ ಸಾಕು ಅಲ್ಲಿ  ಖರ್ತಾನಾಕ್​ ಕಳ್ಳರು ತಮ್ಮ ಕೈಚಳಕವನ್ನ ತೋರಿಸುತ್ತಿದ್ದರು. ಕಳ್ಳರ ಹಾವಳಿಯಿಂದ ರೋಸಿಹೋಗಿದ್ದ  ಆ ಮಂದಿ  ಕಳ್ಳರನ್ನು  ಹಿಡಿಯಲು ತಾವೇ CCTVಯನ್ನು ಅಳವಡಿಸಿಕೊಂಡಿದ್ದರು. ರಾತ್ರೋ ರಾತ್ರಿ ಸಿಕ್ಕಿಬಿಟ್ಟಿ ಕಳ್ಳನಿಗೆ ಆ ಏರಿಯಾದ ಜನ ಕೊಟ್ಟ ಭರ್ಜರಿ ಗಿಫ್ಟ್​ ಏನು ಗೊತ್ತಾ..? ಇಲ್ಲಿದೆ ನೋಡಿ ಈ ಕುರಿತಾದ ವಿವರ 

ಬೆಳಗಿನ ಜಾವ 3ರ ಸಮಯ ಬೀದಿನಾಯೊಂದು ಒಂದೇ ಸಮನೇ ಬೊಗಳುತ್ತಿತ್ತು. ಏರಿಯಾದಲ್ಲಿ ಏನೋ ಆಗುತ್ತಿದೆ ಅಂತ ಜನ ಮನೆಯಿಂದ ಹೊರ ಬಂದರು. ಬಂದವರೇ ತಕ್ಷಣ ತಾವೇ ಅಳವಡಿಸಿದ್ದ CCTVಯನ್ನು ಚೆಕ್ ಮಾಡಿದಾಗ ಅಕ್ಷರಶಃ ಶಾಕ್ ಕಾದಿತ್ತು.

ಇದು ಕೆ.ಆರ್.ಪುರ ಸಮೀಪದ ವಾರಣಾಸಿಯ ದೃಶ್ಯ. ಬೆಳಗಿನ ಜಾವ ಕಳ್ಳತನಕ್ಕೆ ಹವಣಿಸುತ್ತಿದ್ದ  ನೈಜೀರಿಯಾ ಮೂಲದ ಪ್ರಜೆ ಸಿನಿಯಾನ್ ಹಾಗೂ ರಾಜೇಶ್ ಅನ್ನಿಬ್ಬರು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದರು. CCTV ದೃಶ್ಯ ಆಧರಿಸಿ ಜನರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಖತರ್ನಾಕ್​ ಕಳ್ಳರ ಬಂಧನಕ್ಕೆ ನೆರವಾಗಿದ್ದೇ ಕಮ್ಯುನಿಟಿ ಪೊಲೀಸಿಂಗ್ ವ್ಯವಸ್ಥೆ. ಪೊಲೀಸರ ಜತೆ ಜನ ಕೈ ಜೋಡಿಸದಿದ್ದರೆ ಕಳ್ಳರ ಹಾವಳಿಯನ್ನು ತಡೆಯಬಹುದು ಎನ್ನುವುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ​​.

ಕೆ.ಆರ್.ಪುರ ಪೊಲೀಸರು ಕಳ್ಳರನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ತಮ್ಮ ಮನೆಗೆ ಸಿಸಿಟಿವಿ ಅಳವಡಿಸಿಕೊಳ್ಳೋದನ್ನ ಬಿಟ್ಟು ಸಾರ್ವಜನಿಕ ರಸ್ತೆಗೆ ಅಳವಡಿಸುವ ಮೂಲಕ ಮಾದರಿಯಾಗಿದ್ದಾರೆ. ಇದ್ರಿಂದ ಅಪರಾಧ ಕೃತ್ಯಗಳಿಗೆ ಜನರೇ ಕಡಿವಾಣ ಹಾಕ್ಬೋದು ಅನ್ನೋದನ್ನ ಸಾಬೀತು ಮಾಡಿದ್ದಾರೆ.

 

Follow Us:
Download App:
  • android
  • ios