Asianet Suvarna News Asianet Suvarna News

ನೆರೆ ಪರಿಹಾರಕ್ಕೆ ಸರ್ಕಾರದಲ್ಲಿ ಹಣ ಇಲ್ಲ: ಕೊನೆಗೂ ಸತ್ಯ ಒಪ್ಪಿಕೊಂಡ ಯಡಿಯೂರಪ್ಪ

ರಾಜ್ಯ ಸರ್ಕಾರ ನೆರೆ ನಿರಾಶ್ರಿತರಿಗೆ ಅತ್ಯುತ್ತಮ ಪರಿಹಾರ ನೀಡಲಿದೆ. ಯಾರೂ ಅನ್ಯಥಾ ಭಾವಿಸಬೇಕಿಲ್ಲ ಯಡಿಯೂರಪ್ಪನವರು ನೆರೆ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಅಂತೆಲ್ಲಾ ಹೋದಲ್ಲಿ ಬಂದಿಲ್ಲಿ ಹೇಳಿಕೆ ಕೊಡುತ್ತಿದ್ದ ಸಚಿವರುಗಳ ಮತುಗಳೆಲ್ಲ ಸುಳ್ಳು ಎನ್ನುವುದು ಸಾಬೀತಾಗಿದೆ. ಇಷ್ಟು ದಿನ ಅವರು ಬರೀ ಪುಂಗಿ ಊದಿದ್ದಾರೆ. ಯಾಕಂದ್ರೆ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಸ್ವತಃ ಸಿಎಂ ಅವರೇ ಒಪ್ಪಿಕೊಂಡಿದ್ದಾರೆ. 

The government does not have money to provide flood relief Says CM BS Yediyurappa
Author
Bengaluru, First Published Oct 3, 2019, 10:03 PM IST

ಬೆಳಗಾವಿ, [ಅ.03]:  ರಾಜ್ಯದಲ್ಲಿ ಉಂಟಾಗಿರುವ ನೆರೆ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಹೇಳಿಕೊಂಡು ಸುತ್ತಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಸಲಿ ಮಾತು ಬಯಲಾಗಿದೆ.

"

 ನೆರೆಗೆ ಖರ್ಚು ಮಾಡಲು ಸರ್ಕಾರ ಬಳಿ ಹಣ ಇಲ್ಲ ಎಂದು ಸ್ವತಃ ಯಡಿಯೂರಪ್ಪನವರೇ ಸತ್ಯ ಒಪ್ಪಿಕೊಂಡಿದ್ದಾರೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ. ಇಂದು [ಗುರುವಾರ] ನೆರೆ ಹಾನಿ ಬಗ್ಗೆ ಬೆಳಗಾವಿಯ ಜಿಪಂ ಸಭಾಗಂಣದಲ್ಲಿ ನಡೆದ ಸಭೆಯಲ್ಲಿ ಯಡಿಯೂಪ್ಪ ಅವರು ಈ ಸತ್ಯಾಂಶವನ್ನು ಹೊರಹಾಕಿದರು. 

ನೆರೆ ಪರಿಹಾರ ತನ್ನಿ ಎಂದಿದಕ್ಕೆ ಚಕ್ರವರ್ತಿ ವಿರುದ್ಧ ಸಿಂಹ ಘರ್ಜನೆ

ಸಭೆಯಲ್ಲಿ ಬೆಳೆ ಪರಿಹಾರ ಬಗ್ಗೆ ಪ್ರಶ್ನಿಸಿದ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ, ಕೇಂದ್ರ ಸರ್ಕಾರ ನೀಡಿದ ಹಣದ ಜತೆಗೆ ರಾಜ್ಯ ಸರ್ಕಾರದ ಹಣ ಸೇರಿಸಿ ಕೊಡಿ ಎಂದು ಯಡಿಯೂರಪ್ಪ ಬಳಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್ ವೈ, ಹೇ‌ ಮಾಮನಿ ನಿನಗೆ ಸೂಕ್ಷ್ಮವಾಗಿ ಒಂದು ಮಾತು ಹೇಳುತ್ತೇನೆ ಕೇಳು‌. ಎಲ್ಲಿದೆ ರಾಜ್ಯ ಸರ್ಕಾರದಲ್ಲಿ ಹಣ? ಎಲ್ಲಾ  ಖಾಲಿಯಾಗಿದೆ ಎಂದು ಅಸಹಾಯಕತೆಯಿಂದ ಹೇಳಿದರು. 

ಪ್ರವಾಹ ಸಂಭವಿಸಿ ಎರಡು ತಿಂಗಳುಗಳು ಕಳೆಯುತ್ತಾ ಬಂತು ಕೇಂದ್ರ ಸರ್ಕಾರದಿಂದ ತಂಡ ಬಂತು, ಖುದ್ದು ಗೃಹ ಸಚಿವ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ನೋಡಿಕೊಂಡು ಹೋದರು. ಆದ್ರೆ, ಅದರ ಬಗ್ಗೆ ಇದುವರೆಗೂ ತುಟಿಕ್-ಪಿಟಿಕ್ ಅಂದಿಲ್ಲ. ಇದ್ರಿಂದ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ನೀಡುವ ಪರಿಹಾರವೊಂದರಿಂದಲೇ ಸಂತ್ರಸ್ತರ ಬದುಕನ್ನು ಸರಿ ಮಾಡಲು ಸಾಧ್ಯವೇ?

ಮೋದಿಯವರಿಗೆ ಕರ್ನಾಟಕ ಅಂದ್ರೆ ಏಕೆ ಇಷ್ಟು ನಿರ್ಲಕ್ಷ್ಯ? ಅಂತೆಲ್ಲ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸಂಸದರು ಮಾತ್ರ ರಾಜ್ಯದಲ್ಲಿ ಯಡಿಯೂರಪ್ಪನವರು ನೆರೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರುವುದು ಸ್ವಲ್ಪ ತಡವಾಗುತ್ತೆ ಅಂತೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದಾರೆ.

ಕೇಂದ್ರ ಸರ್ಕಾರದ ಹಣ ಬೇಕಿಲ್ಲ ಎಂದು ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios