Asianet Suvarna News Asianet Suvarna News

ರಂಗಭೂಮಿಯ ಬಹುಪ್ರತಿಭೆ ನಯನಾ

ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಗಂಡಸರಿಗಿಂತ ಕಡಿಮೆ ಇಲ್ಲ. ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ಸಾಧಿಸಬಲ್ಲರು. ಕ್ರೀಡೆ, ಸಿನಿಮಾ, ರಂಗಭೂಮಿ, ಸೇನೆ, ಕಲೆ, ಶಿಕ್ಷಣ ಹೀಗೆ ಹಲಾವಾರು ಕ್ಷೇತ್ರಗಳಲ್ಲಿ ಮಹಿಳೆಯರು ಹೆಸರು ಮಾಡಿದ್ದಾರೆ. ಸುವರ್ಣ ನ್ಯೂಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ  ಹುಡುಕಾಟ ನಡೆಸಿತ್ತು. ಇಂತಹ ಸಾಧಕಿಯರಲ್ಲಿ  ನಾಮ ನಿರ್ದೇಶನಗೊಂಡವರಲ್ಲಿ ನಯನ ಸೂಡಾ ಒಬ್ಬರು.

SuvarnaNews KannadaPrabha Women Award 2017

ಮಹಿಳೆಯರು ಅಬಲೆಯರಲ್ಲ, ಸಬಲೆಯರು. ಗಂಡಸರಿಗಿಂತ ಕಡಿಮೆ ಇಲ್ಲ. ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ಸಾಧಿಸಬಲ್ಲರು. ಕ್ರೀಡೆ, ಸಿನಿಮಾ, ರಂಗಭೂಮಿ, ಸೇನೆ, ಕಲೆ, ಶಿಕ್ಷಣ ಹೀಗೆ ಹಲಾವಾರು ಕ್ಷೇತ್ರಗಳಲ್ಲಿ ಮಹಿಳೆಯರು ಹೆಸರು ಮಾಡಿದ್ದಾರೆ. ಸುವರ್ಣ ನ್ಯೂಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ  ಹುಡುಕಾಟ ನಡೆಸಿತ್ತು. ಇಂತಹ ಸಾಧಕಿಯರಲ್ಲಿ  ನಾಮ ನಿರ್ದೇಶನಗೊಂಡವರಲ್ಲಿ ನಯನ ಸೂಡಾ ಒಬ್ಬರು.

ರಂಗಭೂಮಿ (ಥಿಯೇಟರ್) ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ , ರಂಗಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಅಯಾ ಜನಾಂಗ,ದೇಶ,ಪ್ರದೇಶಗಳ ರಂಗಭೂಮಿ ರೂಪುಗೊಂಡುದುದನ್ನು ನಾವು ಕಾಣಬಹುದು.. ಈ ಕ್ಷೇತ್ರದಲ್ಲಿ  ಚಿಕ್ಕವಯಸಿನಿಂದಲು ನಾಟಕಗಳಲ್ಲಿ ಅಪಾರ ಹೆಸರು ಗಳಿಸಿದ್ದಾರೆ ನಯನ ಸೂಡ.. ಏಳು ವರ್ಷ ಇದ್ದಾಗ ರಂಗ ಭೂಮಿ ಪ್ರವೇಶಿಸಿದ್ರು.. ಅಂದಿನಿಂದ ಹಿಡಿದು ಇಂದಿನ ವರೆಗು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸತತವಾಗಿ 20 ವರ್ಷ ರಂಗಭೂಮಿಯಲ್ಲಿ ಸಾಧನೆ ಮಾಡಿಕೊಂಡು ಬಂದಿದ್ದಾರೆ.

ಇನ್ನು ದೇಶದಾದ್ಯಂತ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದಾರೆ. ಇವರು ಹತ್ತನೆ ತರಗತಿಯವರೆಗೆ ಹುಡುಗನ ಪಾತ್ರ ನಿರ್ವಹಿಸಿದರು. ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನ ನೀಡಿದ್ದಾರೆ.. ಇವರಿಗೆ ಅತ್ಯುತಮ ಬಾಲ ನಟನ ಪ್ರಶಸ್ತಿ ಲಭಿಸಿವೆ.  ರಾಜ್ಯ ಮಟ್ಟದಲ್ಲೂ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಇವರು ಪ್ರಶಸ್ತಿಯನ್ನ ಗಳಿಸಿದ್ದಾರೆ. ಇವರು ಹಲವಾರು ನಾಟಕಗಳ ನಿರ್ದೇಶನ ಕೂಡ ಮಾಡಿದ್ದಾರೆ. ನಾಟಕಕ್ಕೆ ಸೆಟ್ ಹಾಕುವುದು, ಮೇಕಪ್ ಮಾಡುವುದು, ವಸ್ತ್ರ ವಿನ್ಯಾಸ ಮಾಡುವುದು ಹೀಗೆ ರಂಗಭೂಮಿಯ ಹಲವಾರು ಕೆಲಸಗಳನ್ನು ಇವರೇ ಮಾಡುತ್ತಾರೆ. ಇವರ ಸಾಧನೆಗೆ ಬೆನ್ಗಾವಲಾಗಿ ಕುಟುಂಬದವರು ಸಾಥ್ ನೀಡಿದ್ದಾರೆ.

ಸಿನಿಮಾಗಳು ಹೆಚ್ಚುತ್ತಿರುವುದರಿಂದ ರಂಗಭೂಮಿ ಮರೆ ಮಾಚುತ್ತಿರುವ ಈ ಸಮಯದಲ್ಲಿ  ರಂಗಭೂಮಿಯಲ್ಲಿ ಅಪಾರ ಸಾದನೆ ಮಾಡಿದ ನಯನ ಸೂಡ ವರಿಗೆ ಸುವರ್ಣ ನ್ಯೂಸ್ ಕಡೆಯಿಂದ ಸಲಾಂ..

Follow Us:
Download App:
  • android
  • ios