Asianet Suvarna News Asianet Suvarna News

UPSC ಟಾಪರ್‌ಗಳ ಯಶಸ್ಸಿನ ಗುಟ್ಟು ರಟ್ಟು!

ಯುಪಿಎಸ್ಸಿ ಟಾಪರ್‌ಗಳು ಹೇಗೆ ಯಶಸ್ಸು ಗಳಿಸುತ್ತಾರೆ? ಅವರ ಹಿಂದಿನ ಆ ಸಾಧನೆಗೆ ಕಾರಣವೇನು? ಈ ಕುತೂಹಲಕಾರಿ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತವೆ. ಇದೀಗ ಈ ಟಾಪರ್ ಗಳ ಯಶಸ್ಸಿನ ಗುಟ್ಟು ಬಯಲಾಗಿದೆ. 

The Secret Behind The Success of UPSC Toppers Revealed
Author
Bangalore, First Published Apr 15, 2019, 7:46 AM IST

ನವದೆಹಲಿ[ಏ.15]: ಇತ್ತೀಚಿನ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆ ಬರೆದವರ ಯಶಸ್ಸಿನ ಗುಟ್ಟೇನು ಗೊತ್ತೇ? ಫೇಸ್‌ಬುಕ್‌, ಟ್ವೀಟರ್‌ನಂತಹ ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವುದು.

- ನಿಜ. ಇದು ಯುಪಿಎಸ್ಸಿ ತೇರ್ಗಡೆಯಾಗಿ ಐಎಎಸ್‌, ಐಪಿಎಸ್‌ನಂತಹ ಮಹತ್ವದ ಹುದ್ದೆಗಳನ್ನು ಅಲಂಕರಿಸಹೊರಟಿರುವ ಪ್ರತಿಭಾವಂತರಿಂದಲೇ ವ್ಯಕ್ತವಾಗಿರುವ ಸಂಗತಿಯಾಗಿದೆ. ಸ್ಮಾರ್ಟ್‌ ಮೊಬೈಲ್‌ ಫೋನು, ಸೋಷಿಯಲ್‌ ಮೀಡಿಯಾದಂತಹ ಗೀಳು ಹಚ್ಚಿಕೊಂಡಿರುವವರಿಗೆ ಇದು ಮಹತ್ವದ ಜೀವನ ಪಾಠವಾಗಿದೆ.

ಯುಪಿಎಸ್ಸಿ ಆಲ್‌ ಇಂಡಿಯಾ ಟಾಪರ್‌ ಆಗಿರುವ ಕಾನಿಷ್‌್ಕ ಕಟಾರಿಯಾ, ‘ಟ್ವೀಟರ್‌, ಫೇಸ್‌ಬುಕ್‌ನಂತಹ ಮಾಧ್ಯಮಗಳನ್ನು ನಾನು ನಿಷ್ಕಿ್ರಯಗೊಳಿಸಿದ್ದೇನೆ. ನಾನು ಇರುವುದು ಇನ್‌ಸ್ಟಾಗ್ರಾಂನಲ್ಲಿ ಮಾತ್ರ. ಅದನ್ನೂ ನಾನು ನೋಡುವುದು ತುಂಬಾ ಕಡಿಮೆ. ಕೆಲವು ಆತ್ಮೀಯರ ಜತೆ ಮಾತ್ರ ಅದರಲ್ಲಿ ಸಂಪರ್ಕದಲ್ಲಿದ್ದೇನೆ. ಸಾಮಾಜಿಕ ಮಾಧ್ಯಮ ನೋಡುವುದು ಟೈಮ್‌ ವೇಸ್ಟ್‌’ ಎನ್ನುತ್ತಾರೆ ಎಂದು ಆಂಗ್ಲ ಪತ್ರಿಕೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

4ನೇ ರಾರ‍ಯಂಕ್‌ ವಿಜೇತ ರಾಜಸ್ಥಾನದ ಶ್ರೇಯಾಂಶ್‌ ಕುಮಾತ್‌ ಕೂಡ ಇದೇ ಹಾದಿ ಹಿಡಿದಿದ್ದಾರೆ. ಅಂತೆಯೇ 5ನೇ ರಾರ‍ಯಂಕ್‌ ವಿಜೇತೆ, ಭೋಪಾಲದ ಸೃಷ್ಟಿದೇಶಮುಖ್‌ ಹಾಘೂ ಬಿಲಾಸ್‌ಪುರದ 13ನೇ ರಾರ‍ಯಂಕ್‌ ವಿಜೇತ ವನ್ರೀತ್‌ ನೇಗಿ.

17ನೇ ರಾರ‍ಯಂಕ್‌ ಪಡೆದ ಹುಬ್ಬಳ್ಳಿಯ ರಾಹುಲ್‌ ಶರಣಪ್ಪ ಸಂಕನೂರ ಅವರದ್ದು ಇನ್ನೊಂದು ರೀತಿಯ ವಿಶೇಷ. ಅವರ ಹತ್ತಿರ ಈವರೆಗೆ ಸ್ಮಾರ್ಟ್‌ಫೋನ್‌ ಕೂಡ ಇರಲಿಲ್ಲ. ‘ನಾನು ಈಗ ಸ್ಮಾರ್ಟ್‌ಫೋನ್‌ ಇಟ್ಟುಕೊಂಡಿದ್ದೇನೆ’ ಎಂದು ಅವರು ಹೇಳಿದರು.

ಕೆಲವರು ಉಂಟು:

ಹಾಗಂತ ಎಲ್ಲ ವಿಜೇತರು ಸಾಮಾಜಿಕ ಮಾಧ್ಯಮದಿಂದ ಶೇ.100ರಷ್ಟುಹೊರಗಿದ್ದಾರೆ ಎನ್ನುವಂತಿಲ್ಲ. 10ನೇ ರಾರ‍ಯಂಕ್‌ ಪಡೆದ ತನ್ಮಯ್‌ ಶರ್ಮಾ ‘ನಾನು ಟ್ವೀಟರ್‌ ಬಳಸಲ್ಲ. ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ ಬಳಸುತ್ತೇನೆ. ಯೂಟ್ಯೂಬ್‌ನಲ್ಲಿ ರಾಜ್ಯಸಭಾ ಕಲಾಪ ನೋಡುತ್ತೇನೆ’ ಎಂದು ಹೇಳುತ್ತಾರೆ.

ಜೈಪುರದ ಅಕ್ಷತ್‌ ಜೈನ್‌ ಅವರು, ‘ನಾನು ವಾಟ್ಸಪ್‌ ಬಳಸುತ್ತೇನೆ. ಇದರಲ್ಲಿ ಸ್ಟಡಿ ಗ್ರೂಪ್‌ ಇದ್ದು, ನನಗೆ ಸಹಾಯವಾಗುತ್ತದೆ ಎಂದು ಹೇಳುತ್ತಾರೆ. ಕೆಲವು ನಿಮಿಷ ಮಾತ್ರ ಫೇಸ್‌ಬುಕ್‌ ಬಳಸುತ್ತೇನೆ. ಇದು ನನಗೆ ಫ್ರೆಶಪ್‌ ಆಗಲು ಸಹಕಾರಿ’ ಎನ್ನುತ್ತಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios